ಸುರಪುರ: ನಗರಸಭೆಯ ೧ ನೇ ವಾರ್ಡ್‌ನ ಹಲವಾರು ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಎಲ್ಲರಿಗೂ ಪಕ್ಷದ ಶಾಲನ್ನು ಹಾಕಿ ಧ್ವಜ ನೀಡಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಜನರಿಗೆ ಸ್ಪಂದಿಸದ ಶಾಸಕ ಹಾಗೂ ಸಕಾರದ ನಡೆಗೆ ಬೇಸತ್ತು ತಾವೆಲ್ಲ ನನ್ನ ಮೇಲೆ ಮತ್ತು ನಮ್ಮ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಇನಷ್ಟು ಶಕ್ತಿ ಹೆಚ್ಚುಗೊಳಿಸಿದೆ.
ಕುರಬರಗಲ್ಲಿ ವಾರ್ಡನಲ್ಲಿ ಮೂಲ ಭೂತ ಸೌಕರ್ಯಗಳನ್ನು ಒದಗಿಸದ ಶಾಸಕರ ನಡೆ ಮತ್ತು ಸರ್ಕಾರದ ಕಾರ್ಯವೈಖರಿಗೆ ಖಂಡನೀಯವಾಗಿದೆ ಜನರಿಂದ ಅಧಿಕಾರ ಪಡೆದು ಜನರ ಕಷ್ಟಗಳಿಗೆ ಸ್ಪಂದಿಸದೇ ಇರುವವರಿಗೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ ಎನ್ನುವುದು ಇಂದು ನಡೆದ ಸಪೇರ್ಡೆಯಿಂದ ಸ್ಪಷ್ಟವಾಗುತ್ತದೆ ಇದರಿಂದ ವಿರೋಧಿಗಳಿಗೆ ನಡುಕ ಹುಟ್ಟಿದೆ ಎಂದರು.
ನಾನು ಅಧಿಕಾರದಲ್ಲಿದ್ದ ಸಂಧಂರ್ಭದಲ್ಲಿ ನಗರಕ್ಕಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ದೃಷ್ಠಿಯಿಂದ ಸುಮಾರು ೧೦೩ ಕೋಟಿ ರೂ ವೆಚ್ಚದಲ್ಲಿ ಕ್ರಿಯಾಯೋಜನೆ ರೂಪಿಸಿ ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಈ ಯೋಜನೆಯ ಅನುಷ್ಠಾನಕ್ಕೆ ಹಿನ್ನಡೆಯಾಗಿತ್ತು.
ಅದು ಈಗಿನ ಶಾಸಕರು ನಾನೇ ಅನುದಾನತಂದು ಮಾಡಿದ್ದೇನೆ ಎಂದು ಜನರನ್ನು ದಾರಿತಪ್ಪಿಸುತ್ತಿದ್ದಾರೆ, ಇದರ ಅಸಲಿಯತ್ತು ನಗರಸಭೆಯ ಸಾರ್ವಜನಿಕರ ಗಮನದಲ್ಲಿದೆ. ನಾನು ತಯಾರಿಸಿ ಸಲ್ಲಿಸಿದ ಕ್ರೀಯಾಯೋಜನೆ ಮೊತ್ತವನ್ನು ಏಕಾ ಏಕಿ ದುಪ್ಪಟ್ಟುಗೊಳಿಸಿ ಕಾಮಗಾರಿ ನಡೆಸುತ್ತಿರುವುದರಿಂದ ಅನುಮಾನ ಮೂಡಿ ನಾನು ಈ ಕಾಮಗಾರಿಯ ಪ್ರಗತಿ ಕಾರ್ಯ ವೀಕ್ಷಣೆ ಮಾಡಿದ್ದೆ ಇದು ಸ್ಥಳೀಯ ಶಾಸಕರಿಗೆ ಆತಂಕ ಉಂಟು ಮಾಡಿದೆ ಅದಕ್ಕೆ ಏನೇನೋ ಹೇಳುತ್ತಿದ್ದಾರೆ ಇನ್ನು ಸ್ವಲ್ಪದಿನದಲ್ಲಿಯೇ ಈ ಕಾಮಗಾರಿಯ ಬಗ್ಗೆ ಜನರಿಗೆ ತಿಳಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ವಾರ್ಡ ೧( ಕರುಬರಗಲ್ಲಿ): ಶಿವಲಿಂಗಪ್ಪ ಪ್ರಧಾನಿ, ಲಕ್ಷ್ಮಣ ಪ್ರಧಾನಿ, ಮಲ್ಲಪ್ಪ ಎಮ್ಮೇರ್, ಭೀಮಪ್ಪ ಎಮ್ಮೇರ್, ಹೈಯಳಪ್ಪ ಗಡ್ಡೇಪ್ಪ, ಶಿವಪ್ಪ ಸಂಗಟೇರ್, ಹೊನ್ನಪ್ಪ ಗುಂಡಗುರ್ತಿ, ಹಣಮಂತ ಜೋಗುಂಡಭಾವಿ, ನಾಗರಾಜ ಗುರಿಕಾರ, ನಿಂಗಪ್ಪ ಗುರಿಕಾರ, ಸಣ್ಣ ಮಲ್ಲಣ್ಣ ಹೆಬ್ಬಾಳ, ಯಲ್ಲಪ್ಪ ಹೆಬ್ಬಾಳ, ಹೈಯಾಳ ಹೆಬ್ಬಾಳ, ಹಣಮಂತ ಪ್ರಧಾನಿ, ನಿಂಗಣ್ಣ ಕೊಂಗಂಡಿ, ಸಿದ್ದಪ್ಪ ಕೊಂಗಂಡಿ, ಬಸವರಾಜ ಜೇರಬಂಡಿ, ಬಸವರಾಜ ಮೇದಕಿನಾಳ, ಅರ್ಜುನ ಗುರಿಕಾರ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಸೇರ್ಪಡೆಯಾದರು.
ಜಿ.ಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಎಪಿಎಂಸಿ ಮಾಜಿ ಸದಸ್ಯ ಮಲ್ಲಣ್ಣ ಸಾಹು ಮುದೋಳ, ರಾಜಾ ವಾಸುದೇವ ನಾಯಕ, ರಾಜಾ ವೇಣುಗೊಪಾಲ ನಾಯಕ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ರಾಜಾ ಸುಶಾಂತ ನಾಯಕ, ಭೀಮರಾಯ ಮೂಲಿಮನಿ, ರವಿಚಂದ್ರ ಸಾಹುಕಾರ, ನಗರಸಭೇ ಸದಸ್ಯ ಜುಮ್ಮಣ್ಣ ಕೆಂಗುರಿ, ಅಬ್ದುಲ್ ಗಫೂರ ನಗನೂರಿ, ಶೇಖ ಮಹಿಬೂಬ ಒಂಟಿ, ವೆಂಕಟೇಶ ಹೊಸಮನಿ, ಅಹ್ಮದ ಪಠಾಣ, ಕಾಳಪ್ಪ ಕವಾತಿ, ಬೀರಲಿಂಗ ಬಾದ್ಯಾಪುರ, ಕೃಷ್ಣಾ ಹಾವಿನ್, ಮಲ್ಲಣ್ಣ ಐಕೂರ, ಭೀಮಣ್ಣ ಕೆಂಗುರಿ, ಚಂದು ದನಕಾಯಿ, ಶೀವರಾಯ ಕಾಡ್ಲೂರು, ಶರಣು ಶಾಂತಪುರ ಇನ್ನಿತರರು ಉಪಸ್ಥಿತರಿದ್ದರು.