ಕಲಬುರಗಿ: ಸಹಕಾರಿ ಧುರೀಣರು, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ನಾಯಕರಾದ ಅಪ್ಪಾರಾವ ಪಾಟೀಲ ಅತನೂರ ಅವರ ೭೫ನೇ ಜನ್ಮ ದಿನದ ಅಮೃತ ಮಹೋತ್ಸವ, ೫೦ನೇ ಸಹಕಾರಿ ಕ್ಷೇತ್ರದ ಸುವರ್ಣ ಮಹೋತ್ಸವ ಹಾಗೂ ೫೦ನೇ ಮದುವೆಯ ವಾರ್ಷಿಕೋತ್ಸವ ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವನ್ನು ಸೆ.೪ರಂದು ನಗರದ ಜಿಲ್ಲಾ ವೀರಶೈವ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಅಲ್ಲಮಪ್ರಭು ಪಾಟೀಲ ನೆಲೋಗಿ, ಕಾರ್ಯಾಧ್ಯಕ್ಷ ಸುರೇಶ ಸಜ್ಜನ್, ಕಾರ್ಯದರ್ಶಿ ಶರಣಕುಮಾರ ಬಿಲ್ಲಾಡ ತಿಳಿಸಿದರು.
ಈ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಿಜಯಪುರ ಗಾಣಿಗ ಗುರುಪೀಠದ ಪೂಜ್ಯಶ್ರೀ ಡಾ. ಜಯ ಬಸವಕುಮಾರ ಸ್ವಾಮೀಜಿ ವಹಿಸುವರು. ಶ್ರೀಶೈಲಂ-ಸುಲಫಲ ಮಠದ ಪೂಜ್ಯಶ್ರೀ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ನೇತೃತ್ವ ವಹಿಸುವರು. ಶಿವಾನಂದ ಸ್ವಾಮಿಗಳು ಸೊನ್ನ, ವೀರಭದ್ರ ಶಿವಾಚಾರ್ಯರು, ಸಿದ್ಧರಾಮ ಶಿವಾಚಾರ್ಯರು, ಡಾ. ಚನ್ನಮಲ್ಲೇಶ್ವರ ಶಿವಾಚಾರ್ಯರು, ಡಾ. ರಾಜಶೇಖರ ಶಿಚಾರ್ಯರು, ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಚಂದ್ರಗುಂಡ ಶಿವಾಚಾರ್ಯರು, ಅಭಿನವ ಗುರುಬಸವ ಶಿವಾಚಾರ್ಯರು, ಅತನೂರ ಗುರುಮಠ ರುದ್ರಮುನಿ ಚನ್ನಬಸಯ್ಯ ಸ್ವಾಮಿ ಘನ ಉಪಸ್ಥಿತಿ ವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲೋಕಸಭೆ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಲಿದ್ದಾರೆ. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ. ಬಸವರಾಜ ಸೇಡಂ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ, ಹಾಲಿ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೋಕಸಭೆ ಸದಸ್ಯರು, ಶಾಸಕರು, ಮಾಜಿ ಶಾಸಕರು, ವಿವಿಧ ಪಕ್ಷದ, ಸಮಾಜದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. ಡಾ. ಗುರುಲಿಂಗಪ್ಪ ಪಾಟೀಲ, ಡಾ. ಶಿವರಾಜ ಪಾಟೀಲ, ಅರುಣಕುಮಾರ ಪಾಟೀಲ, ಡಾ. ಶ್ರೀಶೈಲ ಘೂಳಿ, ಅಶೋಕ ಪಾಟೀಲ ಅತನೂರ, ವೀರಭದ್ರ ಸಿಂಪಿ ಮತ್ತಿತರರಿದ್ದರು.
ಅತನೂರ ಗೌಡರು ಎಂದೇ ಖ್ಯಾತರಾಗಿರುವ ಅಪ್ಪಾರಾವ ಪಾಟೀಲ ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಸೇವೆಗೈಉವ ಮೂಲಕ ಜನಾನುರಾಗಿ ನಾಯಕರಾಗಿ ಬೆಳೆದಿದ್ದಾರೆ. ಅವರ ಹಿತೈಷಿ ಬಳಗ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಪಕ್ಷಾತೀತ, ಜಾತ್ಯತೀತ, ಧರ್ಮತೀತವಾಗಿ ಆಯೋಜಿಸಲಾಗಿದೆ. ಇಂಥವರ ಗೌರವಿಸುವ ಕಾರ್ಯ ಸಮಾಜಕ್ಕೆ ಪ್ರೇರಣೆಯಾಗಲಿದೆ.