ಕಲಬುರಗಿ: ಮನುಷ್ಯ ಮನುಷ್ಯರ ನಡುವೆ ಭಾವನೆಗಳನ್ನು ಹಂಚಿಕೊಳ್ಳಲು ಇರುವ ಏಕೈಕ ಮಾರ್ಗ ಎಂದರೆ ಭಾಷೆ. ಎಲ್ಲರೂ ಮಾತೃ ಭಾಷೆಯನ್ನು ಪ್ರೀತಿಸಿ, ಅನ್ಯಭಾಷೆಯನ್ನು ಗೌರವಿಸಬೇಕು ಎಂದು ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತ ರವಿ ಯಾದವ ತಿಳಿಸಿದರು.
ನಗರದ ಆಳಂದ ರಸ್ತೆಯಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಕ್ಷೇತ್ರೀಯ ಕಾರ್ಯಾಲಯದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ವಿಜಯವಾಣಿ ಸ್ಥಾನಿಕ ಸಂಪಾದಕ ಸದಾನಂದ ಜೋಶಿ ಹಾಗೂ ಲೇಖಕ ಡಾ. ಕೆ. ಗಿರಿಮಲ್ಲ ಅವರು ಕನ್ನಡಾಂಬೆ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸಿವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಭಾಗಿಯ ಮೇಲ್ವಿಚಾರಕ ಬಸವರಾಜ ಹೆಳವರ ಯಾಳಗಿ ನಿರೂಪಿಸಿದರು, ಕೇಶವರಾವ ಕುಲಕರ್ಣಿ ಸ್ವಾಗತಿಸಿದರು, ಕಲ್ಪನಾ ಮಧಬಾವಿ ಪ್ರಾರ್ಥಿಸಿದರು ಹಾಗೂ ಪ್ರಶಾಂತ ತಮದಡ್ಡಿ ವಂದಿಸಿದರು. ಮದನ ಕುಲಕರ್ಣಿ ಹಾಗೂ ಪ್ರಶಾಂತ ಸುಮಧುರ ಕನ್ನಡ ಗೀತೆಗಳನ್ನು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಜಿ.ಎಮ್ ಅಪ್ಸರ್, ಶಿವರಾಜ, ರಾಜಕುಮಾರ, ಮನೋಜಕುಮಾರ, ಪ್ರಶಾಂತ ಇಂಗಳೇಶ್ವರ, ಶಿವಶರಣಪ್ಪ ಶಿವಕೇರಿ, ಗೋಪಿಕೃಷ್ಣ, ಕಿರಣ, ರಾವುಪ್ ಪಟೇಲ ಹಾಗೂ ಇನ್ನಿತರ ಸಿಬ್ಬಂದಿಗಳು ಭಾಗವಹಿಸಿದ್ದರು.