ಕಲಬುರಗಿ: ನಗರದ ಜಿಲ್ಲಾ ಜಿಮ್ಸ್ ವೈದ್ಯಕೀಯ ಮಹಾವಿದ್ಯಾಲಯದ 5ನೇ ಮಹಡಿಯ ಸಭಾಂಗಣದಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕೇಂದ್ರ, ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರದ ವತಿಯಿಂದ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು 12 ರಿಂದ 29 ರ ವರೆಗೆ ನಡೆಯುವ “ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ”ದ ತರಬೇತಿ ಹಾಗೂ ಮಾನಸಿಕ ಆರೋಗ್ಯ ಕುರಿತು ಒಂದು ದಿನದ ತರಬೇತಿ ಹಮ್ಮಿಕೊಳ್ಳಲಾಯಿತು.
ಮೊದಲಿಗೆ ಸಸಿಗೆ ನೀರು ಏರೆಯುವ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ರಾಜಶೇಖರ ಮಾಲಿ ಉದ್ಘಾಟಿಸಿ ನೆರವೇರಿಸಿದರು. ನಂತರ ಅವರು ಮಾತನಾಡುತ್ತಾ ಪ್ರತಿ ಒಬ್ಬರು ಕೆಲಸದ ಜವಾಬ್ದಾರಿಯು ಹೆಚ್ಚಾದಂತೆ ಮಾನಸಿಕ ಒತ್ತಡದಿಂದ ಆತ್ಮಸ್ಥೈರ್ಯ ಕಳೆದುಕೋಳ್ಳಬರದು. ಧೈರ್ಯವಾಗಿ ಉತ್ತಮ ಜೀವನ ನಡೆಸಬೇಕು ಈ ತರಬೇತಿಯ ಲಾಭ ಪಡೆಯಬೇಕು ಎಂದು ಹೇಳಿದರು.
ಪ್ರಮುಖರಾದ ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್. ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಮತ್ತು ಮಾನಸಿಕ ಆರೋಗ್ಯಾಧಿಕಾರಿಗಳಾದ ಡಾ. ರಾಜಕುಮಾರ ಕುಲಕರ್ಣಿ , ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಹಿರಿಯ ವೈದ್ಯಾಧಿಕಾರಿ ಡಾ. ವಿಜಯಲಕ್ಷ್ಮಿ ವಲ್ಯಾಪೂರೆ. ತರಬೇತುದಾರಾದ, ಜಿಲ್ಲಾ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಜಯಮ್ಮ ಗಣಜಲಖೇಡ್, ಡಾ. ಇರ್ಫಾನ್ . ಡಾ. ರೇಣುಕಾ ಬಗಾಲೆ. ಹಿರಿಯ ನೀರಿಕ್ಷಾಣಧಿಕಾರಿ ಕಾಶಿನಾಥ ಯಲಗೊಂಡೆ, ಹಣಮಂತ, ಯಡ್ದಳ್ಳಿ . ಸೈಕಿಯಾಟ್ರಿಕ್ ಸಂತೋಷಿ ಗೋಳೆ. ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್ಕರ್ ನಾಗರಾಜ ಬಿರಾದಾರ. ವೇದಿಕೆ ಮೇಲೆ ಇದ್ದರು. ಇದೇ ಸಂದರ್ಭದಲ್ಲಿ ಕುಷ್ಠರೋಗ ಬಿತ್ತಿ ಪತ್ರ ಪೋಸ್ಟರ್ ಬಿಡುಗಡೆ ಗೊಳಿಸಲಾಯಿತು.
ತರಬೇತಿಗೆ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ತರಬೇತಿಯಲ್ಲಿ ಭಾಗವಹಿಸಿದರು.