ಸುರಪುರ: ಸೂಗುರೇಶ್ವರ ದೇವಸ್ಥಾನದಲ್ಲಿ ಸಂಗೀತ ದರ್ಬಾರ

0
13

ಸುರಪುರ: ನಗರದ ಶ್ರೀ ಸೂಗುರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಸಂಗೀತ ದರ್ಬಾರ ಕಾರ್ಯಕ್ರಮ ನಡೆಸಲಾಯಿತು.ಕಾರ್ಯಕ್ರಮ ಉದ್ಘಾಡಿಸಿದ ಸುರಪುರ ಅರಸು ಮನೆತನದ ವಂಶಸ್ಥ ರಾಜಾ ಲಕ್ಷ್ಮೀನಾರಾಯಣ ನಾಯಕ ಮಾತನಾಡಿ, ಸಂಗೀತವನ್ನು ಆಲಿಸುವುದರಿಂದ ಮನಸ್ಸು ಏಕಾಗ್ರತೆ ಹೊಂದುತ್ತದೆ ಸುರಪುರ ಸಂಸ್ಥಾನದ ಪ್ರದೇಶ ಸಂಗೀತ ಕಲೆಗಳ ತವರೂರಾಗಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣಬಸಪ್ಪ ಯಾಳವಾರ ಮಾತನಾಡಿ ಸಪ್ತಸ್ವರಗಳ ಸಂಗೀತಕ್ಕೆ ರೋಗವನ್ನು ಗುಣಪಡಿಸುವ ಸಾಮರ್ಥ್ಯವಿದೆ ಎಂಬುದು ವೈಜ್ಞಾನಿಕ ಸತ್ಯವಾಗಿದೆ. 54 ವರ್ಷಗಳಿಂದ ಸಂಗೀತ ದರ್ಬಾರ ನಡೆಸಿಕೊಂಡು ಬಂದಿರುವುದು ಗಮನಾರ್ಹ ಸಂಗತಿಯಾಗಿದೆ ಎಂದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಆಗಮಸಿದ್ದ ಪಿ.ಐ. ಕೃಷ್ಣ ಸುಬೇದಾರ ಅವರು ಸಂಗೀತಗಾರರಿಗೆ ಹಿಂದಿನ ಕಾಲದಲ್ಲಿ ರಾಜಶ್ರಯವಿತ್ತು ಇಂದು ಮಠ ಮಂದಿರಗಳು ಕಲಾವಿದರಿಗೆ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪ್ರೋತ್ಸಾಹಿಸುತ್ತರುವುದು ಶ್ಲಾಘನೀಯವಾದುದು ಎಂದರು.

ದೂರದರ್ಶನ ಕಲಾವಿದ ಬಸವರಾಜ ಬಂಟನೂರ ರವರು ಮೂರು ರಾಗಗಳಿಂದ ಪ್ರಾರಂಭಗೊಂಡ ಸಂಗೀತವು ಸಪ್ತಸ್ವರಗಳಿಗೆ ಸಾಗಿಬಂದು ಇಂದು ಜನಮಾನಸದಲ್ಲಿ ಉಳಿದಿದೆ ಎಂದರು.

ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಕೊಟ್ರಯ್ಯಸ್ವಾಮಿ ಬಳುಂಡಗಿಮಠ ಸಾನಿದ್ಯ ವಹಿಸಿದ್ದರು. ದೇವಸ್ಥಾನದ ಸ್ಥಾಪಕ ವಂಶಜರಾದ ಸುನೀಲ ಸರಪಟ್ಟಣಶಟ್ಟರು ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ದೂರದರ್ಶನ ಕಲಾವಿದ ಆಮಯ್ಯಸ್ವಾಮಿ ಹಿರೇಮಠ. ಶಿವಶರಣಯ್ಯಸ್ವಾಮಿ ಬಳುಂಡಗಿಮಠ ಉಪಸ್ಥಿತರಿದ್ದರು.

ಕಲಾವಿದರಾದ ನರಸಿಂಹ ಬಂಡಿ. ಪ್ರಾಣೇಶರಾವ ಕುಲಕರ್ಣಿ. ಉಮೇಶ ಯಾದವ. ಶಂಕರ ಆಲಗೂರ. ಮಹಾಂತೇಶ ಶಹಪೂರಕರ ರವರಿಗೆ “ಪ್ರಭುಚನ್ನಕಿರಣ” ಪ್ರಶಸ್ತಿಯನ್ನು ಪ್ರಧಾನಮಾಡಲಾಯಿತು.ಶಿಕ್ಷಕರಾದ ಹೆಚ್.ರಾಠೋಡ ನಿರೂಪಣೆ ಮಾಡಿದರು. ಚಂದ್ರಶೇಖರ್ ಆಜಾದ ಸ್ವಾಗತಿಸಿದರು. ವಕೀಲರಾದ ಮಲ್ಲಿಕಾರ್ಜುನಯ್ಯಸ್ವಾಮಿ ಹಿರೇಮಠ ವಂದಿಸಿದರು.

ಶಿವಶರಣಯ್ಯಸ್ವಾಮಿ ಬಳುಂಡಗಿಮಠ ಮತ್ತು ಈಶ್ವರ ಬಡಿಗೇರ ಪ್ರಾರ್ಥಿಸಿದರು.ಬೆಳಗಿನವರೆಗೆ ಜರುಗಿದ ಸಂಗೀತ ದರ್ಬಾರ ಕಾರ್ಯಕ್ರಮದಲ್ಲಿ ಸಂಗೀತಕಲಾವಿದ ಬಸವರಾಜ ಬಂಟನೂರ ಆಮಯ್ಯಸ್ವಾಮಿ ಹಿರೆಮಠ ರಾಜನಕೋಳೂರ ವಿಠ್ಠಲಸಿಂಗ ಹಜೇರಿ ಮಲ್ಲಯ್ಯಸ್ವಾಮಿ ಕೆಂಭಾವಿ ರವಿಕುಮಾರ ಆಳಂದ ಶಿಲಿಂಗಯ್ಯಸ್ವಾಮಿ ಬಳುಂಡಗಿಮಠ ದಾಸವಾಣಿ ಕಲಾವಿದ ಶರಣಪ್ಪ ಕಮ್ಮಾರ ಮಹೇಶ ಬಂಟನೂರ ನರಸಿಂಹ ಬಂಡಿ ಪ್ರಾಣೇಶರಾವ ಕುಲಕರ್ಣಿ ಹೆಮನೂರಪ್ಪ ಹೆಗ್ಗನದೊಡ್ಡಿ ಮೋಹನರಾವ ಮಾಳದಕರ ಜಗಧೀಶ ಮಾನು ಶಿವಶಂಕರ ಆಲೂರ ಬಂದೇನವಾಜ ಏವೂರ ಮಾರುತಿ ಶಾಂತಪೂರ ಸೋಮನಾಥ ಯಾಳಗಿ ಪದ್ಮಾಕ್ಷಿ ಶಹಪೂರಕರ ಪ್ರಿತಾಂಕಾ ವಿಶ್ವಕರ್ಮ ದೀಪಿಕಾ ಸ್ಥಾವರಮಠ ಭೂಮಿಕಾ ಸ್ಥಾವರಮಠ ಸೂಗಮ್ಮ ಕೊಂಗಂಡಿ ವಿಜಯಲಕ್ಷ್ಮೀ ಯಾದವ. ಸುಮಿತ್ರಾ ಕೆಡಚನವರ. ಅಕ್ಷರಾ ಮಠ. ರವಿಕುಮಾರ ಅಳಂದ ಅನೀಲಸ್ವಾಮಿ ಕೊಟ್ರಯ್ಯಮಠ ಜಗಧೀಶ ಪತ್ತಾರ ರಂಗಂಪೇಠ. ಗುರುನಾಥರಡ್ಡಿ ಶೀಲವಂತ. ಮುಂತಾದ ಕಲಾವಿದರ

ಗೀತಗಾಯನಕ್ಕೆ ಯಮುನೇಶ ಯಾಳಗಿ ಕೆಂಭಾವಿ. ಈಶ್ವರ ಬಡಿಗೇರ ಹುಣಸಗಿ. ರಾಜಶೇಖರ ಗೆಜ್ಜಿ. ಸುರೇಶ ಅಂಬುರೆ. ಉಮೇಶ್ ಯಾದವ. ರಮೇಶ ಕುಲಕರ್ಣಿ. ಲಕ್ಷ್ಮಣ ಆದೋನಿ. ಮಹಾಂತೇಶ ಶಹಪೂರಕರ. ಮನೋಜ ವಿಶ್ವಕರ್ಮ. ರವರು ತಬಲಾ ಸಾಥ್ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here