ಕಲಬುರಗಿ: ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವಣ್ಣನವರು ಮತ್ತು ಸಮಾಜದಲ್ಲಿ ಜಾತಿ ಪದ್ಧತಿ ಹೋಗಲಾಡಿಸಿ ಸಮಾನತೆಯ ಪರಿವರ್ತನೆ ತಂದ ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಹೇಳಿದರು.
ಶನಿವಾರ ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹನ್ನೆರಡನೇ ಶತಮಾನದಲ್ಲಿ ಇಡೀ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಬಸವಣ್ಣವರ ಹಾದಿಯಲ್ಲಿ ಸಾಗಿದ್ದ ನಾರಾಯಣ ಗುರುಗಳು ಶೋಷಿತರು, ದಲಿತರು, ಹಿಂದುಳಿದವರ ಏಳಿಗೆಗೆ ಶ್ರಮಿಸಿದ ಮಹಾನ್ ಪರುಷರಾಗಿದ್ದಾರೆ ಎಂದರು.
ಕಲಬುರಗಿ ನಗರದ ರಾಜಾಪೂರ ಕ್ರಾಸ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ವೃತ್ತವೆಂದು ಘೋಷಿಸಲಾಗುವುದು. ಅಪ್ಪನ ಕೆರೆಯ ಸುತ್ತಮುತ್ತ ಬಸವಾದಿ ಶರಣರ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದ್ದು, ಅಲ್ಲಿ ನಾರಾಯಣ ಗುರುಗಳ ಪುತ್ಥಳಿ ಸಹ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದ ಅವರು ನಗರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೂ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.
ಕಲಬುರಗಿ ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಅವರು ವಿಶೇಷ ಉಪನ್ಯಾಸ ನೀಡುತ್ತಾ, ಗೋಕರ್ಣದ ದೇವಸ್ಥಾನವೊಂದರಲ್ಲಿ 1908ಕ್ಕೂ ಮುನ್ನ ಒಮ್ಮೆ ಸಿರಿವಂತ ಹಿಂದುಳಿದ ಸಮುದಾಯವರು ಲಿಂಗ ಪೂಜೆ ಮಾಡಿದರು.
ಪೂಜೆಯ ನಂತರ ಇವರು ಶೋಷಿತ ಸಮುದಾಯವೆಂದು ತಿಳಿದ ದೇವಸ್ಥಾನದÀ ಅರ್ಚಕರು ದಂಡ ಹಾಕಲು ಮುಂದಾಗಿದ್ದರು. ವಿಷಯ ಅರಿತ ಬ್ರಹಶ್ರೀ ನಾರಾಯಣ ಗುರುಗಳು, ಸಿರಿವಂತ ದೇವಸ್ಥಾನಕ್ಕೆ ನೀವೇಕೆ ಹೋಗುವಿರಿ, ನೀವೇ ದೇವಸ್ಥಾನ ನಿರ್ಮಿಸಿ ಎಂದು ಹೇಳಿದಲ್ಲದೆ ಮುಂದೆ ಮಂಗಳೂರಿನ ಕುದ್ರೋಳಿಯಲ್ಲಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ನಿರ್ಮಾಣಕ್ಕೆ ತಾವೇ ಸ್ವತ ಬಂದು 1912ರಲ್ಲಿ ಅಡಿಪಾಯ ಹಾಕಿದರು.
ಆಗ ಹಿಂದುಳಿದ, ಶೋಷಿತ ಸಮುದಾಯವರಿಗೆಂದೇ 39 ದೇವಸ್ಥಾನ ನಿರ್ಮಿಸಿದ ಕೀರ್ತಿ ನಾರಾಯಣ ಗುರುಗಳಿಗೆ ಸಲ್ಲುತ್ತದೆ. ಸ್ವಾತಂತ್ರ್ಯದ ಚಳುವಳಿ ಭಾಗವಾಗಿ ನಾರಾಯಣ ಗುರುಗಳ ಆಶ್ರಮಕ್ಕೆ ಭೇಟಿ ನೀಡಿದ ಗಾಂಧೀಜಿ ಅವರಿಗೆ ಗುರುಗಳು, ಸ್ವಾತಂತ್ರ್ಯ ಇಂದಲ್ಲಾ ನಾಳೆ ಸಿಗುತ್ತದೆ. ಅದಕ್ಕೂ ಮುನ್ನ ಈ ನೆಲದ ಹಿಂದುಳಿದ, ಶೋಷಿತ ಸಮುದಾಯಕ್ಕೆ ಧಾರ್ಮಿಕ, ಸಾಮಾಜಿಕ ಸ್ವಾತಂತ್ರ್ಯ ಕೊಡಿಸಿ ಎಂದು ಒತ್ತಾಯ ಮಾಡಿದ್ದರು ಎಂದರು.
ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ, ಮಾಜಿ ಉಪಾಧ್ಯಕ್ಷ ಹμರ್Áನಂದ ಗುತ್ತೇದಾರ ಮಾತನಾಡಿದರು. ಕಲಬುರಗಿ ಆರ್ಯ ಈಡಿಗ ಸಮಾಜದ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ ಸಮಿತಿಯ ಜಿಲ್ಲಾಧ್ಯಕ್ಷ ರಾಜೇಶ ಜಗದೇವ ಗುತ್ತೇದಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಿತ್ತಾಪುರ ತಾಲೂಕಿನ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೂಜ್ಯ ಶ್ರೀ ಡಾ. ಪ್ರಣವಾನಂದ ಸ್ವಾಮೀಜಿ ಮತ್ತು ಶ್ರೀ ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ದಾಕ್ಷಾಯಿಣಿ ಅವ್ವ ಅವರು ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುμÁ್ಪರ್ಚನೆ ಮಾಡಿದಲ್ಲದೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಸತ್ಕಾರ: ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ.ಯಲ್ಲಿ ಶೇ.90ಕ್ಕಿಂತ ಹೆಚ್ಚಿನ ಅಂಕ ಪಡೆದ ಆರ್ಯ ಈಡಿಗ ಸಮಾಜದ ವಿದ್ಯಾರ್ಥಿಗಳನ್ನು ಮತ್ತು ನೀಟ್ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸಮಾಜದ ಕೀರ್ತಿ ಹೆಚ್ಚಿಸಿದ ಯರಗೋಳ ಗ್ರಾಮದ ರಾಕೇಶ ಕಾಶಿನಾಥ ಕಲಾಲ್ ್ದವರಿಗೆ ಸನ್ಮಾನಿಸಲಾಯಿತು. ಇದಲ್ಲದೆ ಪತ್ರಿಕೋದ್ಯಮದಲ್ಲಿನ ಸೇವೆಗೆ ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕ ದೇವಯ್ಯ ಗುತ್ತೇದಾರ, ಕಲಾ ಸೇವೆಯಲ್ಲಿ ಸಾಧನೆಗೆ ಕಲಾವಿದೆ ಮೀನಾಕ್ಷಿ ಅಂಬಯ್ಯ ಗುತ್ತೇದಾರ, ಕರದಾಳದಲ್ಲಿ ನಾರಾಯಣ ಗುರುಗಳ ಶಕ್ತಿ ಪೀಠಕ್ಕೆ ಜಮೀನು ದಾನ ಮಾಡಿದ ಸುರೇಶ ಕರದಾಳ, ಸಿ.ಸಿ.ಬಿ. ಕಚೇರಿಯ ಸುಧಾಕರ ಅವರಿಗೆ ನಾರಾಯಣ ಗುರುಗಳ ಭಾವಚಿತ್ರ ನೀಡಿ ವಿಶೇಷವಾಗಿ ಸತ್ಕರಿಸಲಾಯಿತು.
ಭವ್ಯ ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕಲಬುರಗಿ ನಗರದ ಎಸ್.ವಿ.ಪಿ.ವೃತ್ತದಿಂದ ಡಾ.ಎಸ್.ಎಂ. ಪಂಡಿತ್ ರಂಗಮಂದಿರ ವರೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಲಾ ತಂಡಗಳು ಅದ್ಭುತ ಕಲೆ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಡಾ.ಉಮೇಶ ಜಾಧವ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ, ಶ್ರೀ ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿ ಬಸವರಾಜ ದೇಶಮುಖ, ಪಾಲಿಕೆ ಸದಸ್ಯರಾದ ಪ್ರಭು ಹಾದಿಮನಿ, ವಿಜಯಕುಮಾರ ಸೇವಲಾನಿ, ಡಿ.ಸಿ. ಕಚೇರಿಯ ತಹಶೀಲ್ದಾರ ಮಹಾಂತೇಶ ಮುಡಬಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ದತ್ತಪ್ಪ ಸಾಗನೂರ, ಕಲಬುರಗಿ ಆರ್ಯ ಈಡಿಗ ಸಮಾಜದ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ ಸಮಿತಿಯ ಜಿಲ್ಲಾಧ್ಯಕ್ಷ ರಾಜೇಶ ಜಗದೇವ ಗುತ್ತೇದಾರ್, ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯ ಶಿವರಾಜ ಪಟೀಲ ರದ್ದೆವಾಡಗಿ, ಅರವಿಂದ ಚವ್ಹಾಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಮಹಾದೇವ ಗುತ್ತೇದಾರ, ವೆಂಕಟೇಶ ಕಡೆಚೂರ, ಕುಪೇಂದ್ರ ಗುತ್ತೇದಾರ, ಬಾಲರಾಜ ಗುತ್ತೇದಾರ ಸೇರಿದಂತೆ ತಾಲೂಕಿನ ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜದ ಗಣ್ಯರು, ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ವಿನೋದ ಗುತ್ತೇದಾರ ಸ್ವಾಗತಿಸಿದರು. ಕಾಶಿನಾಥ ಗುತ್ತೇದಾರ ನಿರೂಪಿಸಿದರು.