ಎಕರೆಗೆ 25 ಸಾವಿರ ರೂ. ಪರಿಹಾರ ನೀಡಲು ಆಗ್ರಹ

0
21

12 ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಕ್ಕರೆಕಾರ್ಖಾನೆ ಆಡಳಿತ ಮಂಡಳಿ ಹಾಗೂ ಕಬ್ಬು ಬೆಳೆಗಾರರ ಸಭೆಕರೆದಿದ್ದಾರೆ. ಜಿಲ್ಲೆಯಲ್ಲಿ ಬಹುತೇಕ ಸಕ್ಕರೆ ಕಾರ್ಖಾನೆಗಳು ಏಕರೂಪದ ಬೆಲೆ ನಿಗದಿಪಡಿಸಿಲ್ಲ, ಇಲ್ಲಿಯ ಹವಾಗುಣ, ಮಣ್ಣಿನಗುಣದಿಂದಕಬ್ಬಿನಲ್ಲಿ ಸಕ್ಕರೆ ಅಂಶ ಪ್ರಮಾಣ 11.01 ರಷ್ಟುಇದೆ.ಆದರೆ ಬೆಳೆಗಾರರಿಗೆ ಇಳುವರಿಯಲ್ಲಿ ತಾರತಮ್ಯವೆಸಗಿ ಮೋಸವೆಸಗುತ್ತಿದ್ದಾರೆ. ಇದನ್ನು ಸರಿಪಡಿಸಬೇಕು. -ಶ್ರೀಮಂತ ಬಿರಾದಾರ್, ಸಹ ಕಾರ್ಯದರ್ಶಿ ಸಿಪಿಐಎಂ.

ಕಲಬುರಗಿ: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಈ ಬಾರಿ ಅತಿವೃಷ್ಟಿ ಉಂಟಾಗಿದ್ದು, ಕಲಬುರಗಿ ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಅ. 13 ರಂದು ಎಲ್ಲ ತಹಸೀಲ್ ಕಚೇರಿ ಎದುರು ಕರ್ನಾಟಕ ಪ್ರಾಂತರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

Contact Your\'s Advertisement; 9902492681

ಈಗಾಗಲೇ ಕೇಂದ್ರ ಅಧ್ಯಯನ ತಂಡಜಿಲ್ಲೆಗೆ ಭೇಟಿ ನೀಡಿ ವರದಿ ತಯಾರಿಸಿದೆ. ಪ್ರತಿ ಎಕರೆ ತೊಗರಿಗೆ ಕನಿಷ್ಠ 5,675 ರೂ. ಖರ್ಚಾಗುತ್ತದೆ. ಆದರೆ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರಿಗೆ 13, 800 ರೂ.ಬೆಳೆ ಪರಿಹಾರ ನೀಡಿದೆ. ಆದರೆ ಇದು ಸಮಂಜಸವಾಗಿರುವ ಪರಿಹಾರವಲ್ಲ. ರೈತರ ಬೆಳೆ ವಿಮೆ ಪರಿಹಾರದಲ್ಲಿತಾರತಮ್ಯ ಸಲ್ಲದು.ಪ್ರತಿಎಕರೆಗೆ 25 ಸಾವಿರ ಬೆಳೆ ಪರಿಹಾರ ನೀಡಬೇಕುಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಹೆಸರು ಕಾಳು, ಉದ್ದು, ಸೋಯಾ, ಎಳ್ಳು, ತೊಗರಿ, ಹತ್ತಿ ಮತ್ತಿತರರ ಬೆಳೆಗಳು ನೀರಿನಲ್ಲಿ ಹಾಳಾಗಿವೆ ಹೋಗಿವೆ. ಆದರೆ ಹಿಂಗಾರು ಹಂಗಾಮಿನಲ್ಲಿ ಬಿಳಿಜೋಳ, ಕಡಲೆ ಬಿತ್ತನೆಗೆ ಹಣದಅವಶ್ಯಕತೆಯಿದೆ.ಇನ್ನು ಬಹುತೇಕರೈತರಿಗೂ ಬೆಳೆ ಸಿಕ್ಕಿಲ್ಲ ಎಂದುಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯದರ್ಶಿ ವಿರೂಪಾಕ್ಷತಡಕಲ್ ಪ್ರತಿಕ್ರಿಯಿಸಿ, ಗ್ರಾಮ ಪಂಚಾಯತಿಅಧ್ಯಕ್ಷರ ಸಹಿ ಅವಧಿ ಮೊಟಕುಗೊಳಿಸಲಾಗಿದ್ದು, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದುಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೆಜಿಲ್ಲೆಯಲ್ಲಿ ಬಹುತೇಕರಾಷ್ಟ್ರೀಯ ಬ್ಯಾಂಕ್‍ಗಳಲ್ಲಿ ರೈತರಿಗೆ ಸಮರ್ಪಕವಾಗಿ ಬೆಳೆ ಸಾಲ ನೀಡುತ್ತಿಲ್ಲ, ಅನಗತ್ಯವಾಗಿ ಕಿರುಕುಳ, ಅಲೆದಾಡಿಸುತ್ತಿದ್ದಾರೆಎಂದುದೂರಿದರು.ಪ್ರಮುಖರಾದ ಸಾಯಬಣ್ಣಗುಡುಬಾ, ರಾಯಪ್ಪ ಹೊನಗುಂಟಿ, ವಿರುಪಾಕ್ಷಪ್ಪತಡಕಲ್ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here