ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ಇಂದು ಜೇವರ್ಗಿ ಪ್ರವಾಸಿ ಮಂದಿರದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ವತಿಯಿಂದ ಮಾಹಿತಿ ಹಕ್ಕು ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಚೆನ್ನಯ ಸ್ವಾಮಿ ವಸ್ತ್ರದ್ ವಹಿಸಿಕೊಂಡಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ. ಕಾನೂನು ಸಲಹೆಗಾರರಾಗಿ ರಾಜು ವ್ಹಿ ಮುದುಡ್ಡಗಿ ನಾಯ್ಯವಾದಿಗಳು ಕಾರ್ಯಾಗಾರವನ್ನು ಉದ್ದೇಶಿಸಿ ಉಪನ್ಯಾಸ ನೀಡಿದರು
ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದ ಮಾತನಾಡಿದ ಚೆನ್ನಯ ಸ್ವಾಮಿ ವಸ್ತ್ರದ್ ಅವರು, ಮಾಹಿತಿ ಹಕ್ಕು ಎಂಬುವುದು ಸಂವಿಧಾನ ನಮಗೆ ಕೊಟ್ಟ ಬ್ರಹ್ಮಾಸ್ತ್ರ, ಸಂವಿಧಾನ ಬದ್ಧವಾಗಿ ಮಾಹಿತಿ ಕೇಳುವುದರ ಮೂಲಕ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬಹುದು, ಮಾಹಿತಿ ಕೇಳುವುದು ಪ್ರಜಾಪ್ರಭುತ್ವದ ಹಕ್ಕು ಇದರ ಸದುಪಯೋಗ ಅತಿ ಸಾಮಾನ್ಯ ನಿಂದಿ ಸಾಮಾನ್ಯನು, ಮಾಹಿತಿ ಹಕ್ಕು ಅಧಿನಿಯಮದಲ್ಲಿ ಪಡೆದುಕೊಳ್ಳಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ಧನಗೌಡ ಬಿರಾದಾರ್, ಕಂಟು ಎರ್ ಮಳಗಿ, ಲಕ್ಷ್ಮಣ ಪವಾರ್ ಪತ್ತೆ ಮ್ಮಹಮದ ನಾಯ್ಕೋಡಿ ಮುನೀರ್ ಪಾಷಾ ಶ್ರೀಶೈಲ ಗಾಣಿಗೇರ, ಮಂಜುನಾಥ ಕಾಂಬಳೆ ಸಿಂದಗಿ ಮಡಿವಾಳಯ್ಯ ಕುಕನೂರು ಹಾಗೂ ತಾಲೂಕು ಎಲ್ಲಾ ಮಾಹಿತಿ ಹಕ್ಕು ಹೋರಾಟಗಾರ ಇನ್ನಿತರರಿದ್ದರು.