ವಿಕಲಚೇತನರ ಸಾಧನ ಸಲಕರಣೆಗಳ ಮಾಪನ ಶಿಬಿರ

0
11

ಸುರಪುರ: ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಿಯಲ್ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಅಜೀಂ ಪ್ರೇಮಜಿ ಫೌಂಡೇಷನ್, ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಮತ್ತು ಬಿ.ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಸಂಯುಕ್ರ ಆಶ್ರಯದಲ್ಲಿ ವಿಕಲಚೇತನರು ಬಳಸುವ ಸಾಧನೆ ಸಲಕರಣೆಗಳ ಮಾಪನ ಶಿಬಿರವನ್ನು ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಮಾತನಾಡಿ, ವಿಕಲಚೇತನರ ಸಬಲೀಕರಣಕ್ಕಾಗಿ ವೈವಿಧ್ಯಮಯ ಸೇವೆ ಸಲ್ಲಿಸುತ್ತಿರುವ ಎ.ಪಿ.ಡಿ. ಸಂಸ್ಥೆಯವರ ಕಾರ್ಯ ಶ್ಲಾಘನೀಯವಾದದ್ದು ಸಮಾಜದಲ್ಲಿ ವಿಕಲಚೇತನರ ಬಗ್ಗೆ ಅಸಡ್ಡೆತನ ತೋರಿಸಬಾರದು ವಿಕಲಚೇತನರ ಸೇವೆ ದೇವರ ಸೇವೆ ಎಂದರು.

Contact Your\'s Advertisement; 9902492681

ಅಧ್ಯಕ್ಷತೆ ವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಮಾತನಾಡಿ ವಿಕಲಚೇತನರ ಸೌಲಭ್ಯಗಳನ್ನು ಒದಗಿಸುವಲ್ಲಿ ಆರೋಗ್ಯ ಇಲಾಖೆ ಜೊತೆಗೂಡಿ ಕೆಲಸ ನಿರ್ವಹಿಸುತ್ತಿರುವ ಎಪಿಡಿ ಸಂಸ್ಥೆ ಕಾರ್ಯ ಮೆಚ್ಚುವಂತಹದ್ದು ಮುಂದಿನ ದಿನಗಳಲ್ಲಿ ಅವಶ್ಯವಿರುವ ಉಪಕರಣಗಳನ್ನು ಕೊಟ್ಟು ಸೂಕ್ತ ಮಾರ್ಗದರ್ಶನ ನೀಡುವುದು ಎಂದು ಅಭಿಪ್ರಾಯಪಟ್ಟರು.

ಎಪಿಡಿ ಸಂಸ್ಥೆಯ ಮಧು ಕೇಶವ್,ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ್ ನಿಂಬೂರ, ಎಪಿಫ್ ಸಂಪನ್ಮೂಲ ವ್ಯಕ್ತಿ ಅನ್ವರ್ ಜಮಾದಾರ ಮಾತನಾಡಿದರು, ಮುಖಂಡರಾದ ರಾಜಾ ಪಾಮನಾಯಕ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ ಸಜ್ಜನ್, ಬಸವರಾಜ ಜಮದ್ರಖಾನಿ, ವೆಂಕಟೇಶ ಬೈರಿಮಡ್ಡಿ,ಓಂ ಪ್ರಕಾಶ ಡೋಣೂರು, ವಿಕಲಚೇತನರ ಸಂಘದ ಅಧ್ಯಕ್ಷ ಮಾಳಪ್ಪ ಪೂಜಾರಿ ಉಪಸ್ಥಿತರಿದ್ದರು.

ಶಿಬಿರದಲ್ಲಿ ದೈಹಿಕ ಅಂಗವಿಕಲ, ಮೆದುಳು ವಾತ ಬಹು ಅಂಗವೈಕಲ್ಯ, ಮತ್ತು ಶ್ರವಣ ದೋಷ, ಮಸ್ಕುಲರ್ ಡಿಸ್ಟ್ರೋಫಿ ಬೆನ್ನು ಹುರಿ ಗಾಂiÀ, ದೃಷ್ಟಿ ಹೀನತೆಗೆ ಸಂಬಂಧಿಸಿದಂತಹ ಸುರಪುರ ತಾಲೂಕಿನ ವಿವಿಧ ಭಾಗಗಳಿಂದ 400ಕ್ಕೂ ಹೆಚ್ಚು ಜನರನ್ನು ಎಬಿಡಿ ಸಂಸ್ಥೆಯ ವೈದ್ಯಕೀಯ ತಂಡದವರು ವೈದ್ಯಕೀಯ ತಪಾಸಣೆ ಕೈಗೊಂಡರು, ಮಹಾದೇವಪ್ಪ ಗುತ್ತೇದಾರ ನಿರೂಪಿಸಿದರು ರಾಜಶೇಖರ ದೇಸಾಯಿ ಸ್ವಾಗತಿಸಿದರು ಸುನೀಲ್‍ಕುಮಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here