ಕಲಬುರಗಿ: ಉನ್ನತ ವ್ಯಾಸಂಗದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಸಂಶೋಧನ ಆಲೋಚನೆ ಬೆಳೆಸುಕೊಂಡರೆ ಆಳವಾಗಿ ಅಧ್ಯಯನ ಮಾಡಬಹುದು. ಅದಕ್ಕಾಗಿಯೇ ಸ್ಥಳೀಯ ಖಾಜಾ ಬಂದಾನವಾಜ ವಿಶ್ವವಿದ್ಯಾಲಯವು ಭಾರತದಲ್ಲಿಯೇ ಮೊದಲ ಬಾರಿ ವಿಭಿನ್ನ ಪರೀಕ್ಷಾ ವಿಧಾನಗಳನ್ನು ಅಳವಡಿಸಿದೆ ಎಂದು ಕೆ.ಬಿ.ಎನ್ ದರ್ಗಾದ ಪೀಠಾಧಿಪತಿ, ಖಾಜಾ ಬಂದಾನವಜ ವಿಶ್ವವಿದ್ಯಾಲಯದ ಕುಲಪತಿ ಡಾ. ಸಯ್ಯದ್ ಶಾಹ್ ಖುಸ್ರೋ ಹುಸ್ಸೇನಿ ನುಡಿದರು.
ಅವರು ಶುಕ್ರವಾರ ಕೇಬಿಎನ್ ವಿವಿಯ ಮಾಜಿ ಉಪಕುಲಪತಿ ಬಿಳ್ಕೊಡುಗೆ ಹಾಗೂ ನೂತನ ಉಪಕುಲಪತಿಯ ಸ್ವಾಗತ ಸಮಾರಂಭವನ್ನು ಉದ್ದೇಶಿ ಮಾತನಾಡುತ್ತಿದ್ದರು.
ಶಿಕ್ಷಣ ಎಂದರೆ ಕೇವಲ ನಿಗದಿತ ಪಠ್ಯ ವನ್ನು ಪೂರ್ಣಗೊಳಿಸುವುದಲ್ಲ. ಅವರಲ್ಲಿ ಮೌಲ್ಯಗಳನ್ನು ಬಿತ್ತುವುದು, ವಿಭಿನ್ನ ಕಲಿಕೆಗಳಲ್ಲಿ ಆಸಕ್ತಿ ಕೆರಳಿಸುವುದು, ನೈತಿಕತೆ ಮನುಷ್ಯತ್ವ, ಇವೆಲ್ಲ ಶಿಕ್ಷಣದ ಅವಿಭಾಜ್ಯ ಅಂಗಗಳು. ನಾನು ಖಾಜಾ ಬನಾದನವಾಜ ವಿಶ್ವವಿದ್ಯಾಲಯದಲ್ಲಿ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ಬಯಸುತ್ತೇನೆ. ಕೆಬಿಎನ್ ವಿವಿಯ ಸಿಬ್ಬಂದಿ ವಿದ್ಯಾರ್ಥಿಗಳ ಜೊತೆ ಯಾವುದೇ ಪ್ರಾಜೆಕ್ಟ್ ಮಾಡಬೇಕು. ನಾವು ಕಂಡಂತೆ ಈಗ ಗುರು ಶಿಷ್ಯರ ಸಂಬಂಧ ಬದಲಾಗಿದೆ. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸ್ನೇಹಮಾಯಿಯಾಗಿದ್ದರೆ ಸ್ರ ಜನಶೀಲವಾಗಿ ಕಲಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಮಾಜಿ ಉಪಕುಲಪತಿ ಪ್ರೊ. ಪಠಾಣರ ಕಾರ್ಯ ಶ್ಲಾಘನೀಯ. ನಾನು ಅವರಿಗೆ ಖಾಜಾ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡಲು ಆಹ್ವಾನ ನೀಡುತ್ತೇನೆಂದರು. ಕಲಸಚಿವ ಪ್ರೊ. ರಾಜಸಾಹೇಬ ಅವರ ಕಾರ್ಯವೂ ಕೂಡ ನನಗೆ ತೃಪ್ತಿ ನೀಡಿದೆ. ಎಂದು ಹೇಳಿದರು.
ಕೆಬಿಎನ್ ವಿವಿಯ ನೂತನ ಉಪ್ ಕುಲಪತಿಯದ ಪ್ರೊಫ್. ಅಲಿ ರಜಾ ಮೂಸ್ವಿ ಇವರು, ಒಂದು ಹೊಸ ವಿಶ್ವವಿದ್ಯಾಲಯವು ಸದೃಢವಾಗಿ ಬೆಳೆಯಬೇಕೆಂದರೆ ಎಲ್ಲರೂ ಶ್ರಮಪಡಬೇಕು. ಕುಲಪತಿಯವರು ವಿವಿಗೆ ಅವಶ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದಾರೆ.
ಈಗ ಅದನ್ನು ಮುಂದಿನ ಮಟ್ಟಕ್ಕೆ ತರಲು ನಾವೆಲ್ಲ ದುಡಿಯೋಣ. ನಾನು ಈ ವಿವಿಯ ಏಳಿಗೆಗಾಗಿ ಶ್ರಮಿಸುವೆ. 2020ರ ವರದಿಯ ಪ್ರಕಾರ ಭಾರತದಲ್ಲಿ 1050 ವಿವಿಗಳ ಪೈಕಿ 400 ಖಾಸಗಿ ವಿವಿಗಳಿವೆ. ಉನ್ನತ ವ್ಯಾಸಂಗದಲ್ಲಿರುವ 40 ಮಿಲಿಯನ್ ವಿದ್ಯಾರ್ಥಿಗಳಲ್ಲಿ 22 ಮಿಲಿಯನ್ ಗೂ ಅಧಿಕ ವಿದ್ಯಾರ್ಥಿಗಳು ಖಾಸಗಿ ವ್ವಿಯಲ್ಲಿ ಜ್ಞಾನ ಪಡೆಯುತ್ತಿದ್ದಾರೆ. ಯುವಜನರಿಗೆ ಶಿಕ್ಷಣ ನೀಡುವುದು ಒಂದು ರಾಷ್ಟ್ರೀಯ ಚಟುವಟಿಕೆ. ಯುವಜನರು ಶೈಕ್ಷಣಿಕವಾಗಿ ಬಲಿಷ್ಠರಾದರೆ ಒಂದು ಒಳ್ಳೆಯ ರಾಷ್ಟ್ರ ನಿರ್ಮಾಣಮಾಡಬಹುದು. ಎಂದು ಅಭಿಪ್ರಾಯಪಟ್ಟರು.
ತಮ್ಮ ಅಧಿಕಾರ ಅವಧಿ ಪೂರ್ಣಗೊಳಿಸಿದ ಕೇಬಿನ್ ವಿವಿಯ ಮಾಜಿ ಉಕುಲಪತಿಗಳಾದ ಪ್ರೊಫ್ ಪಠಾಣ ಇವರು ತಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಕ್ಕಾಗಿ ಕಿಬಿನ್ ವಿವಿಯ ಕುಲ್ಪತಿಗಳಿಗೆ ಧನ್ಯವಾದ ಹೇಳಿದರು.
ಪ್ರೊ. ಮೊಸ್ವಿ ಯೊಂದಿಗೆ ನಾನು ಸುಮಾರು 20 ವರ್ಷಗಳಿಂದ ಕೆಲಸ ಮಾಡಿದ್ದೇನೆ. ಅವರು ಪ್ರಾಮಾಣಿಕ, ಶ್ರಮಜೀವಿ, ಹಾಗೂ ಚಟುವಟಿಕೆಯ ದಕ್ಷ ಅಧಿಕಾರಿ. ಅವರು ಕೇಬಿನ್ ವಿವಿಯನ್ನು ತುಂಬಾ ದೊಡ್ಡಮಟ್ಟಕ್ಕೆ ಕರೆದೋಯುತ್ತಾರೆ ಎಂದು ನೂತನ ಉಪಕುಲಪತಿಯನ್ನು ಶ್ಲಾಘಸಿದರು.
ಪ್ರಾರಂಭದಲ್ಲಿ ಫೋಜಿಯಾ ಘಜಲ ಪ್ರಾರ್ಥನೆಯನ್ನು ಪ್ರಸ್ತುತ ಪಡಿಸಿದರೆ, ಡೀನ್, ಕಲಾ, ಮಾನವಿಕತೆ, ಭಾಷಾ, ಸಾಮಾಜಿಕ ವಿಜ್ಞಾನ ಹಾಗೂ ವಿಜ್ಞಾನ ನೀಕಾಯ್ ಡಾ ನಿಶಾತ್ ಅರೀಫ್ ಹುಸೇನಿ ಅತಿಥಿಯರನ್ನು ಸ್ವಾಗತಿಸಿದರು. ಡೀನ್, ಔಷಧೀಯ ನೀಕಾಯ್ ಡಾ ಸಿದ್ದೇಶ್ ಸಿರವಾರ ಪರಿಯಿಸಿದರೆ, registrar ಡಾ ರುಕ್ಸರ್ ಫಾತಿಮಾ ವಂದಿಸಿದರು.
ವಿವಿಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆಬಿಎನ್ ವಿವಿಯ ಎಲ್ಲ ನಿಕಾಯದ್ ಡೀನರು, ಎಲ್ಲ ವಿಭಾಗದ ಮುಖ್ಯಸ್ಥರು, ಸಮಸ್ತ ವಿವಿಯ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಹಾಜರಿದ್ದರು.