ಶ್ರೀ ಪ್ರಭು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಇತಿಹಾಸ ಜಾಗೃತಿ ಜಾಥಾ

0
46

ಸುರಪುರ: ಶ್ರೀ ಪ್ರಭು ಕಲಾ ವಿಜ್ಞಾನ ಹಾಗೂ ಜೆ.ಎಮ್. ಬೊಹ್ರಾ ವಾಣಿಜ್ಯ ಪದವಿ ಮಹಾವಿದ್ಯಾಲಯದ ಇತಿಹಾಸ ಮತ್ತು ಗ್ರಾಮಿಣಾಭಿವೃದ್ದಿ ವಿಭಾಗದ ವಿದ್ಯಾರ್ಥಿಳಿಂದ ಹೊಸಕೇರಿ, ವನದುರ್ಗಾ, ವಾಗನಗೇರಾ, ರಾಜನಕೊಳ್ಳುರ ಗಾರಮಗಳಲ್ಲಿ ಜಾಗೃತಿ ಜಾಥಾ ನಡೆಸುವುದರ ಮುಖಾಂತರ ಇತಿಹಾಸ ಪ್ರಜ್ಞೆ ಮೂಡಿಸಿ ಗ್ರಾಮಗಳಲ್ಲಿ ಇರುವ ಐತಿಹಾಸಿಕ ಸ್ಮಾರಕಗಳ ಬಗ್ಗೆ ಜಾಗೃತ ಮೂಡಿಸಲಾಯಿತು.

ಗ್ರಾಮೀಣಾಭೀವೃಧ್ಧಿ ವಿಭಾಗದ ಉಪನ್ಯಾಸಕ ಡಾ:ಉಪೇಂದ್ರ ನಾಯಕ ಸುಬೇದಾರ ಗ್ರಾಮಗಳ ಜನರನ್ನು ಉದ್ದೇಶಿಸಿ ಮಾತನಾಡಿ, ಗ್ರಾಮಗಳಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ಹಾಗೂ ಶಾಸನಗಳನ್ನು ಕೋಟೆ ಕೊತ್ತಲಗಳನ್ನು ಗ್ರಾಮದ ಜನ ರಕ್ಷಣೆ ಮಾಡಬೇಕು ಇತಿಹಾಸವನ್ನು ಉಳಿಸಬೇಕು ಗ್ರಾಮಗಳನ್ನು ಪ್ರವಾಸಿ ಗ್ರಾಮಗಳನ್ನಾಗಿಮಾಡುವುದು ಸರ್ಕಾರದ ಜೊತೆಗೆ ಗ್ರಾಮದ ಹಿರಿಯರ ಹಾಗೂ ಜನಸಾಮಾನ್ಯರ ಪಾತ್ರವೂ ಇದೆ ಎಂದು ತಿಳಿ ಹೇಳಿದರು.

Contact Your\'s Advertisement; 9902492681

ಇತಿಹಾಸ ಉಪನ್ಯಾಸಕರಾದ ಡಾ. ಸುರೇಶ ಮಾಮಡಿ, ಜ್ಯೋತಿ ಮಾಮಡಿ ವಿದ್ಯಾರ್ಥಿಗಳಿಗೆ ಇತಿಹಾಸ ಪ್ರಜ್ಞೆ ಮೂಡಿಸಿದರು.ಕಾರ್ಯಕ್ರಮದಲ್ಲಿ ಇತಿಹಾಸ ಮತ್ತು ಗ್ರಾಮೀಣಾಭೀವೃಧ್ಧಿ ವಿಭಾಗದ ಅನೇಕ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here