ಯಾದಗಿರಿ: ಕೊಳ್ಳೂರು ಬ್ರಿಡ್ಜ್ ಮಧ್ಯದಲ್ಲಿ ನಾಗರಹಾವು ಪ್ರತ್ಯಕ್ಷಗೊಂಡು ಜನರಲ್ಲಿ ಆಚ್ಛರ್ಯಮುಡಿಸಿ ಗಮನ ಸೆಳೆದಿತ್ತು.
ಇಂದು ಬೆಳಿಗ್ಗೆ ಬ್ರಿಡ್ಜ್ ಕಂಬಿ ಮೇಲೆ ಹೆಡೆ ಬಿಚ್ಚಿ ಕುಳಿತ ನಾಗರ ಹಾವು ಸಾರ್ವಜನಿಕರಿಗೆ ಭಾರಿ ಆಚ್ಛರ್ಯ ಉಂಟುಮಾಡಿತ್ತು, ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿ, ಕೊಳ್ಳೂರು ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ ಮೇಲೆ ಈ ದೃಶ್ಯ ಕಂಡುಬಂತ್ತು.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು ಗ್ರಾಮದಿಂದ ಯಾದಗಿರಿ ಜಿಲ್ಲೆ ಶಹಾಪುರ ಹಾಗೂ ರಾಯಚೂರು ಜಿಲ್ಲೆ ದೇವದುರ್ಗಕ್ಕೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಇದ್ದಾಗಿದೆ.
ಬ್ರಿಡ್ಜ್ ಹತ್ತಿರ ನೀರಿನ ಪ್ರಮಾಣ ಹೆಚ್ಚಿದ್ದು ಪ್ರವಾಹ ಭೀತಿ ಹಾವು ಕಂಬಿಹತ್ತಿ ಕುಂತಿರಬಹುದೆಂದು ಜನರು ಅನುಮನವು ವ್ಯಕ್ತಪಡಿಸಿದ್ದು, ಸ್ವಲ್ಪ ಸಮಯದ ನಂತರ ಮತ್ತೆ ನಾಗರ ಹಾವು ನೀರಿಗೆ ಇಳಿಯಿತ್ತೆಂದು ಪ್ರತ್ಯಕ್ಷದರ್ಶಿ ಒಬ್ಬರು ತಿಳಿಸಿದರು.