ಕಲಬುರಗಿ: ಹಗಲಿನಲ್ಲಿ ದೀಪ ಹಚ್ಚಿ ಒಂದಿಷ್ಟು ಒಳಿತನ್ನು ಹೊಡುಕಿದರೂ ಸಿಗದಿರುವ ಅಂದಿನ ಅರಬ ಜಗತ್ತು ಅಂಧಕಾರದಲ್ಲಿ ಮುಳುಗಿಹೋಗಿತ್ತು, ಪ್ರವಾದಿಯ ಆಗಮಾನದಿಂದ ಅಲ್ಲಿ ಉದಯಿಸಿದ ಸೂರ್ಯ ಈಡಿ ವಿಶ್ವಕ್ಕೆ ಶಾಂತಿಯ ಜ್ಯೋತಿ ಬೆಳಗಿತು ಎಂದು ಹಿರಿಯ ನ್ಯಾಯವಾದಿ ಲಿಯಾಖತ್ ಫರಿದ್ ಉಸ್ತಾದ್ ಹೇಳಿದರು.
ತಾರಫೈಲ ರಹಮತ ನಗರದ ಅಹ್ಮದಿಯಾ ಮುಸ್ಲೀಮ ಜಮಾತಿನ ಮಿಷನ್ ಹೌಸ್ ನಲ್ಲಿ ಆಯೋಜಿಸಿದ್ದ ಈದ್ ಮಿಲಾದ್ ಉನ್ ನಬೀ ಪ್ರವಾದಿಯ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಾಣಿ ಪಶುಗಳಂತೆ ಮಹಿಳೆಯರನ್ನು ಅಲ್ಲಿ ಮಾರಾಟ ಮಾಡಲಾಗುತ್ತಿತ್ತು, ಕಂದಚಾರ, ಮೌಡ್ಯತೆ, ದಬ್ಬಾಳಿಕೆ ದೌರ್ಜನ್ಯಗಳ ಅಟ್ಟಹಾದಿಂದಾಗಿ ನೈತಿಕೆತೆ ಫತನಗೊಂಡಿತ್ತು ಇಂತಹ ಪರಿಸ್ಥಿತಿಯಲ್ಲಿ ಉದಯ ಭಾಸ್ಕರನಂತೆ ಪ್ರವಾದಿಯು ಅವತರಿಸಿದರು ಎಂದರು.
ಅಹ್ಮದಿರಯ ಮಿಷನರಿ ಮೌಲ್ವಿ ನಸೀರ್ ಖಾನ ಸಾಹೇಬರು ಮಾತನಾಡಿ, ಭೂಮಿ ಆಕಾಶ ಸೇರಿದಂತೆ ಭ್ರಂಮಾಂಡದ ಸೃಷ್ಟಿಯ ಉದ್ದೇಶ ಕೇವಲ ಪ್ರವಾದಿ ಮೊಹ್ಮದ ಪೈಗಂಬರ (ಸಅ)ರನ್ನು ಅವತರಿಸುವುದಕ್ಕಾಗಿದೆ ಎಂದು ಪವಿತ್ರ ಕುರ್ಆನ್ ನಲ್ಲಿ ಅಲ್ಲಾಹನು ಸ್ಪಷ್ಟಪಡಿಸಿದ್ದಾನೆ. ಅಲ್ಲದೇ ವಿಶ್ವಕ್ಕೆ ಶಾಂತಿಯ ದೂತರನ್ನಾಗಿ ಮತ್ತು ಸೃಷ್ಠಿಯ ಅನುಗ್ರಹಿತರನ್ನಾಗಿ ಅವರನ್ನು ಕಳಿಸಲಾಗಿದೆ ಎಂದು ಅಲ್ಲಾಹನು ಹೇಳಿದ್ದಾನೆ ಎಂದರು.
ನಿರಂತರವಾಗಿ ಪ್ರವಾದಿ ಮೊಹ್ಮದ ಪೈಗಂಬರ (ಸ.ಅ) ಅವರ ಮೇಲೆ 13 ವರ್ಷಗಳ ಕಾಲ ಅಮಾನವೀಯವಾಗಿ ನೀಡಿದ ಸಂಕಷ್ಟ, ದೌರ್ಜನ್ಯ, ಶೋಷಣೆ, ಕಿರುಕುಳ, ದಬ್ಬಾಳಿಕೆ, ಹಲ್ಲೆ, ನಿಂದನೆ ಮತ್ತು ಭಹಿಷ್ಕಾರ, ಉಪವಾಸ ವನವಾಸವನ್ನು ಅನುಭವಿಸಿದ ಅವರು, ಯಾರ ವಿರುದ್ಧವೂ ಧ್ವೆಷವನ್ನಾಗಲಿ, ಪ್ರತಿಕಾರವನ್ನಾಗಲಿ ಸಾದಿಸಲಿಲ್ಲ ಮೇಲಾಗಿ ತಮ್ಮ ವೈರಿಗಳನ್ನು ಸಹೋದರರಂತೆ ಪ್ರೀತಿಸುತ್ತಿದ್ದರು ಎಂದರು.
ಪ್ರವಾದಿಯ ಏಕ ದೇವನ ಸಂದೇಶ, ಸೃಷ್ಠಿಯ ಸೇವೆ ಮತ್ತು ಮಾನವೀಯ ಮೌಲ್ಯಗಳು ಎಂಬ ಜ್ಯೋತಿಯು ಈಡಿ ಅರಬ್ ಜಗತ್ತಿನಲ್ಲಿ ಬೆಳಗಿತು, ಅಂಧಕಾರದಲ್ಲಿ ಮೂಳುಗಿದ್ದ ಅರಬ್ಬರಿಗೆ ಪ್ರವಾದಿಯ ಜ್ಯೋತಿ ಆಯಸ್ಕಾಂತದಿಂತೆ ಅಕರ್ಷಿಸುವಂತೆ ಮಾಡಿತು. ಪಾಪಕಾರ್ಯಗಳ ಸಂಕೋಲೆಯಿಂದ ಬಂದಿತರಾಗಿದ್ದ ಅರಬ್ಬರು, ಅದರಿಂದ ಬಿಡುಗಡೆಗೊಂಡು ಪವಿತ್ರ ಪಾವನ ಜೀವನ ಸಂದೇಶ ಸಾರುವ ಪ್ರವಾದಿಯ ಸನ್ಮಾರ್ಗದಲ್ಲಿ ನಡೆಯಲು ಮುಂದಾದರು ಎಂದು ಮತ್ತೋಬ್ಬ ಮೌಲ್ವಿ ಮುಸ್ತಾಕ್ ಅಹ್ಮದ ಸಾಹೇಬರು ಹೇಳಿದರು.
ಮುಸ್ಲೀಮರು ಯಾರಿಗಾದರೂ ತನ್ನ ಕಣ್ಣು, ನಾಲಿಗೆ ಮತ್ತು ಕೈಗಳಿಂದ ತೊಂದರೆ ಕೊಡುವವನು ನನ್ನವನಲ್ಲ ಎಂದು ಪ್ರವಾದಿ ಅವರು ಹೇಳಿದ್ದಾರೆ. ಪ್ರವಾದಿ ಅವರ ನಡೆನುಡಿ ಕೇವಲ ಪವಿತ್ರ ಕುರ್ಆನ್ ಅದೇಶದಂತಿದ್ದು, ಪ್ರತಿಯೊಬ್ಬ ಮುಸ್ಲೀಮನು ಪ್ರವಾದಿಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಇಹ ಮತ್ತು ಪರ ಲೋಕದಲ್ಲಿ ಯಶಸ್ವಿಯಾಗಲು ಸಾಧ್ಯವಿದೆ ಎಂದು ಅಹ್ಮದಿಯಾ ಮುಸ್ಲೀಮ ಸಮಾಜದ ಕಲಬುರಗಿ ನಗರಾಧ್ಯಕ್ಷ ಅಬ್ದುಲ ಖಾದಿರ್ ಶೆಜ್ಜಿ ಅವರು ಹೇಳಿದರು.
ಮೊಹ್ಮದ ಅಬ್ದುಲ್ಲಾ ಉಸ್ತಾದ, ಮೊಹ್ಮದ ವಸೀಮ ಅಹ್ಮದ ನೂರ್, ರಶೀದ ಎಚ್.ಉಸ್ತಾದ, ಹಷ್ಮತ್ ಅಹ್ಮದ ಹೌದೊಡಿ, ಮೊಹ್ಮದ ನಸರುಲ್ಲಾ ಖುರೇಷಿ, ಯಾಸರ ನಜೀರ್ ಅಹ್ಮದ ಖುರೇಷಿ, ಇರ್ಷಾದ ಅಹ್ಮದ ಗುಲಬರ್ಗಿ, ತಾರಿಖ್ ಅಹ್ಮದ ಮುಸ್ತಾಕಿಮ ಸೇರಿದಂತೆ ಹಲವರು ಪ್ರವಾದಿಯ ಜೀವನ ಸಂದೇಶದ ಕುರಿತು ಮಾತನಾಡಿದರು.
ಪವಿತ್ರ ಕುರ್ಆನ್ ಪಠಣದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪ್ರವಾದಿಯ ಕುರಿತಾದ ನಜಂ ಭಕ್ತಿಗೀತೆಗಳು ಮತ್ತು ಪ್ರವಾದಿ ಜೀವನ ಚರಿತ್ರೆಯ ಕಿರು ಉಪನ್ಯಾಸಗಳು ಜರುಗಿದವು. ಕೊನೆಯಲ್ಲಿ ಸಮೊಹಿಕ ಪ್ರಾರ್ಥನೆ ಹಾಗೂ ಸಿಹಿ ಮತ್ತು ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮವ ಸಮಾರೋಪ ಗೊಂಡಿತು.