ಕಲಬುರಗಿ: ಅವರಾದ್(ಕೆ) ಗ್ರಾಮದಲ್ಲಿಅಸಮರ್ಪಕಕಟ್ಟಡ ಹೊಂದಿರುವಎಲ್ಲ ಮನೆಗಳನ್ನು ಕೆಡವಿ ಸುಸಜ್ಜಿತವಾದ, ಸಕಲ ಸೌಕರ್ಯಗಳನ್ನು ಹೊಂದಿದ ಮನೆಗಳನ್ನು ಪುನರ್ ನಿರ್ಮಾಣ ಮಾಡಿಕೊಡಬೇಕು ಎಂದು ಅಖಿಲ ಭಾರತಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಚಂದಮ್ಮ ಗೋಳಾ, ಪ್ರಧಾನ ಕಾರ್ಯದರ್ಶಿ ಪದ್ಮಿನಿ ಕಿರಣಗಿ ಸರಕಾರಕ್ಕೆ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿದರು.ಅವರಾದ್(ಕೆ) ಗ್ರಾಮದಲ್ಲಿ ಹೊಸದಾಗಿ ನಿರ್ಮಿತವಾದ (ಗ್ರಾಮ ಸ್ಥಳಾಂತರದಿಂದ) ಮನೆಗಳ ದುಸ್ಥಿತಿಯ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಇಲ್ಲಿವರೆಗೂಯಾರೂ ಸ್ಪಂದಿಸಿಲ್ಲ, ಯಾವ ಅಧಿಕಾರಿಗಳು ಗ್ರಾಮಕ್ಕೆ ಭೇಟಿಕೊಟ್ಟಿಲ್ಲ. ಹೀಗಾಗಿ ಸೆ.೧೫ರ ಒಳಗಾಗಿ ಕ್ರಮ ಕೈಗೊಳ್ಳದೇ ಇದ್ದರೆ ಸೆ.೧೬ರಂದು ಅಖಿಲ ಭಾರತಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಪ್ರಾಂತರೈತ ಸಂಘ, ದಲಿತ ಹಕ್ಕುಗಳ ಸಮಿತಿ ಹಾಗೂ ಅವರಾದ್‌ಗ್ರಾಮಸ್ಥರು ಸೇರಿರಹತಾಬಾದದ್‌ರಾಜ್ಯ ಹೆದ್ದಾರಿಯಲ್ಲಿರಸ್ತೆತಡೆದು ಪ್ರತಿಭಟನೆ ನಡೆಸಲಾಗುವುದುಎಂದರು.
ಹೊಸ ಮನೆಗಳ ನಿರ್ಮಾಣವಾಗುವರೆಗೂ ತಾತ್ಕಾಲಿಕ ಶಡ್‌ಗಳನ್ನು ನಿರ್ಮಿಸಿ ಗ್ರಾಮಸ್ಥರಿಗೆಅಲ್ಲಿಯೇ ವಾಸಿಸಲು ಅನುವು ಮಾಡಿಕೊಡಬೇಕು. ಶೌಚ, ಶೌಚ ಕೊಳವೆ, ಸೇಫ್ಟಿಟ್ಯಾಂಕ್, ರಸ್ತೆ, ಚರಂಡಿ ಮತ್ತು ವಿದ್ಯುತ್ ಸೌಲಭ್ಯಗಳನ್ನು ಹೊಸದಾಗಿ ನಿರ್ಮಾಣವಾಗುವ ಮನೆಗಳಿಗೆ ಒದಗಿಸಬೇಕು.ಕಳಪ ಮಟ್ಟದ ಮನೆ ನಿರ್ಮಾಣ ಮಾಡಿದ ವಿರುದ್ಧ ಕಳಪೆ ಕಾಮಗಾರಿಯ ಬಗ್ಗೆ ತನಿಖೆ ನಡೆಸಬೇಕು.ಶ್ರೀಮಂತ ಬಿರಾದಾರ್, ಸುಧಾಮಧನ್ನಿ, ಜಗದೇವಿ ನೂಲಕರ್, ಶಶಿಕಲಾ ಪಾಟೀಲ್ ಇತರರಿದ್ದರು.