ಸುರಪುರ:ನಗರದ ಜನನಿ ಮಹಿಳಾ ಪದವಿ ಕಾಲೇಜಿನಲ್ಲಿ ಆರ್.ಎಸ್.ಎಸ್ ವತಿಯಿಂದ ಸ್ವಾವಲಂಬಿ ಭಾರತ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸ್ವಾವಲಂಬಿ ಜೀವನದ ಕುರಿತು ವಿಶೇಷ ಉಪನ್ಯಾಸಕರಾಗಿ ಜಿಲ್ಲಾ ಸಹ ಸಂಯೋಜಕರಾದ ರಾಘವೇಂದ್ರ ಕಾಮನಟಿಗಿಯವರು ಮಾತನಾಡಿ, ಇಂದಿನ ಯುವ ಜನಾಂಗ ಸ್ವಾಭಿಮಾನ ಮತ್ತು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಪಣ ತೊಡಬೇಕು. ಇಂದು ಭಾರತ ಅನೇಕ ವಲಯಗಳಲ್ಲಿ ಸ್ವಾವಲಂಬಿ ಆಗತ್ತಿದೆ ನಮ್ಮ ಹಳ್ಳಿಯ ರೈತರು ಮತ್ತು ರೈತಾಪಿ ವರ್ಗದ ಮಕ್ಕಳು ಉದ್ಯೋಗ ಅರಸಿಕೊಂಡು ನಗರದತ್ತ ಮುಖ ಮಾಡಬಾರದು, ನಮ್ಮ ಯುವ ಜನಾಂಗ ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಬೇಕು ಹಳ್ಳಿಯ ಗುಡಿ ಕೈಗಾರಿಗೆ ಮಾನ್ಯತೆ ಕೊಡಬೇಕು ಹೈನುಗಾರಿಕೆಗೆ ಉತ್ತೇಜನ ನೀಡಬೇಕು.
ಕೃಷಿಯಲ್ಲಿ ಯುವಜನಾಂಗ ಹೊಸತನ ಸೃಷ್ಟಿಸಿಬೇಕು, ದೇಶದಲ್ಲಿ ಕೃಷಿ ಕ್ಷೇತ್ರವೊಂದೇ 44% ಉದ್ಯೋಗ ಸೃಷ್ಟಿಸುವ ವಲಯ ಇಷ್ಟ ಆದರೂ ಇನ್ನೂ ನಮ್ಮ ರಾಜ್ಯದಲ್ಲಿಯೇ 14 ಲಕ್ಷ ಕೃಷಿ ಭೂಮಿಯನ್ನು ನಾವು ಬಳಿಕೆ ಮಾಡಿಲ್ಲ ಎಂದು ಹೇಳಿದರು, ನಮ್ಮ ಯಾದಗಿರಿ ಜಿಲ್ಲೆ ಇಡೀ ರಾಜ್ಯದಲ್ಲಿಯೇ ಮೀನು ಉತ್ಪಾದನೆ ಎರಡನೇ ಸ್ಥಾನದಲ್ಲಿ ಇದೀವಿ. ಹಾಗಯೇ ನಮ್ಮ ವಿದ್ಯಾವಂತ ಯುವಕರು ಬರೀ ಸರ್ಕಾರಿ ನೌಕರಿ ಅಂತ ಆಸೆಗಣ್ಣಿನಿಂದ ಕೂಡದೇ ಸ್ವತಃ ಉದ್ಯೋಗ ಸೃಷ್ಟಿ ಬೇಕು ಎಂದು ಹೇಳಿದರೂ ಸ್ಥಳಿಯವಾಗಿ ಸಿಗುವ ವಸ್ತುಗಳನ್ನು ಬಳಿಕೆ ಮಾಡುವುದರ ಮೂಲಕ ಉದ್ಯೋಗಕ್ಕೆ ಉತ್ತೇಜನ ನೀಡಬೇಕು ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ ಸ್ವಾವಲಂಬಿ ಭಾರತ ಅಭಿಯಾನದ ತಾಲೂಕು ಸಂಯೋಜಕರಾದ ಬಸವರಾಜ ಮೇಲಿನಮನೆ ಮತ್ತು ಲಕ್ಷ್ಮೀಕಾಂತ ದೇವರಗೋನಾಲ,ಕಾಲೇಜಿನ ಉಪನ್ಯಾಸಕರಾದ ಅಂಬ್ರೇಶ ರುಕ್ಮಾಪೂರ ಉಪಸ್ಥಿತರಿದ್ದರು, ಮಹಾವಿದ್ಯಾಲಯದ ಉಪನ್ಯಾಸಕ ಮಂಡಳಿ ಸೇರಿದಂತೆ ಅನೇಕ ಜನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.