ನ್ಯಾಯ ಬೆಲೆ ಅಂಗಡಿ 177ರಲ್ಲಿ ಎರಡು- ಮೂರು ತಿಂಗಳಿಂದ ಆಹಾರ ಧಾನ್ಯ ವಿತರಣೆ ಮಾಡದಿರುವ ಬಗ್ಗೆ ಯಾರು ದೂರು ನೀಡಿಲ್ಲ. ಈ ಬಗ್ಗೆ ನನ್ನಗೆ ಮಾಹಿತಿ ಬಂದಿಲ್ಲ. ತಕ್ಷಣ ಸ್ಥಳಕ್ಕೆ ಎರಿಯಾ ಫೂಡ್ ಇನ್ಸ್ ಪೆಕ್ಟ್ ಅವರಿಗೆ ಕಳುಹಿಸಿ ಅಲ್ಲಿನ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆಯುವೆ. -ಶಾಂತನಗೌಡ ಜಿ ಗುನಕಿ. ಉಪನಿರ್ದೇಶಕರು, ಆಹಾರ ನಾಗರ ಸರಬಾರಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಕಲಬುರಗಿ.
ಮೂರು ತಿಂಗಳಿಂದ ಪಡಿತರ ಧಾನ್ಯ ನೀಡಿಲ್ಲ. ಕೇಳಿದರೆ ಧಾನ್ಯ ಇಲ್ಲ. ೆರಡು ತಿಂಗಳ ಸೇರಿಸಿ ಮುಂದಿನ ತಿಂಗಳ ಧಾನ್ಯ ಒಟ್ಟಿಗೆ ನೀಡಿರುವುದಾಗಿ ಹೇಳಿದರು. ಆದರೆ ಇಲ್ಲಿನೊಡಿದರೆ ಇಷ್ಟೊಂದು ಜನ ಸೇರಿದಾರೆ. ಈ ತಿಂಗಳು ಆಹಾರ ಧಾನ್ಯ ಸಿಗುತ್ತೋಇಲ್ವೋ. – ಜಮಿರೋದ್ದಿನ್ ಅಂಗಡಿಯ ಗ್ರಾಹಕ.
ಕಲಬುರಗಿ: ಕಳೆದ ಮೂರು ತಿಂಗಳಿಂದ ಪಡಿತರ ಅಂಗಡಿಯ ಮಾಲಿಕ ಪಡಿತರ ವಿತರಿಸದೆ ಗ್ರಾಹಕರಿಂದ ಬೆರಳು ಪಡೆದು ಮುಂದಿನ ತಿಂಗಳು ಧಾನ್ಯ ನೀಡುವದಾಗಿ ಭರವಸೆ ನೀಡಿ ವಾಪಸ್ ಕಳುಹಿಸಿದ ಗ್ರಾಹಕರು ಇಂದು ಬೆಳಿಗ್ಗೆ ಪಡಿತರ ಅಂಗಡಿ ಮುಂದೆ ಭಾರೀ ಸಂಖ್ಯೆಯಲ್ಲಿ ಜಮಾಗೊಂಡಿರುವ ಘಟನೆ ನಗರದ ಹಾಗರಗಾ ಪ್ರದೇಶದ ಜುಬೇರ್ ಮಸಿದಿ ಹತ್ತಿರ ನಡೆದಿದೆ.
ನಗರದ ಹಾಗರಗಾ ಪ್ರದೇಶದ ಜುಬೇರ್ ಮಸೀದಿಯ ಹತ್ತಿರದ ನ್ಯಾಯ ಬೆಲೆ ಅಂಗಡಿ ಸಂಖ್ಯೆ 177ಯಲ್ಲಿ ಇಂತಹದೊಂದು ಪ್ರಸಂಹ ನಡೆದಿದ್ದು, ಪ್ರತಿತಿಂಗಳು ಕೆಲವರಿಗೆ ಮಾತ್ರ ಧಾನ್ಯ ವಿತರಣೆ ಮಾಡಿ ಉಳಿದವರಿಂದ ಬೆರಳಚ್ಚು ಪಡೆದು ಆಹಾರ ಇಲ್ಲ. ಮುಂದಿನ ತಿಂಗಳು ಸೇರಿಸಿ ನೀಡುವುದಾಗಿ ಭರವಸೆ ನೀಡಿದ್ದಾನೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ನನ್ನ ಅಂಗಡಿಯಲ್ಲಿ 6 ಸಾವಿರಕ್ಕೂ ಹೆಚ್ಚು ಕಾರ್ಡ್ ಗಳು ಇವೆ. ಈ ತಿಂಗಳು ಮಾತ್ರ ಸಮಸ್ಯೆಯಾಗಿದೆ. ಮುಂದಿನ ತಿಂಗಳು ಪಡಿತರ ಅಂಗಡಿ ಡಿವೈಡ್ ಮಾಡುತ್ತಿದ್ದು, ಮುಂದಿನ ತಿಂಗಳಿಂದ ಗ್ರಾಹಕರಿಗೆ ಯಾವುದೇ ಸಮಸ್ಯೆ ಆಗಲ್ಲ. – ನ್ಯಾಯ ಬೆಲೆ 177 ಅಂಗಡಿ ಮಾಲಿಕ ಹಾಗರಗಾ ರೋಡ್ ಕಲಬುರಗಿ.
ಮೂರು ತಿಂಗಳಿಂದ ಅಂಗಡಿ ತೆರಯಲ್ಲಿಲ್ಲ. ನೀಡಿರುವ ಭರವಸೆಗಾಗಿ ಇಂದು ಅಂಗಡಿ ತೆಗೆದಿರುವುದನ್ನು ಕಂಡು ಗ್ರಾಹಕರು ಭಾರೀ ಸಂಖ್ಯೆಯಲ್ಲಿ ಜಮಾಗೊಂಡಿದ್ದಾರೆ. ಗ್ರಾಹಕರೆಲ್ಲರು ಅಂಗಡಿಯ ಮುಂದೆ ಬೆಳಿಗ್ಗಿನಿಂದ ಕ್ಯೂ ನಲ್ಲಿ ನಿಂತು ಧಾನ್ಯ ಪಡೆಯಲು ಪರದಾಡುತ್ತಿದ್ದಾರೆ.
ಮೂರು ತಿಂಗಳಿಂದ ಅಂಗಡಿ ಮಾಲಿಕರು ಇಲಾಖೆಯಿಂದ ಧಾನ್ಯ ಪಡೆದು ಏನು ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದ್ದು, ಇಂದು ಕೆಲವರು ಮೂರು ನಾಲ್ಕು ಕ್ವಿಂಟ್ ಪಡಿತರ ಅಕ್ಕಿ ಆಟೋದಲ್ಲಿ ಹಾಕಿಕೊಂಡು ಹೊಗುತ್ತಿದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಒಂದು ಆಟೋದಲ್ಲಿದ ಸುಮಾರು 3 ಕ್ವಿಂಟಲ್ ಅಕ್ಕಿಯೊಂದಿಗೆ ಆಟೋವನ್ನು ವಶಪಡಿಸಿಕೊಂಡು ವಿಚಾರಣೆಗೆಂದು ಕರದುಕೊಂಡು ಹೋಗಿರುವ ಘಟನೆ ನಡೆದಿದೆ.