ನಕಲಿ ಬಿತ್ತನೆ ಬೀಜ ಹಾವಳಿ ತಡೆಯಲು ಸಿರಗಾಪೂರ ಆಗ್ರಹ

0
22

ಕಲಬುರಗಿ:ಜಿಲ್ಲೆಯಾದ್ಯಂತ ನಕಲಿ ಬಿತ್ತನೆ ಬೀಜ ಮತ್ತು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ರಸ ಗೊಬ್ಬರಗಳನ್ನು ರೈತರಿಗೆ ಮಾರಾಟ ಮಾಡುತ್ತಿದ್ದು, ರೈತರು ಮೋಸ ಹೋಗುತ್ತಿದ್ದಾರೆ.ಕೂಡಲೇ ಇದನ್ನು ತಡೆಗಟ್ಟಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈಗಾಗಲೇ ಕೇಲವು ಕಡೆ ಮುಂಗಾರು ಮಳೆ ಬಿದ್ದಿದ್ದರಿಂದ ರೈತರು ಬಿತ್ತನೆ ಮಾಡಿದ್ದಾರೆ.ಕೆಲವು ದುಷ್ಟ ಶಕ್ತಿಗಳು ನಕಲಿ ಹೆಸರು,ಉದ್ದು ಹಾಗೂ ಸೋಯಾ ಬಿತ್ತನೆ ಬೀಜಗಳನ್ನು ರೈತರಿಗೆ ಮಾರಾಟ ಮಾಡಿದ್ದರಿಂದ ಬಿತ್ತನೆಯಾಗಿ ಎರಡು ವಾರ ಕಳೆದರೂ ನಾಟಿ ಎದ್ದಿಲ್ಲ.ಹಲವು ಕಡೆ ಫಸಲು ಒಣಗಲಾರಂಭಿಸಿವೆ.ಇದರಿಂದ ರೈತರು ಕಂಗಾಲಾಗಿದ್ದಾರೆ.

Contact Your\'s Advertisement; 9902492681

ಮಾರುಕಟ್ಟೆಗಳಲ್ಲಿ ನಕಲಿ ಬಿತ್ತನೆ ಬೀಜ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದರು ಕೃಷಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಎಕರೆಗೆ ಬೀಜ ಮತ್ತು ರಸಗೊಬ್ಬರಕ್ಕಾಗಿ ಸುಮಾರು 5ರಿಂದ 10 ಸಾವಿರ ಖರ್ಚು ಮಾಡಿದ ರೈತರು ನಷ್ಟ ಅನುಭವಿಸುವಂತಾಗಿದೆ.ಪ್ರತಿ ಬಾರಿ ಖರೀದಿ ಸಮಯದಲ್ಲಿ ರೈತರು ಎಷ್ಟೇ ಎಚ್ಚರಿಕೆ ವಹಿಸಿದ್ದರೂ ಫರ್ಟಿಲೈಜರ್ ಅಂಗಡಿ ಮಾರಾಟಗಾರರು ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಸರಿಯಾದ ಸಮಯಕ್ಕೆ ಬೀಜಗಳು ಮತ್ತು ರಸಗೊಬ್ಬರಗಳನ್ನು ನೀಡುವುದಿಲ್ಲ. ಇದರಿಂದ ರೈತರು ಮಾರುಕಟ್ಟೆಯಲ್ಲಿ ಖರೀದಿಸುವುದು ಅನಿವಾರ್ಯವಾಗಿದೆ. ಸರ್ಕಾರ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜಗಳು ನೀಡಬೇಕು.ಇನ್ನು ರಸಗೊಬ್ಬರಗಳು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಎಂ.ಆರ್.ಪಿ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ.ಇದನ್ನು ಪ್ರಶ್ನಿಸಿದರೆ ದಾಸ್ತಾನು ಕೊರತೆ ಕಾರಣ ನೀಡುತ್ತಾರೆ.ಇಷ್ಟೇಲ್ಲಾ ನಡೆಯುತ್ತಿದ್ದರೂ ಕೃಷಿ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ.ಆದ್ದರಿಂದ ಜಿಲ್ಲಾಧಿಕಾರಿ ಕ್ರಮಕ್ಕೆ ಮುಂದಾಗಬೇಕು.ನಕಲಿ ಬೀಜ ಮಾರಾಟ ತಡೆದು ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆಗೆ ಗುರಿ ಪಡಿಸಬೇಕು.ಇಲ್ಲದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here