ಪರಿಸರದ ಸಮತೋಲನ ಕಾಪಾಡುವುದು ನಮ್ಮ ಕರ್ತವ್ಯ: ಬಿ.ಆರ್.ಸಿ ಮಲ್ಲಿಕಾರ್ಜುನ

0
96

ಶಹಾಬಾದ: ನಮ್ಮ ಪರಿಸರವನ್ನು ರಕ್ಷಿಸುವ, ಸಂರಕ್ಷಿಸುವ ಕರ್ತವ್ಯ ಪ್ರತಿಯೊಬ್ಬರದೂ ಆಗಿದ್ದರೂ ನಾವು ಅದನ್ನು ನಗಣ್ಯ ಎಂಬಂತೆ ವರ್ತಿಸುತ್ತಿರುವುದು ಮಾತ್ರ ದುರಂತದ ಸಂಗತಿ ಎಂದು ಚಿತ್ತಾಪೂರ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿ.ಆರ್.ಸಿ ಮಲ್ಲಿಕಾರ್ಜುನ ಸೇಡಂ ಹೇಳಿದರು.

ಅವರು ಮಂಗಳವಾರ ಭಂಕೂರ ಗ್ರಾಮದಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ಅಂಗವಾಗಿ ಚಂದ್ರಕಾಂತ.ಪಾಟೀಲ್ ಶಿಕ್ಷಣ ಮತ್ತು ಗ್ರಾಮಿಣಾಭಿವೃದ್ದಿ ಟ್ರಸ್ಟ್ (ರಿ) ವತಿಯಿಂದ ಆಯೋಜಿಸಲಾದ ಸಸಿ ನೆಡುವ ಹಾಗೂ ಸಸಿ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಮಾನವನು ಸಮಾಜಜೀವಿ ಎನ್ನುವ? ಸಹಜವಾದದ್ದು ಆತನು ಪರಿಸರದ ಶಿಶು ಎನ್ನುವುದು. ಅವನ ಸುತ್ತಮುತ್ತಲು ವೈವಿದ್ಯಮಯವಾದ ನಿಸರ್ಗದ ಸೊಬಗಿದೆ, ಹಲವಾರು ಮರಗಿಡಗಳಿವೆ. ವಿವಿಧ ಪ್ರಕಾರದ ಪ್ರಾಣಿಪಕ್ಷಿಗಳಿವೆ. ವೈವಿಧ್ಯಮಯವಾದ ಕೀಟ ಪ್ರಪಂಚವಿದೆ. ಅನೇಕ ಸೂಕ್ಷ್ಮ ಜೀವಿಗಳಿವೆ. ಅ? ಅಲ್ಲ. ಹಲವಾರು ಚಿಕ್ಕ ದೊಡ್ಡ ನದಿ, ಸಾಗರ ಸರೋವರಗಳಿವೆ. ಸಣ್ಣಪುಟ್ಟ ಗುಡ್ಡ ಬೆಟ್ಟಗಳಿವೆ, ದೊಡ್ಡ ದೊಡ್ಡ ಪರ್ವತ ಶಿಖರಗಳಿವೆ. ಗಾಳಿ, ಬೆಳಕು ಹಾಗು ಅಪರಿಮಿತ ಖನಿಜ ಸಂಪತ್ತಿದೆ.ನಾವು ನಮ್ಮ ಸ್ವಾರ್ಥಕ್ಕಾಗಿ ಮರಗಿಡಗಳನ್ನು ಕಡಿದುಹಾಕುತ್ತೇವೆ. ಇದರಿಂದಾಗಿ ಹಸಿರು ವಿರಳವಾಗುತ್ತಹೋಗುತ್ತಿದೆ.

ಈಗಲೆ ಎಚ್ಚೆತ್ತುಕೊಳ್ಳದೆಹೋದರೆ ಈಗಾಗಲೇ ಸುನಾಮಿ, ಬರ, ಮಹಾಪೂರದಂಥ ಪ್ರಕೃತಿ ವಿಕೋಪಗಳಿಗೆ ತುತ್ತಾಗುತ್ತಿರುವುದರ ಜೊತೆಗೆ ಇನ್ನೂ ಅತ್ಯಂತ ದಾರುಣವಾದ ಆಮ್ಲಜನಕದ ಕೊರತೆಯನ್ನು ಕೂಡ ಅನುಭವಿಸಬೇಕಾದ ಪರಿಸ್ಥಿತಿ ಬರುತ್ತದೆ.ಆದ್ದರಿಂದ ಪರಿಸರದ ಸಮತೋಲನ ಕಾಪಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಪಂ ಇಓ ಬಿ.ಎಸ್. ಡಿಗ್ಗಿ , ಪರಿಸರ ಸಮತೋಲನ ಕಾಪಾಡಲು ನಾವು ಹೆಚ್ಚು ಹೆಚ್ಚು ಸಸಿಗಳನ್ನು ಬೆಳೆಸುವ ಮುಖಾಂತರ ಪರಿಸರ ಸಂರಕ್ಷಣೆ ಮಾಡಬೇಕು. ಅಲ್ಲದೇ ಪರಿಸರ ಸಂರಕ್ಷಣೆಯಲ್ಲಿ ಸುಂದರಲಾಲ ಬಹುಗುಣ ಹಾಗೂ ಸಾಲು ಮರದ ತಿಮ್ಮಕ್ಕರ ಶ್ರಮ ಬಹಳಷ್ಟಿದೆ ಎಂದರು. ಅಲ್ಲದೇ ಹಳ್ಳಿ ಹಳ್ಳಿಗಳಿಗೂ ಈ ಪರಿಸರದ ಬಗ್ಗೆ ಅರಿವು ಮೂಡಿಸಬೇಕಾದ ಜವಾಬ್ದಾರಿ ನಮ್ಮದಾಗಿದೆ ಎಂದರು.

ಸರಕಾರಿ ನೌಕರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ,ಬಿ.ಎಫ್.ಐ.ಎಲ್ ಮೈರಾಡನ ಶಿವಕುಮಾರ ರೆಡ್ಡಿ,ಜೆಸ್ಕಾಂ ಅಧಿಕಾರಿ ಅಂಬರೀಷ ಹೂಗಾರ,ಭಂಕೂರ ಸಿಆರ್‌ಸಿ ಮರೆಪ್ಪ ಭಜಂತ್ರಿ, ಭರತ್ ಧನ್ನಾ, ಚಂದ್ರಕಾಂತ.ಪಾಟೀಲ್ ಶಿಕ್ಷಣ ಮತ್ತು ಗ್ರಾಮಿಣಾಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಮಹೇಶ ಧರಿ, ಅತಿಥಿಗಳಾಗಿ ಗಂಗಾರಾಮ ರಾಠೋಡ,ಬಸವರಾಜ.ಕೇಶ್ವರ ವಾಡಿ,ಮಲ್ಲಿಕಾರ್ಜುನ ಧರಿ,ಶರಣು ರಾವೂರ,ಮಲ್ಲಿಕಾರ್ಜುನ ಘಮಗಾ,ಉಮೇಶ ಧರಿ,ಅಪ್ಪು ಕೊಳ್ಳಿ,ಭೀಮರಾವ ರಾವೂರ,ಪ್ರಭುಲಿಂಗ ಪೂಜಾರಿ,ಓಂ ಶಿವಾ ಗುತ್ತೇದಾರ,ನಿಂಗಣ್ಣಾ ಹೂಗೊಂಡ, ಮಹೇಶ್ ಮಾಲಗತ್ತಿ, ಶಾಲೆಯ ಮುಖ್ಯಗುರುಗಳು ಹಾಗೂ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here