ಕಾಶ್ಮೀರ ಕಣಿವೆಯಲ್ಲಿ ಇನ್ಮುಂದೆ ಶಾಂತಿ ಹಾಗೂ ಅಭಿವೃದ್ಧಿಯ ಪರ್ವ: ಅಂಬಾರಾಯ ಅಷ್ಟಗಿ

0
118

ಕಲಬುರಗಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ  ನೀಡುವ ಸಂವಿಧಾನದ 370 ಹಾಗೂ 35(ಅ) ರದ್ಧತಿಯ  ಘೋಷಣೆಯ ಜೊತೆಗೆ ಕಾಶ್ಮೀರವನ್ನು ಎರಡು ಭಾಗ ಮಾಡಲಾಗಿದ್ದು,ಜಮ್ಮು-ಕಾಶ್ಮೀರ ಒಂದು ಭಾಗವಾದರೆ ಇನ್ನೊಂದು ಭಾಗ ಲಡಾಕ್ ಆಗಿದೆ.

ಇದರಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಸಹಿತ ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿಲಾಗಿದೆ. ಲಡಾಖ್ ನ್ನು ವಿಧಾನಸಭೆ ರಹಿತ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಜಮ್ಮು ಕಾಶ್ಮೀರ ಕಣಿವೆಯ ಜನರಿಗೆ ಅನುಕೂಲವಾಗಲಿದೆ ಜೊತೆಗೆ ಕಣಿವೆಯಲ್ಲಿ ಶಾಂತಿ ಸ್ಥಾಪನೆಯಾಗಲಿದೆ ಎಂದರು.

Contact Your\'s Advertisement; 9902492681

ಇದರಿಂದಾಗಿ ಒಂದು ದೇಶದಲ್ಲಿ ಎರಡು ಕಾನೂನಿಗೆ ಕಡಿವಾಣ ಬಿದ್ದಿದೆ.ಇನ್ನೂ ಮುಂದೆ ದೇಶದ ಎಲ್ಲಾ ನಾಗರಿಕರಿಗೆ ಒಂದೇ ಕಾನೂನು ತರುವ ಮೂಲಕ ನರೇಂದ್ರ ಮೋದಿಯವರ ನೇತ್ರತ್ವದ  ಕೇಂದ್ರ ಸರ್ಕಾರದ ಹಾಗೂ ಕೇಂದ್ರ ಗ್ರಹ ಸಚಿವ ಅಮಿತ ಶಾಹ ಅವರ   ನಿಲುವು  ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆಯಲಿದೆ .ಇಂತಹ ಐತಿಹಾಸಿಕ ನಿರ್ಧಾರವನ್ನು ಕಲಬುರಗಿ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಸ್ವಾಗತಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here