ಗಂಗಾಮತ ಸಮುದಾಯದ ಗಂಗಾಮಾತೆಗೆ ಬರಗೂರರಿಂದ ಅವಮಾನ: ಮಲ್ಲಿಕಾರ್ಜುನ ಕೋಡ್ಲಿ ಖಂಡನೆ

0
150

ಕಲಬುರಗಿ : ಪ್ರೋ. ಬರಗೂರ ರಾಮಚಂದ್ರಪ್ಪ ಅವರು ತಮ್ಮ ಭರತ ನಗರಿ ಕಾದಂಬರಿಯಲ್ಲಿ ಗಂಗಾಮತಸ್ಥರ ಕುಲದೇವತೆಯಾದ ಗಂಗಾಮಾತೆಯ ಕುರಿತು ಅಶ್ಲೀಲ ಪದ ಬಳಕೆ ಮಾಡಿ ಕೇವಲ ಗಂಗಾ ಮಾತೆಗೆ ಅವಮಾನಿಸಿದ್ದಲ್ಲದೇ ಇಡೀ ಗಂಗಾಮತ ಸಮುದಾಯಕ್ಕೆ ಅಶ್ಲೀಲವಾಗಿ ಬಿಂಬಿಸಿದ್ದಾರೆಂದರೆ ತಪ್ಪಾಗಲಾರದು. ಈ ಕುರಿತು ಸರ್ಕಾರ ಕಾದಂಬರಿಯನ್ನು ಮುಟ್ಟುಗೋಲು ಹಾಕಬೇಕೆಂದು ಕೋಲಿ ಸಮಾಜ ಯುವ ಮುಖಂಡ ಮಲ್ಲಿಕಾರ್ಜುನ ಕೋಡ್ಲಿ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಪ್ರೋ. ಬರಗೂರು ರಾಮಚಂದ್ರಪ್ಪ ಭರತ ನಗರಿ ಕಾದಂಬರಿಯ ಪುಟ ಸಂ: ೫೬ ಹಾಗೂ ೫೭ ರಲ್ಲಿ ಗಂಗಾಮಾತೆಯನ್ನು ಅತ್ಯಂತ ಕೀಳು ಹಾಗೂ ಅಶ್ಲೀಲ ಪಗಳನ್ನು ಬಳಕೆ ಮಾಡಿ ಬರೆದಿದ್ದಾರೆ, ಗಂಗಾ ಮಾತೆಯ ಜನಾಂಗದವರಿಗೆ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಇದೆ, ಗಂಗಾ ಸ್ನಾನವಿಲ್ಲದೇ ಯಾವುದೇ ದೇವರ ದರ್ಶನಕ್ಕೆ ಅವಕಾಶವಿಲ್ಲ ಇಂತಹ ಮಹತ್ವ ಹಾಗೂ ಪವಿತ್ರತೆ ಹೊಂದಿರುವ ಗಂಗಾ ಮಾತೆಯನ್ನು ಅತ್ಯಂತ ಕೀಳು ಮಟ್ಟದ ಪದಗಳಿಂದ ಅವಮಾನಿಸಲಾಗಿದೆ, ಸರ್ಕಾರವು ಸಾರ್ವಜನಿಕರ ತೆರಿಗೆ ಹಣದಲ್ಲಿ ಕಾದಂಬರಿ ಮುದ್ರಣ ಮಾಡಿದೆ, ಅಲ್ಲದೇ ಗಂಗಾ ಮತದ ಸಂಸ್ಕೃತದ ಹಿನ್ನೆಲಯನ್ನು ಪರಿಶೀಲಿಸಿದರೆ ಈ ಜನಾಂಗ ಮೂಲತಃ ಶಿವಬ, ವಂಶದವರೆಂಬ ಖಚಿತಗೊಳ್ಳುತ್ತದೆ, ಬರಗೂರರವರು ಜನಗಣಮನದಲ್ಲಿ ನಮ್ಮ ಕುಲ ದೇವತೆ ಗಂಗಾಮಾತೆಯ ಬಗ್ಗೆ ಅವರ ಕಾದಂಬರಿಯಲ್ಲಿ ಅಶ್ಲೀಲವಾಗಿ ಮಾತನಾಡಿರುವುದು ಖಂಡನಾರ್ಹವಾಗಿದೆ.

Contact Your\'s Advertisement; 9902492681

ಕೂಡಲೇ ಸದರಿ ಭರತನ ನಗರಿ ಕಾದಂಬರಿಯನ್ನು ಮುಟ್ಟುಗೋಲು ಹಾಕಿ ಸದರಿ ಬರಗೂರು ರಾಮಚಂದ್ರಪ್ಪ ಇವರಿಗೆ ಸರಕಾರದಿಂದ ನೀಡಲಾದ ಎಲ್ಲಾ ಪುರಸ್ಕಾರಗಳನ್ನು ತಕ್ಷಣವೇ ಹಿಂಪಡೆದು ಅವರ ವಿರುದ್ಧ ಪ್ರಕರಣ ದಾಖಲಿಸಬೇಕು.

ಏಕೆಂದರೆ ಸದರಿ ಬರಗೂರರವರ ಕಾದಂಬರಿಯ ಗಂಗಾಮಾತೆಯ ಅವಮಾನದ ಪದಗಳಿಂದ ಸಂಪೂರ್ಣ ಗಂಗಾಮತ ಸಮುದಾಯದ ಜನರ ಮನಸ್ಸಿಗೆ ತುಂಬಾ ಘಾಸಿಯಾಗಿದೆ, ನಮ್ಮ ಗಂಗಾಮತ ಸಮುದಾಯದಲ್ಲಿ ಕರ್ನಾಟಕದ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ಒಟ್ಟಾಗಿ ೩೭ ಉಪಜಾತಿಗಳದ್ದು ಅದರಲ್ಲಿ ಗಂಗೆ ಮಕ್ಕಳು, ಗಂಗಾಕುಲ, ಗಂಗಾಮತ, ಗಂಗಾಮತಸ್ಥ, ಗಂಗಾಪುತ್ರ, ಗೌರಿಪುತ್ರ ಎಂದು ಇರುತ್ತವೆ, ಬರಗೂರು ರವರು ತಮ್ಮ ಕಾದಂಬರಿಯನ್ನು ಬರೆಯುವ ಭರದಲ್ಲಿ ಈ ಸತ್ಯವನ್ನು ಅರಿಯದೇ ಬರಗೂರರವರು ಈ ರೀತಿ ಗಂಗಾಮತ ಸಮುದಾಯದವರ ಮನಸ್ಸಿಗೆ ಉದ್ದೇಶಪೂರ್ವಕವಾಗಿ ಘಾಸಿ ಮಾಡಿದ್ದಾರೆ, ಕಾರಣ ಕೂಡಲೇ ಸದರಿಯವರ ವಿರುದ್ಧ ದೂರು ದಾಖಲಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋಲಿ ಸಮಾಜ ಯುವ ಮುಖಂಡ ಮಲ್ಲಿಕಾರ್ಜುನ ಕೋಡ್ಲಿ ಅವರು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here