ಸ್ಲಂ ಜನಾಂದೋಲನ ಮುಖಂಡರಿಂದ ಜಿಲ್ಲಾಡಳಿತಕ್ಕೆ ಮನವಿ

0
34

ಕಲಬುರಗಿ: ನಗರದ ಮಹಾನಗರ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ೧೪೪೭ ಮನೆಗಳ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಒಟ್ಟು ೧೧೯೬ ಫಲಾನುಭವಿಗಳಿಗೆ ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನದಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಅಡಿಯಲ್ಲಿ ವಂತಿಕೆ ಹಣ ಮೀಸಲಿಡಬೇಕು ಎಂದು ಒತ್ತಾಯಿಸಿ ಸ್ಲಂ ಜನಾಂದೋಲನ ಜಿಲ್ಲಾ ಘಟಕದ ಮುಖಂಡರು ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆ ದಲಿತರಿಗೆ ಸರಕಾರ ಜಾರಿಗೆ ತಂದಿದೆ. ಈ ಭಾಗದಲ್ಲಿ ಅತಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಜನಾಂಗದವರು ಹೆಚ್ಚು ವಾಸವಾಗಿದ್ದಾರೆ. ಇವರಿಗೆ ಕೋವಿಡ್‌ನಿಂದ ತತ್ತರಿಸಿ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಎರಡು ವರ್ಷ ಮನೆಯಲ್ಲಿ ಕುಳಿತ್ತಿದ್ದಾರೆ. ಒಂದು ದಿನ ಕೆಲಸ ಮಾಡಿದರೆ ಒಪ್ಪತ್ತಿನ ಉಪಜೀವನ ಸಾಗುತ್ತದೆ. ಇವರ ಮಕ್ಕಳ ವಿದ್ಯಾಭ್ಯಾಸ ಆರೋಗ್ಯ ಕಷ್ಟಕರವಾಗಿದೆ.

Contact Your\'s Advertisement; 9902492681

ಇಂತಹ ಸಂದರ್ಭದಲ್ಲಿ ಪ್ರಧಾನಮಂತ್ರಿ ಆವಾಸ್ ಮಂಜೂರಾಗಿವುದರಿಂದ ಆರ್ಥಿಕವಾಗಿ ಹಿಂದುಳಿದ ಪಜಾ ಮನೆಗಳ ವಂತಿಕೆ ಹಣ ಕಟ್ಟುವುದು ಜೊತೆಗೆ ಮನೆ ಸಾಲ ಕಟ್ಟಿಕೊಳ್ಳುವುದು ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಧ್ಯವರ್ತಿಗಳು ಜನಪ್ರತಿನಿಧಿಗಳು ಸೇರಿ ಸ್ಲಂ ನಲ್ಲಿ ವಾಸಿಸುವ ಪಜಾ, ಪಪಂದ ಜನರ ಹತ್ತಿರ ಸರಕಾರ ನಿಗದಿಪಡಿಸಿದ ವಂತಿಕೆ ಹಣಕ್ಕಿಂತ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ.

ಸರಕಾರದ ಆದೇಶದ ಪ್ರಕಾರ ಎಸ್‌ಎಫ್‌ಸಿ ಮುಕ್ತನಿಧಿ ಅನುದಾನದಲ್ಲಿ ಎಸ್‌ಸಿಪಿ, ಟಿಎಸ್ಸಿ ಯೋಜನೆಯಲ್ಲಿ ಕೂಡಲೇ ಕ್ರಿಯಾ ಯೋಜನೆ ರೂಪಿಸಿ ಸ್ಲಂ ನಿವಾಸಿಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೊದಲು ಆದ್ಯತೆ ನೀಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸ್ಲಂ ಜನಾಂದೋಲನ ಜಿಲ್ಲಾ ಘಟಕದ ಅಧ್ಯಕ್ಷೆ ಸುನೀತಾ ಕೊಳ್ಳೂರ, ಸಂಚಾಲಕಿ ರೇಣುಕಾ ಸರಡಗಿ, ಸ್ಲಂ ಮುಖಂಡರಾದ ಗೌರಮ್ಯಾ ಮಾಕಾ, ಶ್ರೀದೇವಿ ಸೂರ್ಯವಂತಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here