ಕಲಬುರಗಿ: ಭೀಕರ ಅಪಘಾತ ಮೂವರ ದುರ್ಮರಣ

0
523

ಕಲಬುರಗಿ: ಜೇವರ್ಗಿ ತಾಲ್ಲೂಕಿನ ಕಟ್ಟಿ ಸಂಗಾವಿ ಬ್ರಿಡ್ಜ್ ಬಳಿ ಹಸನಾಪುರ ಕ್ರಾಸ್ ಹತ್ತಿರ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಜೇವರ್ಗಿ ತಾಲ್ಲೂಕಿನ ಹಿಪ್ಪರಗಾ ಎಸ್ ಎನ್ ಗ್ರಾಮದ ಮೂವರು ಯುವಕರು ದುರ್ಮರಣ ಹೊಂದಿದ್ದಾರೆ. ರಾತ್ರಿ 9ಗಂಟೆಯ ಸುಮಾರಿಗೆ ಹಸನಾಪುರ ಕ್ರಾಸ್ ಬಳಿ ಲಾರಿ ಕೆಟ್ಟು ನಿಂತಿತ್ತು.

Contact Your\'s Advertisement; 9902492681

ಜಿಟಿ ಜಿಟಿ ಮಳೆ ಮತ್ತು ದಟ್ಟವಾಗಿ ಮೋಡ ಕವಿದ ವಾತಾವರಣ ಇದ್ದಿದ್ದರಿಂದ ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿ ಬೈಕ್ ಸವಾರರಿಗೆ ಕಾಣಿಸಿಲ್ಲ. ಹೀಗಾಗಿ ಸೀದಾ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೂವರು ದುರ್ಮರಣ ಹೊಂದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here