ಸೇಡಂ ದಸರಾ ಉತ್ಸವಕ್ಕೆ 40 ವರ್ಷದ ಇತಿಹಾಸ

0
104

ಕಲಬುರಗಿ: ಜಿಲ್ಲೆಯ ಸೇಡಂ ಪಟ್ಟಣದಲ್ಲಿರುವಐತಿಹಾಸಿಕ ಶ್ರೀ ಪಂಚಲಿಂಗೇಶ್ವರದೇವಾಲಯದಲ್ಲಿ 41ನೇ ವರ್ಷದದಸರಾಉತ್ಸವವು ಸೆ.26 ರಿಂದ ಆರಂಭವಾಗಿದ್ದು, ಅ.5 ರವರೆಗೆಅತ್ಯಂತ ವೈಭವದಿಂದ ನಡೆಯಲಿದೆ. 1982ರಿಂದ ಆರಂಭವಾದದಸರಾಉತ್ಸವವು ಪ್ರತಿ ವರ್ಷಅತ್ಯಂತ ವಿಜೃಂಭಣೆಯಿಂದಜರುಗುತ್ತದೆ.ಪಟ್ಟಣದ ಅನೇಕ ಹಿರಿಯರುತನು, ಮನ, ಧನದ ಸೇವೆ ಸಲ್ಲಿಸುವ ಮೂಲಕ ಉತ್ಸವದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಪ್ರತಿ ವರ್ಷ ವಿವಿಧಧಾರ್ಮಿಕ, ಸಾಂಸ್ಕøತಿಕ, ಸಾಹಿತ್ಯಕ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪಟ್ಟಣದಎಲ್ಲಜಾತಿ, ವರ್ಗ ಹಾಗೂ ಮಕ್ಕಳು, ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತಿದೆ. ಹೀಗಾಗಿ ಎಲ್ಲರೂ ಸೇರಿ ಹಬ್ಬದಂತೆ ಈ ದಸರಾಉತ್ಸವವನ್ನುಆಚರಿಸುತ್ತಾರೆ.1993ರಲ್ಲಿ ದೀಪೋತ್ಸವಕಾರ್ಯಕ್ರ, 2002ರಲ್ಲಿ ದ್ವಿ ಶತಮಾನೋತ್ಸವಕಾರ್ಯಕ್ರಮಗಲನ್ನುಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಗಿದೆ.2006ರಲ್ಲಿ 25ನೇ ಬೆಳ್ಳಿಹಬ್ಬ ಸಹ ಆಚರಿಸುವ ಮೂಲಕ ದಸರಾಉತ್ಸವಕ್ಕೆ ಮತ್ತಷ್ಟು ಮೆರಗುತಂದುಕೊಡಲಾಗಿದೆ.

Contact Your\'s Advertisement; 9902492681

ಅದರಂತೆ ಈ ವರ್ಷವೂದೇವಾಲಯದ ಸದ್ಬಕ್ತ ಮಂಡಳಿ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ ನೇತೃತ್ವದಲ್ಲಿ ನಾಟಕ ಪ್ರದರ್ಶನ, ಡಾ.ಪುನೀತರಾಜಕುಮಾರಅವರಿಗೆ ಗಾನ ನಮನ, ಡ್ರಾಮಾಜ್ಯೂನಿಯರ್ಸ, ವಾಯ್ಸ್‍ಆಫ್ ಸೇಡಂ ಎಂಬ ಗಾಯಕರ ಗಾನ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ.5 ರಂದು ಸಂಜೆ ಪಂಚಲಿಂಗೇಶ್ವರದೇವಾಲಯದಿಂದಜಗನ್ಮಾತೆ ಶಾಂಭವಿಯ ಭವ್ಯ ಮೆರವಣಿಗೆಯೊಂದಿಗೆ ಸಾಮೂಹಿಕ ಬನ್ನಿ ಮುಡಿಯುವಕಾರ್ಯಕ್ರಮದೊಂದಿಗೆದಸರಾಉತ್ಸವಕ್ಕೆತೆರೆ ಎಳೆಯಲಾಗುವುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here