ಆಳಂದ: ಧಂಗಾಪೂರ ಗ್ರಾ.ಪಂ ಬಿಜೆಪಿ ಬೆಂಬಲಿತರ ತೆಕ್ಕೆಗೆ

0
23

ಆಳಂದ: ತಾಲೂಕಿನ ಧಂಗಾಪೂರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಲಕ್ಷ್ಮೀಬಾಯಿ ಶರಣಪ್ಪ  ಮೇಲಿನಕೇರಿ ಆಯ್ಕೆಯಾದರು.

ಈ ಹಿಂದಿನ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದ್ದರಿಂದ ಗುರುವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲಕ್ಷ್ಮೀಬಾಯಿ ೮  ಮತ ಪಡೆಯುವುದರ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು.

Contact Your\'s Advertisement; 9902492681

ಆಯ್ಕೆಯಾದ ನಂತರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ವಿಜಯೋತ್ಸವದಲ್ಲಿ ಮುಖಂಡರಾದ ಶೇಷಗಿರಿರಾವ ಕುಲಕರ್ಣಿ ಬಟ್ಟರಗಾ,  ಸಂತೋಷ ಹಾದಿಮನಿ, ದೇವಿಂದ್ರ ಮೇಲ್ಕೇರಿ, ಅಮೃತ ಬಿಬ್ರಾಣಿ, ಕಲ್ಯಾಣರಾವ ಪಾಟೀಲ, ನಾಗರಾಜ ಶೇಗಜಿ, ಕಲ್ಯಾಣಿ ದೊಡ್ಡಮನಿ, ಗುಂಡಪ್ಪ ಪೂಜಾರಿ, ಶರಣು ಸರಸಂಬಿ, ದೊಂಡಿಭಾ ಪೂಜಾರಿ, ರಾಹುಲ ಕುಲಕರ್ಣಿ, ಬಾಬುರಾವ ಕಣ್ಣಿ, ಜಗನ್ನಾಥ ಪೂಜಾರಿ, ಯಲ್ಲಾಲಿಂಗ ಮಂಗಾಣೆ, ವಿದ್ಯಾಧರ ಕುಂಬಾರ

ತಹಸೀಲದಾರ ಯಲ್ಲಪ್ಪ ಸುಭೇದಾರ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ನಿಂಬರ್ಗಾ ಠಾಣೆಯ ಪಿಎಸ್‌ಐ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here