ಸುರಪುರ: ನಗರದ ಗೋಲ್ಡನ್ ಕೇವ್ ಬುದ್ದ ವಿಹಾರದಲ್ಲಿ ಟ್ರಸ್ಟಿನ ಗೌರವ ಅದ್ಯಕ್ಷರಾದ ಪೂಜ್ಯ ವರಜ್ಯೋತಿ ಬಂತೇಜಿಯವರ ಸಾನಿದ್ಯದಲ್ಲಿ ಮತ್ತು ಅದ್ಯಕ್ಷ ವೆಂಕಟೇಶ ಹೊಸಮನಿಯವರ ಅದ್ಯಕ್ಷತೆಯಲ್ಲಿ ಜುಲೈ ತಿಂಗಳ ಮಾಸಿಕ ಸಭೆಯನ್ನು ಕರೆಯಲಾಗಿತು. ಮೊದಲಿಗೆ ಬುದ್ದನಿಗೆ ದೀಪ ಹಚ್ಚಿ ಪುಷ್ಪಾಚರಣೆ ಮಾಡಿ ಭಂತೇಜಿಯವರು ತ್ರೀಸರಣ ಪಠಿಸಿದರು.
ನಂತರ ಸಭೆಗೆ ಪ್ರಧಾನ ಕಾರ್ಯಾದರ್ಶಿ ರಾಹುಲ್ ಹುಲಿಮನಿ ಎಲ್ಲರನ್ನು ಸ್ವಾಗತಿಸಿ ಇಲ್ಲಿಯ ವರೆಗೆ ಬುದ್ಧ ವಿಹಾರದ ಅಭಿವೃದ್ಧಿ ಮತ್ತು ಧಮ್ಮ ಚಟುವಟಿಕೆಗಳ ಬಗ್ಗೆ ಸಮಗ್ರವಾದ ವರದಿ ಮತ್ತು ಹಣಕಾಸಿನ ವರಧಿಯನ್ನು ಟ್ರಸ್ಟ್ ಬೈಲಾ ಪ್ರಕಾರ ಮಂಡಿಸಿ ಕೋರಂ ಅನುಗುಣವಾಗಿ ಅನುಮೋದನೆ ಪಡೆದರು.
ಬುದ್ದ ವಿಹಾರದಲ್ಲಿ ಬಿಕ್ಕು ಸಂಘದ ಪೂಜ್ಯ ಭಂತೆಜಿಯವರು ಇಲ್ಲಿಯೇ ಶಾಶ್ವತವಾಗಿ ವಾಸಮಾಡುವಂತೆ ಅವರಿಗೆ ಮೂಲ ಸೌಕರ್ಯಗಳನ್ನು ವದಗಿಸುವದು. ಮತ್ತು ತಾಲೂಕಿನಲ್ಲಿ ದೀಕ್ಷೆ ಕಾರ್ಯಾಕ್ರಮಗಳು ಆಯೋಜನೆ, ಹಾಗೂ ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾರ್ಯಾಗಳ ಬಗ್ಗೆ ಆಡಳಿತ ಮಂಡಳಿಯ ಸದಸ್ಯರುಗಳು ಜವಬ್ದರಾರಿಯುತ ಸೇವೆ ಸಲ್ಲಿಸುವದು ಮತ್ತು ಪ್ರತಿ ತಿಂಗಳ ನಾಲ್ಕನೇ ಶನಿವಾರ ಕಡ್ಡಾಯವಾಗಿ ಆಡಳಿತ ಮಂಡಳಿಯ ಸಭೆಸೆರುವದು ಇತ್ಯಾದಿ ಕುರಿತು ಚರ್ಚಿಸಿ ಠರಾವೂ ಪಾಸುಮಾಡಲಾಯಿತು.
ಸಭೆಯಲ್ಲಿ ಮುಖಂಡರಾದ ನಾಗಣ್ಣ ಕಲ್ಲದೆವನಹಳ್ಳಿ, ಭಿಮರಾಯ ಸಿಂದಗೇರಿ, ವೆಂಕಟೇಶ್ವರ ಸುರಪುರ, ಮಾಳಪ್ಪ ಕಿರದಳ್ಳಿ, ಮಂಜುಳಾ ಸುರಪುರ, ವೆಂಕಟೇಶ ದೇವಾಪೂರ, ಹಣಮಂತ ಭದ್ರಾವತಿ, ಹುಗಪ್ಪ ದೇವತ್ಕಲ್, ಮಲ್ಲಪ್ಪ ತಳವರಗೇರಾ, ಸಿದ್ರಾಮ್ ಹಾಲಭಾವಿ, ಉಪಾಸಕರಾದ ಗೋಪಾಲ್ ವಜ್ಜಲ್, ಚಂದಪ್ಪ ಪಂಚಮ್, ಚನ್ನಪ್ಪ ದೇವಾಪೂರ, ಪರುಶುರಾಮ್ ಗೊವಾ, ಖುತ್ಬಜಾ ಕ್ರಾಂತಿ, ರಾಯಪ್ಪ ಇಸ್ಲಾಂಪೂರ್ ಇತರರು ಬಾಗವಹಿಸಿದ್ದರು.