ಕಲಬುರಗಿ: ಎರಡು ತಿಂಗಳ ಹಿಂದೆ ನಡೆದ ಘಟನೆ ಮತ್ತೆ ಮರುಕಳಿಸಿದೆ. ಮೂರು ಜನರು ಬಲಿ ಪಡೆದ ಇದೇ ಕಲುಷಿತ ನೀರಿನ ಸೇವೆನೆ ಪ್ರಕರಣ ಮತ್ತೆ ಹಚ್ಚ ಹಸುರಾಗಿ ಎದುರಾಗಿದೆ. ಜೇವರ್ಗಿ ತಾಲ್ಲೂಕಿನ ಮಂದೇವಾಲ ತಾಂಡಾದಲ್ಲಿ ಕಲುಷಿತ ನೀರು ಸೇವನೆ 30 ಜನ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ಎಚ್ಚೆತ್ತುಕೊಳ್ಳದ ಗ್ರಾಮ ಪಂಚಾಯತ್ ಹಾಗೂ ಆರೋಗ್ಯದ ಇಲಾಖೆ ಮತ್ತೊಮ್ಮೆ ಈ ಘಟನೆಗೆ ಸಾಕ್ಷಿಯಾಗಿವೆ. ಮಂದೇವಾಲ್ ತಾಂಡಾದಲ್ಲಿ ಪೂರೈಸಲಾಗಿತ್ತಿರುವ ನೀರು ಸಂಪೂರ್ಣ ಮಲಿನವಾಗಿದ್ದು ಕುಡಿಯುಲು ಯೋಗ್ಯವಾಗಿಲ್ಲ. ಈ ಹೊಲಸು ನೀರಿನ ಕಾರಣದಿಂದಾಗಿ ಈ ಹಿಂದೆ ಇದೇ ಗ್ರಾಮದಲ್ಲಿ ಮೂರು ಜನ ಮರಣ ಹೊಂದಿದ್ದರು.
ಈ ಘಟನೆ ಕುರಿತು ಆರೋಗ್ಯ ಇಲಾಖೆ ಯಾವುದೇ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳದೆ ಇರುವುದು, ತಾಲೂಕ ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ .ಅಲ್ಲದೆ ಈ ಕುರಿತಂತೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇತ್ತಕಡೆ ಗಮನ ಹರಿಸದೆ, ಸಮಯದೊಡುತ್ತಿದ್ದು ಮತ್ತಷ್ಟು ಪ್ರಾಣಗಳನ್ನು ಬಲಿ ನೀಡುತ್ತಾರೊ ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಸ್ವಚ್ಛತೆ ಹಾಗೂ ಪರಿಶುದ್ಧ ಕುಡಿಯುವ ನೀರು ಒದಗಿಸುವುದಾದರೂ ಯಾವಾಗ ? ಇಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸೂಕ್ತವಾದ ವ್ಯವಸ್ಥೆ ಇಲ್ಲದೆ ,ಚಿಕಿತ್ಸೆ ಪಡೆಯಲಾಗದೆ ಕಲ್ಬುರ್ಗಿ ಸರಕಾರಿ ಆಸ್ಪತ್ರೆಗೆ ಸುಮಾರು ಎಂಟು ಜನರು ದಾಖಲಾಗಿದ್ದು ತಿಳಿದು ಬಂದಿದೆ.