ಡಾ. ಸಿ.ಎಸ್. ದ್ವಾರಕಾನಾಥ ಆಯೋಗದ ವಿಶೇಷ ವರದಿ ಜಾರಿಗೆ ತರುವಂತೆ ಒತ್ತಾಯ

0
71

ಹುಣಸಗಿ : ಪಿಂಜಾರ/ನದಾಫ ಸಮುದಾಯದ ಅಭಿವೃದ್ಧಿಗಾಗಿ ಡಾ. ಸಿ.ಎಸ್. ದ್ವಾರಕಾನಾಥ ಆಯೋಗದ ವಿಶೇಷ ವರದಿ ಜಾರಿಗೆ ಅಗ್ರಹಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ರಾಜ್ಯ ಉಪಾಧ್ಯಕ್ಷ ಸೋಪಿಸಾಬ ಡಿ ಸುರಪುರ ಇವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ಡಾ. ಸಿ.ಎಸ್.ದ್ವಾರಕಾನಾಥ ಅಧ್ಯಕ್ಷರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಇವರ ವಿಶೇಷ ವರದಿ 5/2010ರ ಪ್ರಕಾರ ಪಿಂಜಾರ/ನದಾಫ ಸಮುದಾಯದ ಸಮಾಜಿಕ, ಶೈಕ್ಷಣಿಕ, ಸ್ಥಿತಿ ಗತಿಗಳ ಅಧ್ಯಯನದ ವಿಶೇಷ ಪ್ಯಾಕೇಜ್ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನವನ್ನು ಕೈಗೊಂಡ ವಿಶೇಷ ವರದಿಯ ಮೂಲಕ ಸದರಿ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಆಯೋಗವು ಸರ್ಕಾರಕ್ಕೆ ವಿಶೇಷ ವರದಿ ಸಲ್ಲಿಸಿದ ಪ್ರಯುಕ್ತ ಪಿಂಜಾರ/ನದಾಫ ಸಮುದಾಯಗಳ ಬಗ್ಗೆ ವಿಶೇಷ ಕಾಳಜಿ ಮುತುವರ್ಜಿ ವಹಿಸಿದ್ದು ಸ್ವಾಗತಾರ್ಹವಾದುದ್ದು.

Contact Your\'s Advertisement; 9902492681

ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸದರಿ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಸದುದ್ದೇಶದ ಬಗ್ಗೆ ಆಯೋಗವು ಸ್ವತಃ ಸಮುದಾಯದ ಬಳಿಗೆ ಹೋಗಿ ಅವರ ನೋವು ನಲಿವುಗಳನ್ನು ಅರಿತು ಸದರಿ ಸಮುದಾಯಗಳನ್ನು ಅಭಿವೃದ್ಧಿ ಪ್ರಧಾನ ದಾರಿಯಲ್ಲಿ ಪಿಂಜಾರ/ನದಾಫ ಜನಾಂಗವನ್ನು ಕೊಂಡೊಯ್ಯಲು ಸರ್ಕಾರಕ್ಕೆ ಕೆಲವು ಪರಿಹಾರೋಪಾಯಗಳನ್ನು ಆಯೋಗದವರು ತಿಳಿಸಿರುತ್ತಾರೆ.

ಆದರೆ 2010 ರಲ್ಲಿ ಸದರಿ ವಿಷಯದ ಬಗ್ಗೆ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಕೂಡಾ ಇಲ್ಲಿಯವರೆಗೂ ಡಾ. ಸಿ.ಎಸ್.ದ್ವಾರಕಾನಾಥ ಆಯೋಗದ ವರದಿಯು ಜಾರಿಗೆ ಬರೆದಿರುವುದು ನಮ್ಮ ದುರದೃಷ್ಟ.

ಪ್ರಮುಖ ಹಿಂದುಳಿದ ಜಾತಿಗಳಲ್ಲಿ ಒಂದಾದ ಪಿಂಜಾರ/ನದಾಫ ಜನಾಂಗವು ಸಾಮಾಜಿಕವಾಗಿ,ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ, ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿ ಕೆಲಸವಿಲ್ಲದೇ ಅಲೆಮಾರಿಯಾಗಿ ಒಂದೇ ಕಡೆ ನೆಲೆಯನ್ನು ಕಾಣದೇ ದಿನನಿತ್ಯ ತಮ್ಮ ಹೊಟ್ಟೆ ಪಾಡಿಗಾಗಿ ಕೆಲಸವನ್ನು ಅರಸುತ್ತಾ ಕೂಲಿ ಮಾಡಿ ತಮ್ಮ ಜೀವನ ಸಾಗಿಸುತ್ತಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ *ಪಿಂಜಾರ/ನದಾಫ ಜನಾಂಗವನ್ನು ಪ್ರವರ್ಗ-1ಕ್ಕೆ ಸೇರಿಸಿದ್ದು ಆಶಾದಾಯಕ ವಾಗಿತ್ತು.ಆದರೆ 95 ಜಾತಿಗಳ ಒಳಗೊಂಡ ಪ್ರವರ್ಗ-1ಕ್ಕೆ ಕೇವಲ 4% ಮೀಸಲಾತಿ ನೀಡಿದ್ದು ನಿರಾಸದಾಯಕ ಸಂಗತಿಯಾಗಿದೆ.

ಪಿಂಜಾರ್ ನದಾಫ್ ಮನ್ಸೂರಿ ದುದೇಕುಲ್ ಸಮುದಾಯ ಪ್ರವರ್ಗ-1ರಲ್ಲಿ ಸೇರ್ಪಡೆ ಗೊಂಡಿದ್ದರೂ ಸಹ ಇದರಿಂದ ನಮಗೆ ಯಾವ ಪ್ರಯೋಜನವು ಆಗಿಲ್ಲ.ಏಕೆಂದರೆ ನಮಗೆ ಪ್ರವರ್ಗ-1ರ ಜಾತಿ ಪ್ರಮಾಣ ಪತ್ರವು ಕೂಡ ಕೊಡಲು ಸರ್ಕಾರಿ ಅಧಿಕಾರಿಗಳು ಮಿನಾಮೇಷ ಎಣಿಸುತ್ತಾರೆ.ಇದರಿಂದ ಪ್ರವರ್ಗ-1 ರಲ್ಲಿಯ ಸವಲತ್ತುಗಳಿಂದ ವಂಚಿತರಾಗಿದ್ದೇವೆ.

2010 ರಲ್ಲಿ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿದರು ಇಲ್ಲಿಯ ವರೆಗೆ ಪಿಂಜಾರ/ನದಾಫ ಸಮುದಾಯದಕ್ಕೆ ನ್ಯಾಯ ಸಿಗುತ್ತಿಲ್ಲ. ಆದ್ದರಿಂದ ತಾವುಗಳು ಪಿಂಜಾರ/ನದಾಫ ಸಮುದಾಯದ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ಅವರನ್ನು ಸಮಾಜದಲ್ಲಿ ಮುಖ್ಯವಾಹಿನಿಗೆ ತರಲು ರಾಜ್ಯ ಸರ್ಕಾರವು ಅತೀಶಿಘ್ರದಲ್ಲಿ ಅಧ್ಯಕ್ಷರು ಡಾ. ಸಿ.ಎಸ್.ದ್ವಾರಕಾನಾಥ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವಿಶೇಷ ವರದಿಯು ಜಾರಿಗೆ ತಂದು ಸಮಾಜದಲ್ಲಿ ತುಳಿತಕ್ಕೆ ಒಳಗಾದ ಪಿಂಜಾರ/ನದಾಫ ಸಮುದಾಯವನ್ನು ಮೇಲಕ್ಕೆತ್ತಿ ನ್ಯಾಯ ಒದಗಿಸಿ ಕೊಡಬೇಕೆಂದು ಮನವೀಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ಬಾವಾಸಾಬ ಅ ನದಾಫ,ಬಂದಗಿಸಾಬ ಎಚ್ ಅಗ್ನಿ, ಹುಸೇನಸಾಬ್ ಎಂ ಗಾದಿ,ಎನ್ ಬಿ ನದಾಫ,ಸಾಹೇಬಲಾಲ ಕಕ್ಕಲದೊಡ್ಡಿ,ಲಾಲಸಾಬ ಎಸ್ ಸುರಪುರ,ರಾಜು ಬಿ ನದಾಫ,ಆಶೀಫ ಬಿ ನದಾಫ,ಸದ್ದಾಂ ಹುಸೇನ್,ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here