ಕಲಬುರಗಿ: ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ವಿರ್ಶವಾಸವಿಟ್ಟಿದೆ. ಪ್ರತಿಯೊಬ್ಬರ ಸಾಮಥ್ರ್ಯ, ಚಿಂತನೆತೆಗೆದುಕೊಂಡು ಪಕ್ಷ ಬಲಪಡಿಸುತ್ತೇವೆ. ಸಂಘಟನೆಯಲ್ಲಿಎಲ್ಲರ ವಿಚಾರಗಳನ್ನು ತೆಗೆದುಕೊಂಡು ಮುಂದೆ ಹೋಗಬೇಕಾಗುತ್ತದೆಎಂದು ಎಐಸಿಸಿ ಅಧ್ಯಕ್ಷ ಸ್ಥಾನದಅಭ್ಯರ್ಥಿ ಮಲ್ಲಿಕಾರ್ಜುನಖರ್ಗೆ ಹೇಳಿದರು.
ಪಕ್ಷದಅಧಿನಾಯಕಿ ಸೋನಿಯಾಗಾಂಧಿ ಹಾಗೂ ರಾಹುಲ್‍ಗಾಂಧಿ ಸೇರಿದಂತೆಎಲ್ಲರಒತ್ತಾಯದ ಮೇರೆಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ನನ್ನ ಸ್ವಇಚ್ಛೆಯಿಂದ ನಿಂತಿಲ್ಲ. ಹಿರಿಯ ನಾಯಕರು, ಹಿತೈಷಿಗಳು, ಸಿಎಲ್‍ಪಿ ನಾಯಕ, ಡೆಲಿಗೇಟ್ಸ್, ಶೇ 100ರಷ್ಟು ಜನ ಬಂದು ನಾಮನೇಷ್‍ನಲ್ಲಿ ಭಾಗಿಆಗಿದ್ದರು.ಇಂತಹ ಸಮಯದಲ್ಲಿ ನಿಲ್ಲುವುದಿಲ್ಲ ಎಂದರೆ ಪಕ್ಷಕ್ಕೆದ್ರೋಹ ಬಗೆದಂತೆ.ಇದನ್ನು ಮಾಡಿಅಂದ ಮೇಲೆ ಕಾರ್ಯಕರ್ತನಾಗಿ ನಾನು ನಿಂತಿದ್ದೇನೆ. ಡೆಲಿಗೆಟ್ಸ್ ಬೆಂಬಲ ಸಿಗುತ್ತದೆ ಎಂಬ ನಂಬಿಕೆ ನನಗಿದೆಎಂದು ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಸತ್‍ಗೆ ತೆರಳಿ 13 ವರ್ಷಆಯ್ತು. ಈಗ ಸಿಎಂ ಬಗ್ಗೆ ಮಾತನಾಡುತ್ತೀರಾ?ಈಗ ವಿಧಾನಸಭೆಚುನವಾಣೆಯಾ?ಸಿಎಂ ಸ್ಥಾನ ಎಷ್ಟು ಬಾರಿ ಕಳೆದುಕೊಂಡೆ?ಎಂಬುವುದುಎಲ್ಲರಿಗೂ ತಿಳಿದಿದೆ.ನನಗೆ ಆ ಬಗ್ಗೆ ಚಿಂತೆಇಲ್ಲ. ನನಗೆ ಸಂಘಟನೆ ಮುಖ್ಯ.ನನ್ನ ತತ್ವಗಳನ್ನು ಅನುಷ್ಠಾನಕ್ಕೆ ತರಬೇಕಾದರೆ ನನಗೆ ಬಲ ಬೇಕು. ಬಲ ಬೇಕಾದರೆ ಪಕ್ಷಬೇಕು.ಪಕ್ಷ ಬೇಕಾದರೆಜನ ಬೇಕು. ಜನಇದ್ದರೇ ನಮಗೆ ಶಕ್ತಿ ಸಿಗುತ್ತದೆ.
ನಿತ್ಯ ಕನಸು ಕಾಣುತ್ತಿದ್ದರೆಯಾರೂ ನಂಬಲ್ಲ. ದೇಶದ ಹಿತದೃಷ್ಟಿಯಿಂದಒಕ್ಕಟ್ಟುಆಗದೆ ಹೋದರೆ ಬಹಳ ದೊಡ್ಡತೊಂದರೆ.ದೇಶ, ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಇದೀಗ ಬಹಳ ಸಂಕಷ್ಟವಿದೆ.ಈ ದೃಷ್ಟಿಯಿಂದ ನಾನು ಚುನಾವಣೆಗೆ ಸ್ಪರ್ಧಿಸಿರುವೆ. ಚುನಾವಣೆ ಬಳಿಕ ಯಾವುದಕ್ಕೆ ಪ್ರಾಶಸ್ತ್ಯಕೊಡಬೇಕುಅದಕ್ಕೆ ನೀಡುತ್ತೇವೆಎಂದು ತಿಳಿಸಿದರು.