ಯುವಕ ಯುವತಿಯರಿಗೆ ಸ್ವಾವಲಂಬಿ ಗ್ರಾಮದ ಪ್ರಶಿಕ್ಷಣ ತರಬೇತಿ ಕಾರ್ಯಗಾರ

0
21

ಬಸವರಾಜ ಪಾಟೀಲ್ ಸೇಡಂ ಅವರ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಗೆ ೨೧ ಲಕ್ಷ ರೂಪಾಯಿಗಳ ಧನಸಹಾಯ ಮಾಡುವ ಮೂಲಕ ನಾಡಿನ ಅಭಿವೃಧ್ಧಿಗೆ ಕೈಜೋಡಿಸುವೆ-ಡಾ:ಸುರೇಶ ಸಜ್ಜನ್ ಕಲಬುರ್ಗಿ-ಯಾದಗಿರಿ ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ

ಸುರಪುರ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಯುವಕ ಯುವತಿಯರಿಗೆ ಸ್ವಾವಲಂಬಿ ಗ್ರಾಮದ ಪ್ರಶಿಕ್ಷಣ ತರಬೇತಿ ಕಾರ್ಯಗಾರ ನಡೆಸಲಾಯಿತು.

Contact Your\'s Advertisement; 9902492681

ಕಾರ್ಯಗಾರವನ್ನು ಉದ್ಘಾಟಿಸಿದ ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್ ಮಾತನಾಡಿ,ಬಸವರಾಜ ಪಾಟೀಲ್ ಸೇಡಂ ಅವರ ನೇತೃತ್ವದಲ್ಲಿ ಇಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಮಾಡುತ್ತಿರುವ ಕಾರ್ಯ ಅಮೋಘವಾಗಿದೆ ಎಂದರು.ಇಂತಹ ಕಾರ್ಯಗಾರದ ಮೂಲಕ ಈ ಭಾಗದ ಯುವಕ ಯುವತಿಯರಿಗೆ ತರಬೇತಿಯನ್ನು ನೀಡಿ ಪ್ರತಿ ಗ್ರಾಮದ ಅಭೀವೃಧ್ಧಿಗೆ ಮುಂದಾಗಿಸುವ ಮೂಲಕ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃಧ್ಧಿಗೆ ಯೋಜನೆ ರೂಪಿಸಲಾಗಿದೆ.ಇಂತಹ ಕಾರ್ಯಕ್ರಮದ ಉದ್ಘಾಟನೆ ಭಾಗ್ಯ ನನಗೆ ಸಿಕ್ಕಿರುವುದು ಸಂತೋಷ ತಂದಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಗಿರಿಧರ ಪೂಜಾರ ಹಾಗೂ ಲೀಲಾ ಮಲ್ಲಿಕಾರ್ಜುನ ಕಾರಟಗಿ ಮಾತನಾಡಿ,ಬಸವರಾಜ ಪಾಟೀಲ್‌ಜಿ ಅವರ ಮಾರ್ಗದರ್ಶನದಲ್ಲಿ ಇಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಸಂಘದ ಮೂಲಕ ನಡೆಯುತ್ತಿರುವ ಕಾರ್ಯಗಳು ಇಂದು ಬಿ.ಬಿ.ಎಮ್.ಪಿ ಯವರಿಗೂ ಮಾದರಿಯಾಗಿದ್ದು ಶಿಕ್ಷಣ ಕ್ಷೇತ್ರದ ಅಭೀವೃಧ್ಧಿಗಾಗಿ ಸಂಘದ ಯೋಜನೆಗಳನ್ನು ಬೆಂಗಳೂರಲ್ಲಿಯೂ ಜಾರಿಗೆ ತರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ನಮ್ಮ ಗ್ರಾಮೀಣ ಭಾಗದಲ್ಲಿ ಇರುವ ಸಂಪನ್ಮೂಲಗಳು ಅಲ್ಲಿಯೇ ಬಳಕೆಯಾಗಿ ಗ್ರಾಮಗಳ ಅಭಿವೃಧ್ಧಿಯಾಗಬೇಕು ಎಂಬುದು ಪಾಟೀಲ್‌ಜಿ ಕನಸಾಗಿದ್ದು ಅದಕ್ಕಾಗಿ ಇಂತಹ ಅನೇಕ ಕಾರ್ಯಗಾರಗಳು ನಡೆಯಲಿವೆ,ಯುವಕ ಯುವತಿಯರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.ಗ್ರಾಮೀಣ ಭಾಗದ ರೈತರು ಬೆಳೆದ ಫಸಲಿನಲ್ಲಿ ಉತ್ತಮ ಗುಣಮಟ್ಟದ ಧಾನ್ಯವನ್ನು ಮಾರಾಟ ಮಾಡಿ ರೈತರು ಕಳಪೆಯಾಗಿರುವುದನ್ನು ಸೇವಿಸುತ್ತಾರೆ.ಇದರಿಂದ ಆರೋಗ್ಯ ಹಾಳಾಗುವುದರ ಜೊತೆಗೆ ಉತ್ತಮವಾದ ಜೀವನವು ಸಾಧ್ಯವಿಲ್ಲ,ಆದ್ದರಿಂದ ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳ ಸೇವನಗೆ ಯುವಕ ಯುವತಿಯರು ಜಾಗೃತಿ ಮೂಡಿಸಬೇಕು ಹಾಗೂ ರೈತರು ರಾಸಾಯನಿಕ ಬಳಕೆಯನ್ನು ಕೈಬಿಟ್ಟು ಗೊಮೂತ್ರ ಹಾಗೂ ಕೊಟ್ಟಿಗೆ ಗೊಬ್ಬರದ ಮೂಲಕ ಕೃಷಿಗೆ ಒತ್ತು ನೀಡಬೇಕೆಂದು ಕರೆ ನೀಡಿದರು.

ಸಂಘದ ಜಿಲ್ಲಾ ಸಂಚಾಲಕ ನೀಲಕಂಠ ಎಲ್ಹೇರಿ ಪ್ರಾಸ್ತಾವಿಕವಾಗಿ ಮಾತನಾಡಿ,ಯಾದಗಿರಿ ಜಿಲ್ಲೆಯ ೫೦೫ ಹಳ್ಳಿಗಳಲ್ಲಿ ಯುವಕರಿಗೆ ಸ್ವಾವಂಬಿ ಬದುಕಿಗಾಗಿ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದರು.೬೦೦ ಜನರಿಗೆ ಶಿಕ್ಷಣದ ಕುರಿತು ತರಬೇತಿ ನೀಡಲಾಗಿದೆ,ಯುವಕ ಯುವತಿಯರಿಗಾಗಿ ಸ್ವಯಂ ಉದ್ಯೋಗ ಯಂತ್ರಗಳನ್ನು ನೀಡಲಾಗಿದೆ,ಗ್ರಾಮೀಣ ಭಾಗದಲ್ಲಿ ಜನರ ಸಮಸ್ಯೆ ಅರಿಯಲು ಆಪ್ತ ಸಲಹಾ ಕೇಂದ್ರಗಳೂ ಕಾರ್ಯನಿರ್ವಹಿಸುತ್ತಿವೆ,೧೫೦ ಹಳ್ಳಿಗಳ ೧ ಸಾವಿರ ಯುವಕ ಯುವತಿಯರಿಗೆ ಸ್ವಾವಲಂಬಿ ಗ್ರಾಮ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಶಾಂತರಡ್ಡಿ,ಹೆಚ್.ಸಿ ಪಾಟೀಲ್ ಮಾತನಾಡಿದರು. ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್,ವೇಣುಗೋಪಾಲ ನಾಯಕ ಜೇವರ್ಗಿ,ನಾರಾಯಣಚಾರ್ಯ ಸಗರ,ರಾಘವೇಂದ್ರ ಕಾಮನಟಿಗಿ,ಶೈಲಜಾ ಶೆಳ್ಳಗಿ ವೇದಿಕೆ ಮೇಲಿದ್ದರು.ಕಾರ್ಯಕ್ರಮದಲ್ಲಿ ಸಂಘದ ಅನೇಕ ಜನ ಸಂಚಾಲಕರು,ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೂ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು,ಡಿ.ಸಿ ಪಾಟೀಲ್ ಕೆಂಭಾವಿ ಸ್ವಾಗತಿಸಿದರು,ಮೌನೇಶ ನಾಯಕ ತಿಂಥಣಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here