ಪತ್ರಿಕಾ ವೃತ್ತಿ ದೀಕ್ಷೆತೊಟ್ಟಂತೆ ಇರಬೇಕು: ಪತ್ರಕರ್ತ ಎಸ್.ಆರ್. ಮಣ್ಣೂರ

1
354

ಆಗಿನ ಕಾಲದಲ್ಲಿ ಫೌಂಡೇಶನ್‌ಆದ ನೀರಾವರಿ ಯೋಜನೆಗಳು ಈಗಲೂ ಪೂರ್ಣಗೊಂಡಿಲ್ಲ. ಕಲಬುರಗಿ ನಗರಕ್ಕೆಈವರೆಗೆ ೨೪*೭ ನಿರಂತರ ನೀರು ಸಬರಾಜುಆಗಿಲ್ಲ. ಸ್ಮಾರ್ಟ್ ಸಿಟಿ ಎಂದುಆಯ್ಕೆ ಮಾಡುವ ಬದಲು ಸ್ಮಾರ್ಟ್ ವಿಲೇಜ್‌ ಎಂದು ಆಯ್ಕೆ ಮಾಡಿ ಆ ಹಳ್ಳಿಗೆ ರಸ್ತೆ, ವಿದ್ಯುತ್ ದೀಪ, ಶಿಕ್ಷಣ ಮತ್ತುಆಸ್ಪತ್ರೆಯ ವ್ಯವಸ್ಥೆಯಾಕೆ ಮಾಡಬರಾದು? ಎಂದು ಪ್ರಶ್ನಿಸಿದ ಅವರು, ಪತ್ರಕರ್ತರು ವೃತ್ತಿ ಪ್ರಾಮಾಣಿಕತೆ, ನೈತಿಕ ಧೈರ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಲಬುರಗಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಿರಿಯ ಪತ್ರಕರ್ತರಿಗೆ ಅವರ ಮನೆ ಅಂಗಳಲ್ಲಿ ಗೌರವಿಸುವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತ ಎಸ್.ಆರ್. ಮಣ್ಣೂರ್‌ ಅವರನ್ನು ಗೌರವಿಸಿತು.

Contact Your\'s Advertisement; 9902492681

೬೮ ವರ್ಷದ ಶ್ರೀಕಾಂತಾಚಾರ್ಯ ಮಣ್ಣೂರ ಅವರನ್ನು ವೀರೇಂದ್ರ ಪಾಟೀಲ ಬಡಾವಣೆಯ ಅವರ ನಿವಾಸಕ್ಕೆ ತೆರಳಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬರಾವ ಯಡ್ರಾಮಿ, ರಾಜ್ಯಕಾರ್ಯಕಾರಿ ಸಮಿತಿ ಸದಸ್ಯ ಡಾ.ಶಿವರಂಜನ ಸತ್ಯಂಪೇಟೆ, ಪ್ರಧಾನ ಕಾರ್ಯದರ್ಶಿ ಸಂಗಮನಾಥರೇವತಗಾಂವ, ಉಪಾಧ್ಯಕ್ಷ ದೇವಿಂದ್ರಪ್ಪ ಆವಂಟಿ, ಕಾರ್ಯಕಾರಿ ಸಮಿತಿ ಸದಸ್ಯರಾಜು ಕೋಷ್ಠಿ ಮತ್ತು ಪದಾಧಿಕಾರಿಗಳು ಮಂಗಳವಾರ ಸನ್ಮಾನಿಸಿದರು.

ಪತ್ರಕರ್ತನಿಗೆ ನಿವೃತ್ತಿ ಎಂಬುದಿಲ್ಲ. ಪತ್ರಕರ್ತನಿಗೆ ಸಂಬಳ ಮುಖ್ಯಅಲ್ಲ. ಇದೊಂದು ಕ್ರೇಜ್. ಇದೊಂದು ಥ್ರಿಲ್‌ ಕೊಡುವ ವೃತ್ತಿ. ಪತ್ರಿಕಾ ವೃತ್ತಿ  ಆತ್ಮ ಸಂತೃಪ್ತಿಯ ಕೆಲಸ ಎಂದು ಹೇಳಿದ ಎಸ್.ಆರ್.ಮಣ್ಣೂರ ಅವರು, ನಿವೃತ್ತಿ ನಂತರವೂ ದೆಹಲಿಯ ಪತ್ರಕೆಯೊಂದಕ್ಕೆ ನಾನು ಆನ್ ಲೈನ್‌ನಲ್ಲಿ ಈಗಲೂ ಸುದ್ದಿ ಕಳಿಸುತ್ತ ಕಾಲ ಕಳೆಯುತ್ತಿದ್ದೇನೆ ಎಂದು ವೃತ್ತಿಯೊಂದಿಗಿನ ಬಿಡಿಸಲಾಗದ ನಂಟನ್ನು ಸಂಘದ ಪದಾಧಿಕಾರಿಗಳ ಎದುರಿಗೆತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟರು.

ಟೈಪಿಸ್ಟ್‌ ಆಗಿದ್ದ ನಾನು ೧೯೭೩ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಕಾಲಿಟ್ಟೆ. ಆಗ ತಿಂಗಳಿಗೆ ಕೇವಲ ೮೦ ರೂ. ಸಂಬಳವಿತ್ತು. ನಾನು ಪತ್ರಿಕಾ ಕ್ಷೇತ್ರಕ್ಕೆ ಕಾಲಿಡಲು ಆಗ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾಗಿದ್ದ ರಂಗನಾಥ ದಿವಾಕರ ಮತ್ತುಕಾಗಲಕರ್‌ ಅವರೇ ಮೂಲ ಕಾರಣ ಎಂದು ತಮಗೆ ಅನ್ನ ನೀಡಿದ ಹಿರಿಯರನ್ನು ಸ್ಮರಿಸಿದರು.

ವೃತ್ತಿ ಬದುಕಿನಲ್ಲಿ ಹಲವಾರು ಏರಿಳಿತ ಕಂಡಿದ್ದೇನೆ. ಕೃಷಿ ಹಾಗೂ ನೀರಾವರಿಗೆ ಹೆಚ್ಚಿನಆದ್ಯತೆಕೊಟ್ಟು ಬರೆದುಜನರಿಗೆ ಸರ್ಕಾರದ ಯೋಜನೆಗಳನ್ನು ಮುಟ್ಟಿಸಿದ ಸಂತೃಪ್ತಿ ನನ್ನಲ್ಲಿ ಈಗಲೂ ಇದೆಎಂದು ಹೇಳಿದ ಅವರು, ಆಗ ಪತ್ರಿಕಾವೃತ್ತಿಗೆ ಸಾಮಾಜಿಕಜವಾಬ್ದಾರಿ, ಕಾಳಜಿ ಇತ್ತು.ಆದರೆ ಈಗ ಅದುಉದ್ಯಮವಾಗಿರುವುದರಿಂದ ಮಾಧ್ಯಮಗಳಲ್ಲಿ ಗುಣಮಟ್ಟ ಕುಸಿದಿದೆ.ಸೇವೆ ಎಂಬುದು ಮಾಯವಾಗಿದೆ.ಇನ್‌ವೆಸ್ಟಿಗೇಷನ್ ಜರ್ನಲಿಸಂ ಕಡಿಮೆಯಾಗಿದೆ.ಇಂತಹ ಸಂದರ್ಭದಲ್ಲೂ ಪತ್ರರ್ಕರು ವಿಷಯಾಧಾರಿತ ಪತ್ರಿಕೋದ್ಯಮದ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಬಹುದು ಎಂಬ ಭರವಸೆಯ ಮಾತುಗಳನ್ನಾಡಿದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here