-
ಜನಜಾಗೃತಿ ಯಾತ್ರೆಯಲ್ಲಿ ಮಳೆ ಪೀಡಿತರಿಂದ ಅಲ್ಲಂಪ್ರಭು ಅವರಿಗೆ ಮನವಿ
-
ತಮ್ಮ ಗೋಳು ತೋಡಿಕೊಂಡು ಮಧ್ಯಪ್ರವೇಶಕ್ಕೆ ಆಗ್ರಹಿಸಿದ ಮಳೆ ಸಂತ್ರಸ್ತರು
ಕಲಬುರಗಿ: ದಾರಾಕಾರ ಮಳೆಗೆ ಮನೆ ಕಲೆದುಕೊಂಡಿರುವ ತಾಲೂಕಿನ ಸಾವಳಗಿ ಗ್ರಾಮದ 65 ಸಂತ್ರಸ್ತರಿಗೆ ಇನ್ನೂ ಸರ್ಕಾರದ ಪರಿಹಾರ ದೊರಕದ ವಿಚಾರ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಜನಜಾಗೃತಿ ಪಾದಯಾತ್ರೆಯ ಕಾಲದಲ್ಲಿ ಬೆಳಕಿಗೆ ಬಂದಿದೆ.
ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್ ನೇತೃತ್ವದಲ್ಲಿ ಶುಕ್ರವಾರ ತಾಲೂಕಿನ ಸಾವಳಗಿಯಲ್ಲಿ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ನೂರಾರು ಜನರಲ್ಲಿ ನೋವು- ಯಾತನೆ ಹಾಊ ದುಗುಡದ ಭಾವದಿಂದ ಭಾಗವಹಿಸಿದ್ದ ಮಳೆ ಸಂತ್ರಸ್ತರು ತಮ್ಮ ಗೋಳು ಹೇಳಿಕೊಂಡರು.
ಮಳೆಯಿಂದ ಮನೆ ಬಿದ್ದಿವೆ. ಸಮೀಕ್ಷೆ ಮಾಡಿ ಹೆಸರು ದಾಖಲಿಸಿಕೊಂಡು ಹೋಗಿದ್ದರು. ತಹಸೀಲ್ದಾರ್ ಚೆಕ್ ಸಹ ಬರೆದಿದ್ದಾರೆ. ಆದರೆ 65 ಜನರ ಚೆಕ್ ತಡೆ ಹಿಡಿಯಲಾಗಿದೆ. ಹೀಗಾಗಿ ನಮ್ಮ ಗೋಳು ಯಾರೂ ಕೇಳೋರಿಲ್ಲದಂತಾಗಿದೆ. ಮಧ್ಯಪ್ರವೇಶ ಮಾಡುವಂತೆ ಕೋರಿದ್ದ ಸಂತ್ರಸ್ತರ ನೋವಿಗೆ ಸ್ಪಂದಿಸಿರುವ ಅಲ್ಲಂಪ್ರಭು ಪಾಟೀಲ್ ತಮ್ಮ ಪಾಯಾತ್ರೆ ಮುಗಿದ ತಕ್ಷಣ ಜಿಲ್ಲಾಧಿಕಾರಿಗೆ ಬೇಟಿ ಮಾಡಿ ಈ ವಿಷಯವಾಗಿ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
65 ಜನ ಮಳೆ ಪೀಡಿಪ ಚೆಕ್ ಸಿದ್ಧವಾಗಿದ್ದು ತಡೆ ಹಿಡಿದಿರುವ ಮಾಹಿತಿ ಇದೆ. ಇದರಲ್ಲಿ ರಾಜಕೀಯ ಅಡಗಿದೆ. ಸಂತ್ರಸ್ತರಲ್ಲಿ ಇವರೆಲ್ಲರೂ ಕಾಂಗ್ರೆಸ್‍ನವರು ಎಂಬ ಕಾರಣಕ್ಕಾಗಿಯೇ ಚೆಕ್ ನೀಡದಂತೆ ತಡೆ ಹಿಡಿಯಲಾಗಿದೆ ಎಂಬ ಆರೋಪಗಲಿವೆ. ಇದೆಲ್ಲವನ್ನು ತಾವು ಮುಂದಿನ 4 ದಿನದಲ್ಲಿ ಪರಿಶೀಲಿಸಿ ಜಿಲ್ಲಾಡಿತದ ಗಮನ ಸೆಳೆಯೋದಾಗಿಯೂ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ಸಾವಳಗಿಯಲ್ಲಿ ಸೇರಿದ್ದ ಭಾರಿ ಸಂಖ್ಯೆಯಲ್ಲಿ ಜನ ಅಲ್ಲಂಪ್ರಭು ಪಾಟೀಲರ ನೇತೃತ್ವದ ಕಾಂಗ್ರೆಸ್ ಪಾದಯಾತ್ರೆಗೆ ಬೆಂಬಲಸಿದರು. ಜೆಸಿಬಿ ಬಳಸಿ ಪುಷ್ಪವೃಷ್ಟಿ ಮಾಡಲಾಯ್ತು. ಮಾಳಿಗೆಯಲ್ಲಿ ನಿಂತು ಜನ ಹೂವನ್ನು ಸುರಿದರು. ಮಳೆಯಿಂದಾಗಿರುವ ಹಾನಿಗೆ ಬೇಗ ಪರಿಹಾರ ಕೊಡಿಸುವಂತೆ ಆಗ್ರಹಿಸಿದರು.