ವಿಶೇಷ ಚೇತನರೆಡೆಗೆ ಗಮನಹರಿಸಲು ಮನವಿ

0
23

ಕಲಬುರಗಿ: ೧೫ ವರ್ಷಗಳಿಂದ ಗೌರವಧನಆದಾರದ ಮೇಲೆ ಕಾರ್ಯನಿರ್ವಹಿಸುತ್ತಿರುವಎಂಆರ್‌ಡಬ್ಲ್ಯು, ವಿಆರ್‌ಡಬ್ಲ್ಯು, ಯುಆರ್‌ಡಬ್ಲ್ಯು ವಿಶೇಷಚೇತನರಕಾರ್ಯಕರ್ತರಿಗೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಸೆ.೧೫ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಠಾವಧಿಧರಣಿ ಹಮ್ಮಿಕೊಳ್ಳಲಾಗಿದೆ ಎಂದುಎಂಆರ್‌ಡಬ್ಲ್ಯು, ವಿಆರ್‌ಡಬ್ಲ್ಯು, ಯುಆರ್‌ಡಬ್ಲ್ಯುಅಧ್ಯಕ್ಷಅಂಬಾಜಿ ಮೇಟಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿದರು.ಎಲ್ಲರಿಗೂ ಕನಿಷ್ಠ ವೇತನ ಪಾವತಿ ಮಾಡಬೇಕುಎಂದು ಹೇಳಲಾಗುತ್ತಿದೆ.ಆದರೆ, ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಕೆಲಸ ಮಾಡುವ ವಿಶೇಷಚೇತನರತಾಲೂಕು ಪುನರ್ವಸತಿಕಾರ್ಯಕರ್ತರಿಗೆ ಕೇವಲ ರೂ.೬೦೦೦ ಸಂಬಳ ನೀಡುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ.ಈ ಬಗ್ಗೆ ಸರಕಾರ ವಿಶೇಷಚೇತನರ ಮನವಿ ಕೇಳಿಸಿಕೊಳ್ಳಬೇಕು ಎಂದು ಆಗ್ರಹಿಸಿಸಿದರು.

Contact Your\'s Advertisement; 9902492681

ರಾಜ್ಯದಲ್ಲಿಇತ್ತೀಚೆಗೆ ಹೊಸ ಪಂಚಾಯಿತಿಗಳು ಘೋಷಣೆಯಾಗಿದ್ದು, ಘೋಷಣೆಆದ ಪಂಚಾಯಿತಿಗಳಿಗೆ ಎಂಆರ್‌ಡಬ್ಲ್ಯು ನೇಮಕಾತಿ ಮಾಡಿಕೊಳ್ಳವಂತೆ ಆದೇಶ ಹೊರಡಿಸಬೇಕು. ರಾಜ್ಯಾದ್ಯಂತ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್‌ಗೆಒಬ್ಬರಂತೆಯುಆರ್‌ಡಬ್ಲ್ಯುಕಾರ್ಯಕರ್ತರನ್ನು ನೇಮಕಾತಿ ಮಾಡಿಕೊಳ್ಳಬೇಕು. ತಾಲೂಕು ಮತ್ತುಗ್ರಾಮ ಪಂಚಾಯಿಗಳಲ್ಲಿ ವಿಶೇಷಚೇತನರ ಶೇ.೫ರಷ್ಟು ಎಂಆರ್‌ಡಬ್ಲ್ಯು, ವಿಆರ್‌ಡಬ್ಲ್ಯುಗಳಿಗೆ ಪಂಚಾಯಿತಿಗಳಲ್ಲಿ ಕುಳಿತು ಕೆಲಸ ಮಾಡುವ ಮೂಲಸೌಲಭ್ಯ ವದಗಿಸಬೇಕುಆದೇಶ ಹೊರಡಿಸಬೇಕುಎಂದು ಒತ್ತಾಯಿಸಿದರು.

ತುಳಿಸಿರಾಮ ಹಿರೋಳಿ, ದತ್ತಾತ್ರೇಯಕುಡಕಿ, ವೆಂಕಟಪ್ಪಚವ್ಹಾಣ, ಖಾಸಿಂಸಾಬ್ ಡೊಂಗರಗಾಂವ, ರಾಜೇಂದ್ರಕಮಕನೂರ, ಸಿದ್ಧಾರೂಢ ಬಿರಾದಾರ,ಶರಣಪ್ಪ ಕೌಲಗಿ, ನಾಗರಾಜಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here