ಕಲಬುರಗಿ: ಕೆ.ಕೆ.ಆರ್.ಟಿ.ಸಿ ಗೆ ೩೧೬ ಬಸ್ ಖರೀದಿಗೆ ೪೫ ಕೋಟಿ ರೂಪಾಯಿ ಅನುದಾನ ಮಂಜೂರಾತಿ ಮಾಡಿದ್ದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಾರಿಗೆ ಸಚಿವ ಶ್ರೀರಾಮಲು ಹಾಗೂ ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಅವರಿಗೆ ಕ.ಕ.ರ.ಸಾ.ನಿಗಮದ ಕಲಬುರಗಿ ವಿಭಾಗ-೧ರ ಕೋಲಿ ಸಮಾಜ ನೌಕರರ ಸಂಘವು ಅಭಿನಂದನೆ ಸಲ್ಲಿಸಿದೆ.
ನಿಗಮ ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೋವಿಡ್ ಹಿನ್ನಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಬಸ್ ಖರೀದಿಸಲು ೧೦೦ ಕೋಟಿ ಅನುದಾನ ನೀಡುವಂತೆ ಸರ್ಕಾರದ ಮೇಲೆ ಒತ್ತಡತರಲು ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿ ಸ್ಪಂದಿಸಿ, ವಿಶೇಷ ಮುತುವರ್ಜಿ ವಹಿಸಿ ರೇವೂರ್ ಅವರು ಮುಖ್ಯಮಂತ್ರಿಗಳಿಗೆ, ಸಾರಿಗೆ ಸಚಿವರಿಗೆ ಒತ್ತಾಯಿಸಿ ನಿಗಮಕ್ಕೆ ೩೧೬ ಬಸ್ ಗಳನ್ನು ಖರೀದಿಸಲು ೪೫ ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಇದಕ್ಕೆ ಸಹಕರಿಸಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಅವರಿಗೂ ಸಂಘವು ಅಭಿನಂದಿಸಿದೆ.
ಸಂಘದ ಅಧ್ಯಕ್ಷರಾದ ಶ್ರೀಮಂತ ಜಮಾದಾರ, ಗೌರವ ಅಧ್ಯಕ್ಷ ಭೀಮರಾವ ಯರಗೋಳ , ಪ್ರಧಾನ ಕಾರ್ಯದರ್ಶಿ ರಮೇಶ ಜೀವಣಗಿ , ಮುಖ್ಯ ಉಪಾಧ್ಯಕ್ಷ ಜಗದೀಶ ಎಸ್ ತೆಗನೂರ, ಕಾರ್ಯಾಧ್ಯಕ್ಷ ಶಂಕರ ತಳವಾರ, ಸಂಘಟನಾ ಕಾರ್ಯದರ್ಶಿ ನಿಂಗಪ್ಪ, ಚಿತ್ತಾಪೂರ ಘಟಕ ಚಂದ್ರಕಾಂತ ಚಿಂಚೋಳಿ, ಕಾಳಗಿ ಘಟಕ ವಿಜಯಕುಮಾರ ಜಮಾದಾರ, ಸಾಯಬಣ್ಣ ಜಮಾದಾರ, ಯಲ್ಲಾಲಿಂಗ ಅವರು ಅಭಿನಂದನೆ ಸಲ್ಲಿಸಿದ್ದಾರೆ.