ಕಲಬುರಗಿ: ರಾಜಸ್ಥಾನ ಪ್ರಕರಣದ ವಿರುದ್ಧ ಯುವಜನ ಆಕ್ರೋಶ

0
33

ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ರಾಜಸ್ತಾನದ ಶಿಕ್ಷಕ ದಲಿತ ಮಗುವನ್ನು ಕೊಂದ ಅಮಾನುಷ ಘಟನೆತನ್ನು ಖಂಡಿಸಿ ಕವಿನುಡಿ- ತಾಯ್ನುಡಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ರಾಜಸ್ತಾನದ ಶಾಲೆಯಲ್ಲಿ ಬಾಯಾರಿದ ಕೂಸು ಮಡಿಕೆಯನ್ನು ಮುಟ್ಟಿ ನೀರು ಕುಡಿದದ್ದಕ್ಕೆ ಮಗುವನ್ನು ಅಮಾನುಷವಾಗಿ ಥಳಿಸಿ ಮಗುವಿನ ಸಾವಿಗೆ ಕಾರಣವಾದ ಶಿಕ್ಷಕನಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ ಯುವ ಕವಿಗಳು ಕವಿತೆಯನ್ನು ಓದುವ ಮೂಲಕ ಪ್ರತಿಭಟಿಸಿದರು.

Contact Your\'s Advertisement; 9902492681

ಪ್ರತಿಭಟನೆಯಲ್ಲಿ ಪಾಲ್ಗೊಂಡ ಸತೀಶ ಕಾಂಬ್ಳೆ ಇಂತಹ ಅಮಾನುಷ ಘಟನೆಗಳಿಗೆ ಈ ದೇಶದಲ್ಲಿ ಬೀಡು ಬಿಟ್ಟಿರುವ ಜಾತಿಯತೆ ಕ್ರೌರ್ಯ ಮತ್ತು ಸಜ್ಜನರ ಮೌನ, ಸಂವಿಧಾನದ ಫಲಾನುಭವಿಗಳಾದ ಎಲ್ಲರೂ ಕಾರಣ. ನಮ್ಮ ಜವಾಬ್ದಾರಿ ಮರೆತು, ಮೀಸಲಾತಿಯ ಸುಖ ಉಂಡು ಕುರ್ಚಿ ಹಿಡಿದ ರಾಜಕೀಯ ಪ್ರತಿನಿಧಿಗಳು ತಮ್ಮ ಪದವಿಗೆ ರಾಜೀನಾಮೆ ಕೊಡಬೇಕು ಎಂದು ಮಾತನಾಡಿದರು.

ಪಂಡಿತ ಮುದಗುಣಕಿ ಮಾತನಾಡುತ್ತ ರಾಜಸ್ತಾನ, ಬಿಹಾರ, ಗುಜರಾತ್ ದಂತ ರಾಜ್ಯಗಳಲ್ಲಿ ದಲಿತ, ಮಹಿಳೆಯರ ಸರಳಿ ಅತ್ಯಾಚಾರ ಸಾವು ನಡೆಯುತ್ತಿದ್ದರೂ ಕಣ್ಣ ಮುಂಚಿ ಕುಂತ ಸರ್ಕಾರ ಎಚ್ಚರಗೊಂಡು ಕೂಡ ಇಂತಹ ಘಟನೆಗಳು ನಡೆಯದಂತೆ ಕಾನೂನು ಕ್ರಮ ಜರುಗಿಸಬೇಕು. ಅಸ್ಪ್ರಶ್ಯತೆ ಕ್ರೌರ್ಯಕ್ಕೆ ಬಲಿಯಾಗುತ್ತಿರುವ ಇಂತಹ ಸರಣಿ ಮಾರಣಹೋಮ ನಡೆಯುತ್ತಿದ್ದರೂ ಕ್ರಮ ತೆಗೆದುಕೊಳ್ಳದ ರಾಜಸ್ತಾನದ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಯುವ ಕವಿಗಳು ಕವಿತೆ ವಾಚನ ಮಾಡಿದರು. ಭವಾನಿಪ್ರಸಾದ್ ಶಿವಕೇರಿ, ಅಕ್ಷತಾ, ಶ್ರೀದೇವಿ, ಪಿ‌.ನಂದಕುಮಾರ ಕೇಂದ್ರಿಯ ವಿಶ್ವವಿದ್ಯಾಲಯ, ರಮೇಶ ಕೇಂದ್ರೀಯ ವಿಶ್ವವಿದ್ಯಾಲಯ, ಕರಿಲಿಂಗ್ ನಾಟೇಕರ್ ಕೇಂದ್ರಿಯ ವಿಶ್ವವಿದ್ಯಾಲಯ, ದಿಲೀಪ್ ಕಾಯಂಕರ್, ರವಿ ಕೊಳ್ಕುರ್ ವಾಡಿ ಕವಿತೆ ವಾಚಿಸಿದರು.

ರಮೇಶ ರಾಗಿ, ರಕ್ಷಿತಾ, ಸೋಮಶೇಖರ್, ರಾಹುಲ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿರು. ಅಶ್ವಿನಿ ಮದನಕರ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here