ಸುರಪುರ:ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ

0
12

ಸುರಪುರ:ನಗರದ ಸರಕಾರಿ ಕನ್ಯಾ ಮಾದರಿಯ ಪ್ರಾಥಮಿಕ ಶಾಲೆ ದರಬಾರದಲ್ಲಿ ಸುರಪುರ ಕ್ಲಷ್ಟರಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.ಕಾರ್ಯಕ್ರಮವನ್ನು ನಗರಸಭೆ ಸದಸ್ಯರಾದ ನರಸಿಂಹ ಪಂಚಮಗಿರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹೇಶ ಪೂಜಾರ ಮಾತನಾಡುತ್ತಾ, ಮಕ್ಕಳಲ್ಲಿರುವ ಪ್ರತಿಭೆಗಳು ಕಾಜಂಜಿಯಾಗಿ ಚಿಮ್ಮಲ್ಲಿ. ಶಿಕ್ಷಕರು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವುದರ ಮೂಲಕ ಹೆಚ್ಚು ಪ್ರತಿಭಾಶಾಲಿಗಳಾಗಲಿ ಎಂದು ಅಭಿಪ್ರಾಪಟ್ಟರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಶಿಕ್ಷಕರಾದ ಯಲ್ಲಪ್ಪ ಕಾಡ್ಲೂರು, ಶರಣಬಸವ ಗೋನಾಲ ಹಾಗೂ ಎಪಿಎಫ್‍ನ ಅನ್ವರ ಜಮಾದಾರ ಮಾತನಾಡಿದರು ಹಾಗೂ ಪುಟ್ಟ ಬಾಲಕಿ ಪ್ರಣೀತ ನಾಗರಾಜ ನ್ಯಾಮತಿಯ ಸಂಸ್ಕøತ ಶ್ಲೋಕ ಪಠಣ ಎಲ್ಲರ ಗಮನ ಸೆಳೆಯಿತು ಹಾಗೂ ವಿವಿಧ ಶಾಲಾ ಮಕ್ಕಳಿಂದ ಕಥೆ,ಕವನ,ನೃತ್ಯ ಸೇರಿದಂತೆ ಅನೇಕ ಸಾಂಸ್ಕøತಿಕ ಕಾರ್ಯಕ್ರಮ ನಡೆದವು.

ವೇದಿಕೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಪಂಡಿತ ನಿಂಬೂರೆ, ಬಿಆರ್.ಪಿ ಖಾದರಪಟೇಲ್ ಸೋಮರೆಡ್ಡಿ ಮಂಗಿಹಾಳ ಮಹೇಶ ಜಾಗೀರದಾರ ಶಿಕ್ಷಣ ಸಂಯೋಜಕರಾದ ಶಿವಪುತ್ರಪ್ಪ, ಸಣ್ಣ ಹಣಮಂತ, ಭೀಮಪ್ಪ ಸಿ.ಆರ್.ಪಿ ದೊಡ್ಡಮಲ್ಲಿಕಾರ್ಜುನ ಬಿ.ಆಯ್ ಆರ್.ಟಿ ರಾಜಶೇಖರ ದೇಸಾಯಿ ಜಾಕೀರಹುಸೇನ, ವಿಶ್ವರಾಧ್ಯ, ಸಜ್ಜನ, ಸಿ.ಆರ್.ಪಿ ಶಿವಲೀಲಾ, ಮಲ್ಲಿಕಾರ್ಜುನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಭಾಷ ಕೊಂಡಗೂಳಿ ವಹಿಸಿದ್ದರು. ಮಲ್ಲಣ್ಣ ಸಜ್ಜನ ನಿರೂಪಿಸಿದರು. ಮಾಳಪ್ಪ ವಂದಿಸಿದರು. ಶಿಕ್ಷಕರಾದ ಸ್ಯಾಮುವೆಲ, ಮುಲ್ಕಚಾಂದ, ಚಂದ್ರಕಾಂತ ಗುತ್ತೆದಾರ ಮಲ್ಲಕ್ಕ, ಭಾಗಮ್ಮ, ಶರಣಯ್ಯಸ್ವಾಮಿ, ಅಬ್ದುಲ್ ಪಟೇಲ್ ಮಹಾಲಕ್ಷ್ಮಿ, ಗೌರಮ್ಮ ನಿರ್ಮಲಾ, ಸುರಪುರ ಕ್ಲಷ್ಟರನ ಸರಕಾರಿ ಮತ್ತು ಅನುದಾನಿತ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here