ಯಾದಗಿರಿ : ಬಿಜೆಪಿ ಪಕ್ಷದ ದುರಾಡಳಿತ ಹಾಗೂ ನದಾಫ ಸಮುದಾಯಕಡೆಗಣನೆಗೆ ಬೆಸತ್ತು ಸುರಪುರ ವಿಧಾನಸಭಾ ಕ್ಷೇತ್ರದ ಹುಣಸಗಿಯಲ್ಲಿರುವ ಮುಸ್ಲಿಂ ಉಪ ಪಂಗಡವಾದ ನದಾಫ್ ಸಮುದಾಯವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಸಮುದಾಯದ ಮುಖಂಡರಾದ ಸೈಯದ್ ಕೊಳೂರ, ಹುಸೇನ್ ಸಾಬ್ ಕಕ್ಕಲದೊಡ್ಡಿ, ದಾವಲಸಾಬ ಎಸ್ ಸುರಪುರ, ಕಾಸಿಂಸಾಬ ಎ ಸುರಪುರ,ಲಾಲಸಾಬ ಜಿ ನದಾಫ, ಮಶಾಕ ವಾಲಿಕಾರ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೇಸ್ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಸಿದ್ದಣ್ಣ ಸಾಹು ಮಲಗಲದಿನ್ನಿ,ಶರಣು ದಂಡಿನ,ಆರ್ ಎಂ ರೇವಡಿ,ರಾಜಶೇಖರ ಪಾಟೀಲ,ನಿಂಗಣ್ಣ ಬಾಚಿಮಟ್ಟಿ, ಬಸವರಾಜ ಬಳಿ,ಯಮನಪ್ಪ ದೊರಿ, ಬಾಪುಗೌಡ ಸದಬ,ಮುದಿಗೌಡ ಕುಪ್ಪಿ, ಚಂದ್ರಶೇಖರ ದಂಡಿನ, ಸಿದ್ರಾಮಪ್ಪ ಮುದಗಲ,ಅಹ್ಮದ್ ಪಠಾಣ್,ಸೋಪಿಸಾಬ ಟೋಣ್ಣೂರ, ಸೋಪಿಸಾಬ ಡಿ ಸುರಪುರ, ಕಾಸಿಂಸಾಬ ಚೌದ್ರಿ,ಶಾತಪ್ಪ ಬಾಕ್ಲಿ,ಕರೀಂ ಸಾಬ ಮುನ್ಸಿ, ಬಂದಗಿಸಾಬ ನದಾಫ,ಬಾಬು ಹವಾಲ್ದಾರ್,ರವಿ ಮಲಗಲದಿನ್ನಿ, ರಂಜಾನ ಖುರೇಷಿ,ಮತ್ತು ಕಾರ್ಯಕರ್ತರು ಇತರರು ಇದ್ದರು.