ಕಲಬುರಗಿ: ಇಲ್ಲಿನ ಯದುಲ್ಲಾಹ ಕಾಲೋನಿಯಲ್ಲಿ ಆಕ್ರಮ ಜಿಂಕೆ ಮತ್ತು ನವಿಲು ಮಾಂಸ ಮಾರಾಟ ಮಾಡುತ್ತಿದ್ದ ಅಡೆಯ ಮೇಲೆ ದಾಳಿ ನಡೆಸಿ ಮೂವರು ಆರೋಪಿಗಳು ಸೇರಿ ನಗರದು ವಶ ಪಡೆಸಿಕೊಂಡಿರುವ ಘಟನೆ ರೋಜಾ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸೈಯದ್ ನಜಮೋದ್ದಿನ್ ನೂರುದ್ದೀನ್, ಮೊಹಮ್ಮದ್ ಅಲ್ತಾಫ್ ಅಬ್ದುಲ್ ಅಜೀಜ್, ಸಮೀ ಜುನೈದಿ ಬಂಧಿತ ಆರೋಪಿಗಳು, ಯದುಲ್ಲಾಹ ಕಾಲೋನಿಯಲ್ಲಿ ಅಕ್ರಮವಾಗಿ ಜಿಂಕೆ ಮತ್ತು ನವಿಲು ಭೇಟೆಯಾಡಿ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸಿಐಡಿ, ಸಂಚಾರಿ ಪೊಲೀಸರು, ರೋಜಾ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಜಿಂಕೆ ಮಾಂಸದ ತುಂಡು ಮತ್ತು 20 ಕಾಲುಗಳು, ರಫೈಲ್ ಕೇಸ್, ಒಂದು ಏರಗನ್, 28 ಜೀವಂತ ಗುಂಡು, 114 ಖಾಳಿ ಕಾಡತೋಸ್, ಮೃತ ನವಿಲು, ಕೃತ್ಯಕ್ಕೆ ಬಳಸಿದ ಬುಲೇರೋ ಕಾರು, ಚಾಕು, ಎರಡು ಮೊಬೈಲ್ ಹಾಗೂ 17718 ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.