ಜೇವರ್ಗಿ: ಕಾನೂನು ಸೇವಾ ಸಮಿತಿ ಹಾಗೂ ವಕೀಲ ಸಂಘ ಸೇರಿದಂತೆ ವಿವಿಧ ಇಲಾಖೆಗಳ ಆಶ್ರಯದಲ್ಲಿ ಇಲ್ಲಿನ ಶ್ರೀ ನರೇಂದ್ರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಮಕ್ಕಳ ದಿನಾಚರಣೆಯದಿನದಂದು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸರಕಾರಿ ಸಹಾಯಕ ಅಭಿಯೋಜಕರಾದ ನಿಮಗೆ ನಾಗವೇಣಿ ಧನ್ನಾ ಮಾತನಾಡುತ್ತಾ ಉಚಿತ ಮತ್ತು ಕಡ್ಡಾಯ ಶಿಕ್ಷಣ ಯೋಜನೆ ಅಡಿಯಲ್ಲಿ ಪ್ರತಿ ಮಗು ಶಿಕ್ಷಣವನ್ನು ಪಡೆದುಕೊಳ್ಳಬೇಕು .ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ವ್ಯಾಪಕ ಪ್ರಚಾರ ಪ್ರಚಾರ ಕಾರ್ಯ ನಡೆಯಬೇಕಾಗಿದೆ ,ಅಲ್ಲದೆ ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಕಟ್ಟುನಿಟ್ಟಾದ ಕಾನೂನುಗಳಿದ್ದು ಇವುಗಳನ್ನು ಎಲ್ಲರೂ ಪಾಲಿಸಬೇಕು. ಆಗ ಮಾತ್ರ ಭಾರತದ ಭವ್ಯ ಪ್ರಜೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಕೀಲರಾದ ಬಾಶಾ ಪಟೇಲ್ ಯಾಳವಾರ ಮಾತನಾಡಿ ಕಾನೂನು ಸೇವೆಗಳನ್ನು ಪಡೆದುಕೊಳ್ಳಲು ಎಲ್ಲರೂ ಮುಂದೆ ಬರಬೇಕು ಹಾಗೂ ಕಾನೂನು ಎಲ್ಲರಿಗೂ ಸಮಾನವಾದದ್ದು ಎಂದು ಹೇಳಿದರು.
ಅಪ್ಪ ಸಾಹೇಬ್ ಕೊಳ್ಕೂರ್ ವಕೀಲರು ಮಾತನಾಡಿ ಪ್ರತಿಯೊಬ್ಬರು ಉತ್ತಮವಾದ ಶಿಕ್ಷಣವನ್ನು ಪಡೆದುಕೊಂಡು ಕಾನೂನು ತೊಡಕುಗಳನ್ನು ಅರಿತು ಬವಿಷ್ಯತ್ತಿನ ಸವಾಲುಗಳನ್ನು ಎದುರಿಸಬೇಕೆಂದು ಹೇಳಿದರು.
ವಕೀಲರಾದ ರಾಜು ಮುದ್ದಡಗಿ ಸೇರಿದಂತೆ ಸ್ವಾಮಿ ನರೇಂದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲಿಂಗನಗೌಡ ಪೋ,ಪಾಟೀಲ್ ಯಡ್ರಾಮಿ ಕಾರ್ಯದರ್ಶಿ , ಬಾಪೂರಾವ್ ಪಾಗಾ
ಸದಸ್ಯರು.ಶಿವಾನಂದ ಘಂಟಿಮಠ ಎಂ ಬಿ ಪಾಟೀಲ್ ಸಹ ಕಾರ್ಯದರ್ಶಿ ಪಂಪಣ್ಣ ಗೌಡ ಪಾಟೀಲ್, ಆಡಳಿತಾಧಿಕಾರಿ ಅಬ್ದುಲ್ ಕರೀಂ ಕೂಡಿ ಆಂಗ್ಲ ಮಾದ್ಯಮ ಶಾಲೆಯ, ವಿಕ್ಟೋರಿಸ್ ಥೋಪಿಲ್. ಕನ್ನಡ ಮಾಧ್ಯಮ ಪ್ರೌಢಶಾಲೆಯ ಮಡಿವಾಳಪ್ಪ ಗಂವ್ಹಾರ, ಪ್ರಾಥಮಿಕ ಶಾಲೆಯ ಬಸಯ್ಯ ಹಿರೇಮಠ್ ದೈಹಿಕ ಶಿಕ್ಷಕರಾದ ಶಿವರಾಯ ಹಡಪದ್, ಶಿವಕುಮಾರ್ ನರೊಣಿ, ಸಾಹೇಬ್ ಗೌಡ ಮಾಲಿಪಾಟೀಲ್, ಜೆ.ಬಿ ದೊಡ್ಡಮನಿ, ಅಂಬರೀಶ್ ವಾಲಿ ಹಾಗೂ ಶಾಲೆಯ ಮಕ್ಕಳು ಹಾಗೂ ಇಯರ ಶಿಕ್ಷಕರು ಭಾಗವಹಿಸಿದ್ದರು.