370ನೇ ವಿಧಿ ರದ್ದು: ಜೈ ಛತ್ರಪತಿ ಶಿವಾಜಿ ಮಹಾರಾಜ ಸೇನೆಯಿಂದ ವಿಜಯೋತ್ಸವ

0
72

ಯಾದಗಿರಿ: ಪಟೇಲರು ಹೈದ್ರಾಬಾದ ಕರ್ನಾಟಕದ ವಿಮೋಚನೆ ಮಾಡಿದಂತೆ ಗೃಹ ಸಚಿವ ಅಮಿತ್ ಷಾ ಅವರು ಕಾಶ್ಮೀರದ ವಿಮೋಚನೆಗೆ ಶ್ರೀಕಾರ ಹಾಕಿದ್ದಾರೆ ಎಂದು ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ ಅಭಿಪ್ರಾಯಪಟ್ಟರು.

ಕಾಶ್ಮೀರಕ್ಕೆ ಆಘಾತಕಾರಿಯಾಗಿದ್ದ ಕಲಂ ೩೭೦ನೇ ವಿಧಿ ಹಾಗೂ ೩೫ಎ ಗಳನ್ನು ರದ್ದುಗೊಳಿಸುವ ಮಸೂದೆಯನ್ನು ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಷಾ, ಲೋಕಸಭೆಯಲ್ಲಿ ಮಂಡಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿ, ಜೈ ಛತ್ರಪತಿ ಶಿವಾಜಿ ಮಹಾರಾಜ ಯುವ ಸೇನೆ ನಗರದ ಸುಭಾಷ ವೃತ್ತದಲ್ಲಿ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ದೇಶಕ್ಕೆ ೧೯೪೭ ರಲ್ಲಿ ಸ್ವಾತಂತ್ರ್ಯ ಬಂದಿದ್ದರೆ ಹೈದ್ರಾಬಾದ ಕರ್ನಾಟಕಕ್ಕೆ ೧೯೪೮ ರಲ್ಲಿ ಸ್ವಾತಂತ್ರ್ಯ ಬಂತು ಆದರೆ ಜಮ್ಮು ಕಾಶ್ಮೀರಕ್ಕೆ ೨೦೧೯ರಲ್ಲಿ ಸ್ವಾತಂತ್ರ್ಯ ಸಿಕ್ಕಿತು ಎಂದು ಅಭಿಪ್ರಾಯಪಟ್ಟರು. ಇಂದು ದೇಶ ಛಿದ್ರವಾಗುವ ಮತ್ತು ವಿಶೇಷವಾಗಿ ಜಮ್ಮು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಧಾರೆ ಎರೆದುಕೊಡುವ ಹುನ್ನಾರ ಮಾಡಿದ್ದ ನೆಹರು ಅವರ ಕುಟಿಲತೆಯ ಕಾರಣದಿಂದ ದೇಶಕ್ಕೆ ಒಂದು ಕಾನೂನಾದರೆ ಕಾಶ್ಮೀರಕ್ಕೆ ಒಂದು ವಿಶೇಷ ಕಾನೂನು ಮಾಡಿ ಘೋರ ಪಾಪದ ಕಾರ್ಯವನ್ನು ಮಾಡಿದ್ದರು. ಆದರೆ ಇಂದು ಭಾರತ ಸರ್ಕರ ಈ ಪಾತಕವನ್ನು ತೊಳೆಯುವ ನಿಟ್ಟಿನಲ್ಲಿ ಐತಿಹಾಸಿಕ ನಿರ್ಣಯ ಕೈಗೊಂಡು ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮತ್ತು ಭಾರತದ ಕಾನೂನು ಅಲ್ಲಿ ನಡೆಯುತ್ತದೆ ಎಂಬ ಸಂದೇಶವನ್ನು ಜಗತ್ತಿಗೆ ರವಾನಿಸಿದೆ ಎಂದು ಹೇಳಿದರು.

ಒಂದು ವೇಳೆ ಈ ಕಾಯ್ದೆಯನ್ನು ಈಗ ರದ್ದು ಮಾಡದೇ ಇದ್ದರೆ ಮುಂದೆ ತೀವ್ರ ಸಂಕಷ್ಟಕ್ಕೆ ಭಾರತ ಈಡಾಗಿ ಕಾಶ್ಮೀರ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತಿದ್ದವು. ಲೋಕಸಭೆಯಲ್ಲಿ ಅಂಗೀಕಾರವಾದರೂ ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಇದು ಅನುಮೋದನೆಯಾಗಬೇಕೆಂಬ ಎಡಬಿಡಂಗಿ ನೀತಿಯನ್ನು ನೆಹರು ರೂಪಿಸಿದ್ದರು. ಆದರೆ ಈಗ ಕಾಶ್ಮೀರದಲ್ಲಿ ಸರ್ಕಾರ ಇಲ್ಲದೇ ರಾಷ್ಟ್ರಪತಿ ಆಡಳಿತ ಇರುವುದರಿಂದ ಈ ನಿರ್ಣಯವನ್ನು ಲೋಕಸಭೆಯೇ ತೆಗೆದುಕೊಳ್ಳಬೇಕಾದ ಸುವರ್ಣ ಸಂದರ್ಭ ಬಂದೊದಗಿರುವುದು ದೇಶದ ಸೌಭಾಗ್ಯವೇ ಆಗಿದೆ. ದೇಶದ ಜನರ ಭಾವನೆಗಳಿಗೆ ಕೇಂದ್ರ ಸರ್ಕರ ಸ್ಪಂದಿಸಿದೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಜೈ ಛತ್ರ ಪತಿ ಶಿವಾಜಿ ಸೇನೆ ಕಾರ್ಯಕರ್ತರಾದ ವೆಂಕಟೇಶ ಭೀಮನಳ್ಳಿ ಸುಭಾಶ್ಚಂದ್ರ ಬೋಸ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಪಟಾಕಿ ಸಿಡಿಸಿ ಸಿಹಿ ವಿನಿಮಯ ಮಾಡಿಕೊಂಡು ಸಂಭ್ರಮಾಚರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಶಂಕರ ಬಸುನಾಯಕ, ಬನಶಂಕರ ಪೂಜಾರಿ, ಮಲ್ಲು ಮೇದಾರ್, ವೆಂಕಟೇಶ ನಾಟೆಕಾರ್, ಕಾಶಪ್ಪ ಬಸುನಾಯಕ, ಮಲ್ಲಿಕಾರ್ಜುನ ಕುರಕುಂದಿ, ನಿಜಲಿಂಗ ನಾಯ್ಕೋಡಿ,. ಅಶೋಕ ಗುತ್ತೇದಾರ, ಅನಿಲ್, ವೆಂಕಟೇಶ ಆಶನಾಳ, ಜಲ್ಲಪ್ಪ ಮೊಗದಂಪುರ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here