ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ “ರಾಷ್ಟ್ರೀಯ ಕ್ರೀಡಾ ದಿವಸ”ಆಚರಿಸಲಾಯಿತು.
ಕಾವ್ಯ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕ್ರೀಡಾ ವಿಭಾಗದ ಮುಖ್ಯಸ್ಥರಾದ ಡಾ.ಮಹೇಶ ಗಂವಾರ ಅವರು ಎಲ್ಲರನ್ನು ಸ್ವಾಗತಿಸಿ”ರಾಷ್ಟ್ರೀಯ ಕ್ರೀಡೆ ಕುರಿತು ಪ್ರಾಸ್ತವಿಕ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಹಾಕಿ ತರಬೇತುದಾರರಾಗಿರುವ ಶ್ರೀ ಸಂಜಯ ಬಾಣದ ಅವರು ಕ್ರೀಡಾ ಚಟುವಟಿಕೆಯ ಮಹತ್ವದ ಕುರಿತು ಮಾತನಾಡುತ್ತ”,ನಾವು ಆರೋಗ್ಯದಿಂದ ಜೀವಿಸಬೇಕಾದರೆ ಸದೃಢ ಶರೀರಕ್ಕಾಗಿ ಯಾವುದಾದರೊಂದು ಕ್ರೀಡೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು.
ನಮ್ಮನಿತ್ಯದ ಬದುಕಿನಲ್ಲಿ ರೂಢಿಸಕೊಳ್ಳಿ ಎನ್ನುತ್ತ, ಇಂದಿನ ವಿದ್ಯಾರ್ಥಿಗಳು ಪಾಠದೊಂದಿಗೆ ಆಟೋಟಗಳು ಬೆಳಸಿಕೊಳ್ಳಿರೆಂದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ರಾಜೇಂದ್ರ ಕೊಂಡಾ ಅವರು ಅಧ್ಯಕ್ಷೀಯ ಮಾತನಾಡಿದರು..ಪ್ರಿಯಾಂಕ ನಾಯಕ ವಂದನೆ ಸಲ್ಲಿಸಿದರು, ನಿಖಿತಾ.ಎನ್ ಕಾರ್ಯಕ್ರಮ ನಿರೂಪಿಸಿದರು.