ಸೇಡಂ: ವಿವಿಧ ಪಕ್ಷ ತೊರೆದು ಹಲವರು ಜೆಡಿಎಸ್ ಗೆ ಸೇರ್ಪಡೆ

0
30

ಸೇಡಂ: ತಾಲೂಕಿನ ಕುರಕುಂಟ ಗ್ರಾಮದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಗ್ರಾಮಸ್ಥರು ಜೆಡಿಎಸ್ ಮುಖಂಡ ಶ್ರೀ ಬಾಲರಾಜ್ ಗುತ್ತೇದಾರ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ನಂತರ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು ರಾಷ್ಟ್ರೀಯ ಪಕ್ಷದ ನಾಯಕರುಗಳಿಗೆ ಯುವಕರ ಬಗ್ಗೆ ಸ್ವಲ್ಪ ಕೂಡಾ ಕಾಳಜಿ ವಹಿಸುತ್ತಿಲ್ಲ.

Contact Your\'s Advertisement; 9902492681

ಸೇಡಂ ತಾಲ್ಲೂಕಿನಲ್ಲಿ ಇಷ್ಟೊಂದು ಕಾರ್ಖಾನೆಗಳು ಇದ್ದರೂ ಸ್ಥಳೀಯರಿಗೆ ಉದ್ಯೋಗ ಒದಗಿಸುವಲ್ಲಿ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಯುವಕರು ಉದ್ಯೋಗವಿಲ್ಲದೆ ಪರದಾಡುವ ಪರಿಸ್ಥಿತಿ ಬಂದಿದೆ. ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಕೆಲಸ ಮಾಡುವ ಪರಿಸ್ಥಿತಿ ಬಂದಿದೆ. ಸೇಡಂನಲ್ಲಿ ಖಾಸಗಿ ಕಾರ್ಖಾನೆಗಳು ನಡೆಯುತ್ತಿದ್ದು ಅವುಗಳು ಉತ್ತಮ ಲಾಭದಲ್ಲಿದೆ ಆದರೆ ಕುರುಕುಂಟದಲ್ಲಿರುವ ಸರ್ಕಾರಿ ಸಿಮೆಂಟ್ ಕಾರ್ಖಾನೆ ಯಾಕೆ ಚಾಲ್ತಿಯಲ್ಲಿ ಇಲ್ಲ . ತಾಲೂಕಿನಲ್ಲಿ ಐದು ಖಾಸಗಿ ಕಾರ್ಖಾನೆಗಳು ಇದ್ದರೂ ಕೂಡ ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿವೆ ಬೇರೆ ರಾಜ್ಯಗಳಿಂದ ಬಿಹಾರ್, ರಾಜಸ್ಥಾನ್, ಗುಜರಾತ್ ಇನ್ನು ಅನೇಕ ಹೊರ ರಾಜ್ಯದಿಂದ ಬಂದವರಿಗೆ ನೌಕರಿ ಸಿಗುತ್ತಿದೆ.

ಸ್ಥಳೀಯರಿಗೆ ಮಾತ್ರ ಪ್ರತಿಶತ 20 ಕೂಡ ನೌಕರಿ ಇಲ್ಲ. ಯಾಕೆ ಈ ರೀತಿ ನಮ್ಮ ಜನರಿಗೆ ಆಗುತ್ತಿದೆ ಯಾರು ಇಲ್ಲಿ ಹೇಳೋರು ಕೇಳೋರು ಇಲ್ವಾ, ಎರಡು ರಾಷ್ಟ್ರೀಯ ಪಕ್ಷದ ನಾಯಕರು ಇದರ ಬಗ್ಗೆ ಮಾತಾಡೋದು ಇಲ್ಲ. ಅದೇ ರೀತಿ ರೈತರ ಸಮಸ್ಯೆಗಳು ಸೇಡಂ ಮತಕ್ಷೇತ್ರದಲ್ಲಿ ನೀರಾವರಿ ಬಗ್ಗೆ ಇಷ್ಟು ವರ್ಷವಾದರೂ ಕೆರೆ ನಿರ್ಮಾಣವಾಗಿಲ್ಲ, ಕೇನಲ್ ನಿರ್ಮಾಣವಾಗಿಲ್ಲ, ಕೆರೆಗಳಿದ್ದರು ಕೂಡ ಮುಚ್ಚಿಹೋಗಿವ ಪರಿಸ್ಥಿತಿ ಬಂದಿದೆ. ಕೆಲವು ಒಂದಿಷ್ಟು ಕೆರೆಗಳ ಇದ್ದರೂ ಹೂಳು ಎತ್ತುವ ಕೆಲಸವಾಗಿಲ್ಲ ಎಂದು ಆರಪಿಸಿದರು.

ಇನ್ನು ಹಲವಾರು ಸಮಸ್ಯೆಗಳ ಬಗ್ಗೆ ಮಾತನಾಡಿ ಒಂದು ಸಲ ನಮಗೆ ಆಶೀರ್ವಾದ ಮಾಡಿ ನೋಡಿ ನಾನು ಹೇಳೋದಿಲ್ಲ ಮಾಡಿ ತೋರಿಸುತ್ತೇನೆ ಮುಂದಿನ ದಿನಗಳಲ್ಲಿ ಪಂಚರತ್ನ ಎಂಬ ಕಾರ್ಯಕ್ರಮದೊಂದಿಗೆ ನಮ್ಮ ವರಿಷ್ಠರು ರಾಜ್ಯದ ಜನರ ಬದುಕು ಕಟ್ಟಿ ಕೊಡವ ಉದ್ದೇಶ ಹೊಂದಿದ್ದಾರೆ.
ಜೆಡಿಎಸ್ ಪಕ್ಷದ ಕಾರ್ಯ ವೈಖರಿ, ನೀರಾವರಿ ಯೋಜನೆ, ರೈತರ ಸಾಲಮನ್ನಾ, ಇನ್ನೂ ಅನೇಕ ಕೊಡುಗೆಗಳು ನಮ್ಮ ಜೆಡಿಎಸ್ ಪಕ್ಷ ನೀಡಿದೆ ಎಂದು ಸಹ ವಿಸ್ತಾರವಾಗಿ ಹೇಳಿದರು.

ಈ ಸಂದರ್ಭದಲ್ಲಿ ಯುವಕರು,ಮಹಿಳೆಯರು,ಹಿರಿಯ ಮುಖಂಡರೂ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಡಗೊಂಡರು.

ಜೆಡಿಎಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಉಪಸ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here