ಕಲಬುರಗಿ: ಆಸ್ತಿ ವಿಚಾರಕ್ಕೆ ಮಾರಕಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಮಾಡಿದ ಘಟನೆ ಕಾಳಗಿ ಪೊಲೀಸ್ ಠಾಣೆ ವ್ಯಾಪ್ತಿಯ ಅರಣಕಲ್ ಕಿಣ್ಣಿ ತಾಂಡದಲ್ಲಿ ನಡೆದಿದೆ.
ಜಿಲ್ಲೆಯ ಕಾಳಗಿ ತಾಲೂಕಿನ ಅರಣಕಲ್ ಕಿಣ್ಣಿ ತಾಂಡದ ನಿವಾಸಿ 23 ವರ್ಷದ ಆನಂದ ಜೀವಲು ಕೊಲೆಯಾದ ಯುವಕ. ಮಂಗಳವಾರ ರಾತ್ರಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ವಿನಾಯಕ್, ಪಿಎಸ್ಐ ಹುಲಿಯಪ್ಪ ಗೊಂಡ್ ಕಾಳಗಿ ಮಾಡಬೂಳ್ ಪಿಎಸ್ಐ ವಿಜಯ್ ಕುಮಾರ್ ರಾಠೋಡ್ ಮತ್ತು ಚಿಂತನ್ ಶುಭಾಶ ರಾಠೋಡ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಕಾಳಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ನಿನ್ನೆ ಮಧ್ಯಾಹ್ನ ಕಲಬುರಗಿ ನಗರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿ ಓರ್ವನನ್ನು ಹಾಡಹಗಲ್ಲೇ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ಜರುಗಿತು.