ಅನನ್ಯ MSW ಕಾಲೇಜಿನಲ್ಲಿ ಸಂಸ್ಕೃತಿಕ ಕಾರ್ಯಕ್ರಮಕ್ಕೆ ದಿಲೀಪ್ ಪಾಟೀಲ್ ಚಾಲನೆ

0
14

ಕಲಬುರಗಿ: ನಗರದ ಅನನ್ಯ ಪದವಿ ಮತ್ತು ಸ್ನಾತಕೋತ್ತರ ಎಂ ಎಸ್ ಡಬ್ಲ್ಯೂ ಪದವಿ ಮಹಾವಿದ್ಯಾಲಯದಲ್ಲಿ ೭೫ ನೆಯ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ಯವಾಗಿ ಸಂಸ್ಕೃತಿಕ ಕಾರ್ಯಕ್ರಮಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ದಿಲೀಪ್ ಆರ್.ಪಾಟೀಲ್ ಉದ್ಘಾಟಿಸಿ ಮಾತನಾಡುತ್ತಾ ಈ ಅಮೃತ ಮಹೋತ್ಸವದ ಹಿಂದೆ ಅನೇಕ ಮಹಾನ್ ವೀರರನ್ನು ದೇಶಪ್ರೇಮಿಗಳ ತ್ಯಾಗ ಬಲಿದಾನವನ್ನು ಸ್ಮರಿಸುತ್ತಾ ಯುವ ಪೀಳಿಗೆಗೆ ಪೂರ್ತಿದಾಯಕ ಹಿತ ನುಡಿಗಳನ್ನು ವ್ಯಕ್ತಪಡಿಸಿದರು.

ಅತಿಥಿಗಳಾಗಿ ಆಗಮಿಸಿದ ಖ್ಯಾತ ನ್ಯಾಯವಾದಿ  ಭೀಮಾಶಂಕರ ಪೂಜಾರಿ ಮತ್ತು ಹಿರಿಯರಾದ ಸೂರ್ಯಕಾಂತ ಹಾಗರಗಿ ಅವರು ರಾಷ್ಟ್ರಧ್ವಜದ ಮಹತ್ವವನ್ನು ಗೌರವಿಸಿದರ ಉದ್ದೇಶವಾಗಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮದ ಅಭಿಮಾನವನ್ನು ಕುರಿತು ಮಾತನಾಡಿದರು.

Contact Your\'s Advertisement; 9902492681

ಕಾಲೇಜಿನ ಅಧ್ಯಕ್ಷರಾದ ಸುಷ್ಮಾವತಿ ಎಸ್ ಹೊನ್ನಗೇಜಿ ಅವರು ಮಾತನಾಡಿ ದೇಶದ ಅಮೃತ ಮಹೋತ್ಸವದ ಗಳಿಗೆಯಲ್ಲಿ ಮಹಾನ್ ದೇಶಪ್ರೇಮಿಗಳ ಸಾಧಕರ ಸಾಧನಗಳನ್ನು ಉತ್ತಮ ಗುರಿ ಮತ್ತು ಗುರುವಿನ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ದೇಶಪ್ರೇಮದ ಬೀಜವನ್ನು ಬಿತ್ತಿದರು.

ಕಾಲೇಜಿನ ಕೇಂದ್ರ ಬಿಂದುಗಳಾದ ಪ್ರಾಂಶುಪಾಲ ಶರಣು ಬಿ ಪೂಜಾರಿ ಹೊನ್ನಗೇಜಿ ಅವರು ೭೫ ನೇ ಆಜಾಧಿಕಾ ಅಮೃತ ಮಹೋತ್ಸವದ ಮಹತ್ವವನ್ನು ವ್ಯಕ್ತಪಡಿಸಿದರು.

ಎಲ್ಲಾ ಉಪನ್ಯಾಸಕರು ಸ್ವತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಭಾಷಣಗಳ ಮೂಲಕ ವಿದ್ಯಾರ್ಥಿಗಳಲ್ಲಿ ದೇಶಪ್ರೇಮದ ಬಗ್ಗೆ ಹುರಿದುಂಬಿಸಿದರು ಎಲ್ಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ೭೫ ನೇ ಅತಂತ್ರೋತ್ಸವಕ್ಕೆ  ಮೆರಗು ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಆಶಾರಾಣಿ ಕಲ್ಕೋರಿ, ಗೌರಿ ಬೆಟಗೇರಿ, ಚೈತ್ರ, ಶಿಲ್ಪ ಲಿಂಗದೇ,  ಭಾಗ್ಯಶ್ರೀ ಪಾಟೀಲ್, ಪ್ರೀತಿ ಸಜ್ಜನ್,  ಡಾ. ಸರಿತಾ ಕರಿಗುಡ್ಡ, ಶಿವಕುಮಾರ, ಕಿರಣಕುಮಾರ, ಬೋಜು ಬಿ ಪೂಜಾರಿ,  ಸುಜಾತ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here