ಆಳಂದ: ಭೂಸನೂರು ಗ್ರಾಮಕ್ಕೆ ಈ ಶಾಸಕತ್ವದ ಅವಧಿಯಲ್ಲಿ ಸುಮಾರು 3 ಕೋ. ರೂ. ಅನುದಾನ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ಶನಿವಾರ ಭೂಸನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಘನ ತ್ಯಾಜ್ಯ ವಿಲೇವಾರಿ ಘಟಕ ಕಟ್ಟಡದ ಉದ್ಘಾಟನೆ, ಹೊಸ ನೀರಿನ ಟ್ಯಾಂಕ್ ಉದ್ಘಾಟನೆ, ಸಿಸಿ ರಸ್ತೆಯ ನಿರ್ಮಾಣ, ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮಗಳ ವಿಕಾಸವಾಗದ ಹೊರತು ದೇಶ ಅಭಿವೃದ್ಧಿಯಾಗಲ್ಲ ಈ ನಿಟ್ಟಿನಲ್ಲಿ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಈ ನಿಟ್ಟಿನಲ್ಲಿ ಹಳ್ಳಿಗಳಲ್ಲಿನ ಗಂಭೀರ ಸಮಸ್ಯೆಗಳನ್ನು ಪರಿಗಣನೆಗೆ ತೆಗೆದುಕೊಂಡು ಆದ್ಯತೆಯ ಮೇಲೆ ಅನುದಾನ ನೀಡಿ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಭೂಸನೂರು ಗ್ರಾಮ ಕೃಷಿ ಮತ್ತು ಕೈಗಾರಿಕೆಯ ದೃಷ್ಟಿಯಿಂದ ಅಗಾಧವಾಗಿ ಬೆಳದಿದೆ ಇಲ್ಲಿನ ಜನರ ಪ್ರಮುಖ ಆದಾಯದ ಮೂಲ ಕೃಷಿಯಾಗಿರುವುದರಿಂದ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಿದ್ದೇನೆ ಅಲ್ಲದೇ ಭೂಸನೂರು ಸುತ್ತಮುತ್ತಲಿನ ಹಳ್ಳಿಗಳಿಗೂ ಆದ್ಯತೆ ನೀಡಿ ಕೆಲಸ ಮಾಡಲಾಗಿದೆ ಎಂದು ನುಡಿದರು.
ಅಭಿವೃದ್ಧಿಯ ವಿಷಯದಲ್ಲಿ ತಾವೆಂದು ರಾಜಕಾರಣ. ಮಾಡಿಲ್ಲ ನಮ್ಮ ಜನಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಶ್ರಮಿಸುತ್ತಿದ್ದೇನೆ. ನಾವು ಕೆಲಸಗಾರರು ಹೀಗಾಗಿ ಕೆಲಸಕ್ಕೆ ಆದ್ಯತೆ ನೀಡುತ್ತೇವೆ ಅಲ್ಲದೇ ನಾನು ನಾಲ್ಕು ಬಾರಿ ಶಾಸಕನಾಗಿರುವುದಕ್ಕೆ ಆಳಂದ ಜನತೆಯ ಆಶೀರ್ವಾದವೇ ಕಾರಣವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೂಸನೂರ ಹಿರೇಮಠ ಶ್ರೀಗಳು, ಗ್ರಾ.ಪಂ ಅಧ್ಯಕ್ಷೆ ಶಿವಲೀಲಾ ಚಂದ್ರಶೇಖರ ಸಾಹು, ಜೆಸ್ಕಾಂ ನಿರ್ದೇಶಕ ವೀರಣ್ಣ ಮಂಗಾಣೆ, ಕೆಕೆಆರ್‍ಟಿಸಿ ನಿರ್ದೇಶಕ ಮಲ್ಲಿಕಾರ್ಜುನ ತಡಕಲ, ಮುಖಂಡರಾದ ರಾಜಶೇಖರ ಮಲಶೆಟ್ಟಿ, ಶರಣಪ್ಪ ಮಲಶೆಟ್ಟಿ, ಅನಂತರಾಜ ಸಾಹು, ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ, ಶರಣಪ್ಪ ಪಾಟೀಲ, ಗುರುನಾಥ ಪಾಟೀಲ, ರುದ್ರಯ್ಯ ಹಿರೇಮಠ, ಲಕ್ಷ್ಮಣ ಬೀಳಗಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸರಾಜ ಪ್ರಸನ್ನ, ಗ್ರಾಮೀಣಾಭಿವೃದ್ಧಿ ಇಲಾಖೆಯ ನಾಗಮೂರ್ತಿ ಶೀಲವಂತ, ಅಧಿಕಾರಿಗಳಾದ ಗೌತಮ ಕಾಂಬಳೆ, ಸಂಪತಕುಮಾರ, ಶರಣಬಸಪ್ಪ ಕಡಗಂಚಿ ಸೇರಿದಂತೆ ಇಲಾಖೆ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.