ಕಲಬುರಗಿ: ಜಿಲ್ಲಾ ನೇಕಾರ ಅಸ್ಮಿತೆ ಜಾಗ್ರತಿ ಸಮಿತಿ ಮತ್ತು ಸಪ್ತ ನೇಕಾರ ಸಮುದಾಯಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಜಫ್ರಾಬಾದ ಗ್ರಾಮದ ಶ್ರೀ ದಾಸಿಮಯ್ಯ ಸಿದ್ಧಾರೂಢ ಮಠದಲ್ಲಿ ಷ.ಭ್ರ. ಶ್ರೀ. ಅಭಿನವ ರೇವಣ್ಣಸಿದ್ದ ಪಟ್ಟದೇವರು ರವರ ಸಾನಿಧ್ಯದಲ್ಲಿ ಸಂಘಟನಾ ಸಭೆ ಜರುಗಿತು.
ಮೊದಲಿಗೆ ತೊಗಟವೀರ ಸಮಾಜದ ಶ್ರೀನಿವಾಸ ಬಲಪೂರ್ ಸ್ವಾಗತಿಸಿದರು. ಹಿರಿಯ ನಾಯಕ ರಾದ ಸಿದ್ರಾಮಪ್ಪ ಕರಬಸ್ತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಕಲ್ಯಾಣ ಕರ್ನಾಟಕದ ಪ್ರದೇಶದಲ್ಲಿ ನಮ್ಮ ಸಮುದಾಯಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ಪಡೆದು ಸಮಾಜ ಸೇವೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗುವಂತೆ ಮಾಡುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಲು ಕರೆ ನೀಡಿದರು.
ಸಮಿತಿ ಸಂಚಾಲಕರು ಹಾಗೂ ಜಿಲ್ಲಾ ಹಟಗಾರ ಸಮಾಜ ಅಧ್ಯಕ್ಷ ಶಿವಲಿಂಗಪ್ಪಾ ಅಷ್ಟಗಿ ಈಗಾಗಲೇ ಏಪ್ರಿಲ್ ತಿಂಗಳಲ್ಲಿ ನೇಕಾರ ಧರ್ಮ ಗುರು ದಾಸಿಮಯ್ಯನವರ ಜಯಂತಿ, ಡಾ. ಫ.ಗು.ಹಳಕಟ್ಟಿಯವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿ ನೇಕಾರರ ಅಸ್ತಿತ್ವ ಮರು ಸ್ಥಾಪಿಸಿದ ಬಗ್ಗೆ ಹೆಮ್ಮೆಯಿಂದ ಹೇಳಿ ಕೊಳ್ಳುತ್ತಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು.
ನ್ಯಾಯವಾದಿ ಜೇನವೆರಿ ವಿನೋದ ಕುಮಾರ ವಂದಿಸಿದರು. ಸಭೆಯಲ್ಲಿ ಹಿರಿಯರಾದ ಅಶೋಕ ಗಂಜಿ ಇತರರು ಉಪಸ್ಥಿತರಿದ್ದರು.