ಕಲಬುರಗಿ: ಹಿರಿಯ ಜಾನಪದ ತಜ್ಞ, ವಚನ ವಿದ್ವಾಂಸ ಡಾ. ವೀರಣ್ಣ ದಂಡೆ ಅವರು 2022ನೇ ಸಾಲಿನ “ದೇಸಿ ಸನ್ಮಾನ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆ ಹಾಗೂ ಎಂ.ಎಂ. ಪಡಶೆಟ್ಟಿ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಕೊಡ ಮಾಡುವ ಪ್ರಶಸ್ತಿಯು 11 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹಾಗೂ ಡಾ. ವೀರಣ್ಣ ದಂಡೆ ಬದುಕು ಬರಹ (ಡಾ. ಶಿವರಂಜನ ಸತ್ಯಂಪೇಟೆ ವಿರಚಿತ) ಕೃತಿ ಒಳಗೊಂಡಿದೆ.
ನ.6ರಂದು ಬೆಳಗ್ಗೆ 10ಕ್ಕೆ ಸಿಂದಗಿ ಪಟ್ಟಣದ ಮಾಂಗಲ್ಯ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪ್ರಗತಿಪರ ರೈತ ಎಸ್.ಎಸ್. ಪಾಟೀಲ ಕೃತಿ ಬಿಡುಗಡೆಗೊಳಿಸುವರು. ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಬಿಎಲ್‍ಡಿಇ ಸಂಸ್ಥೆ ನಿರ್ದೇಶಕ ಅಶೋಕ ವಾರದ ಅಧ್ಯಕ್ಷತೆ ವಹಿಸುವರು. ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಲೇಖಕರ ಮಾತುಗಳನ್ನು ಆಡಲಿದ್ದಾರೆ. ಡಾ. ಎಂ.ಎಸ್. ಮದಭಾವಿ ಅಭಿನಂದನ ನುಡಗಳನ್ನಾಡಲಿದ್ದಾರೆ.
ಹಿರಿಯ ಚಿಂತಕ ಡಾ. ಆರ್.ಕೆ. ಕುಲಕರ್ಣಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ. ಬಿರಾದಾರ, ಚಲನಚಿತ್ರ ನಿರ್ದೇಶಲ ಸುನಿಲಕುಮಾರ ಸುಧಾಕರ ಅವರು ಉಪಸ್ಥಿತರಿರಲಿದ್ದಾರೆ ಎಂದು ಸಂಚಾಲಕ ಡಾ. ಚನ್ನಪ್ಪ ಕಟ್ಟಿ ತಿಳಿಸಿದ್ದಾರೆ.