ಹಾವೇರಿ: ಹಾವೇರಿ ನಗರದಲ್ಲಿ ನಿರ್ಮಾಣವಾಗಿರು ನಗರಸಭೆಯ ನೂತನ ಕಟ್ಟಡವನ್ನು ಶಾಸಕ ನೆಹರೂ ಓಲೇಕಾರ ಶುಕ್ರವಾರ ಉದ್ಘಾಟಿಸಿದರು.
ಗಾಂಧಿ ವೃತ್ತದ ಬಳಿ ಸುಮಾರ 5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿ ನಗರಸಭೆಯ ಕಟ್ಟಡವನ್ನು ಜಿಲ್ಲಾಧಿಕಾರಿ ಹಾಗೂ ನಗರಸಭೆಯ ಆಡಳಿತಾಧಿಕಾರಿ ಕೃಷ್ಣ ಬಾಜಪೇಯಿ ಅವರ ಸಮ್ಮುಖದಲ್ಲಿ ಉದ್ಘಾಟನೆ ನೇರವೆರಿಸಿದರು. ಕಳೆದ ಹಲವು ವರ್ಷಗಳಿಂದ ಹಚ್ಚಿನ ಕಟ್ಟಡದಲ್ಲಿದ್ದ ನಗರಸಭೆಯು ಇನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿರುವ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.
ಕಳೆದ ಸಿದ್ದರಾಮಯ್ಯ ನೇತೃತ್ವದ ಸರಕಾರದ ಅವಧಿಯಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರುದ್ರಪ್ಪ ಲಮಾಣಿ ಅವರು ನೂತನ ನಗರಸಭೆಯ ಕಟ್ಟಡವನ್ನು ಉದ್ಘಾಟನೆ ಮಾಡಲು ಮುಂದಾಗಿದ್ದರು. ಆಗ ಬಿಜೆಪಿ ಸದಸ್ಯರ ಪ್ರತಿರೋಧದ ಬಳಿಕ ಕಟ್ಟಡ ಉದ್ಘಾಟನೆಯನ್ನು ಕೈ ಬಿಡಲಾಗಿತ್ತು. ಅದಾದ ಬಳಿಕ ಲೋಕಸಭಾ ಚುನಾವಣೆ ಪೂರ್ವದಲ್ಲಿ ನೂತನ ಕಟ್ಟಡದ ಪೂಜಾ ಕಾರ್ಯಕ್ರಮ ನಡೆದಿದ್ದನ್ನು ಇಲ್ಲಿ ಸ್ಮರಿಸಬಹದು.
ಹಲವು ತಿಂಗಳಿನಿಂದ ಉದ್ಘಾಟನೆಗೊಳ್ಳದೇ ನೆನೆಗುದಿಗೆ ಬಿದಿದ್ದ ನಗರಸಭೆಯ ಕಟ್ಟಡವನ್ನು ಬಿಜೆಪಿ, ಕಾಂಗ್ರೆಸ್ ನಗರಸಭಾ ಸದಸ್ಯರ ಸಹಯೋಗದಲ್ಲಿ ಅಧಿಕೃತವಾಗಿ ಉದ್ಘಾಟಿಸುವ ಮೂಲಕ ಹಲವು ಗೊಂದಲಗಳಿಗೆ ತೆರೆ ಎಳೆಯಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆಯ ಸದಸ್ಯರು, ನಗರಸಭೆಯ ಆಯುಕ್ತರು, ಇತರೆ ಸಿಬ್ಬಂಧಿಗಳು, ಪೌರ ಕಾರ್ಮಿಕರು ಸಾಕ್ಷಿಯಾಗಿದ್ದರು.