ಸುರಪುರ; ಪ್ರಥಮ ಸ್ವಾತಂತ್ಯ್ರ ಸಂಗ್ರಾಮದ ಮುಂಚುಣಿಯ ಮಹಿಳಾ ಹೋರಾಟಗಾರ್ತಿ ಕಿತ್ತೂರು ಸಂಸ್ಥಾನದ ವೀರ ಮಾತೆ ಚೆನ್ನಮಳ ಸಾಹಸ, ಪರಾಕ್ರಮ ಸರ್ವಕಾಲಕ್ಕು ಅವಿಸ್ಮರಣಿಯ ಎಂದು ಬಸವಪ್ರಭು ವಿದ್ಯಾವರ್ಧಕ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನೆಳ್ಳಿ ಹೆಳಿದರು.
ನಗರದ ರಂಗಂಪೇಟೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಇಂದು ಆಯೋಜಿಸಿದ್ದ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದತ್ತು ಪುತ್ರರಿಗೆ ಹಕ್ಕಿಲ್ಲವೆಂಬ ಬ್ರಿಟೀಶರ ಕಾನೂನಿಗೆ ಶಡ್ಡು ಹೋಡೆದು ಅದರ ವಿರುದ್ಧ ಹೋರಾಟಮಾಡಿ ಯಶಸ್ಸು ಕಂಡ ಮಹಿಳಾ ಮೋದಲ ಹೋರಾಟಗರ್ತಿ ಚೆನ್ನಮ್ಮ, ಕರ್ನಾಟಕ ಕಿತ್ತೂರು ಸಂಸ್ಥಾನವನ್ನು ಪ್ರತಿನಿಧಿಸಿ ಅಖಂಡ ಭಾರತದ ಗಮನ ಸೆಳೆದ ಚೆನ್ನಮಳ ಹೋರಾಟ ಇತಿಹಾಸವಾಗಿದೆ, ಬ್ರೀಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಚೆನ್ನಮ್ಮಳ ದೈರ್ಯ, ಸಾಹಸ, ಹೋರಾಟ ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ವೀರೆಶ ಹಳಿಮನಿ, ಪ್ರಮುಖರಾದ ಪ್ರವೀಣ ಜಕಾತಿ, ಮೌನೇಶ ಐನಾಪೂರ, ಸಿದ್ದಪ್ರಸಾದ ಪಾಟೀಲ್, ಸಲಿಂ ಪಾಶಾ ಸೇರಿದಂತೆ ಇತರರಿದ್ದರು.