ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸಾಂಸ್ಕøತಿಕ ನೀತಿ ಜಾರಿ ಮಾಡಬೇಕು ಅಂದಾಗ ಮಾತ್ರ ಈ ಭಾಗದ ಕಲಾವಿದರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದು ಶ್ರೀ ಹನುಮಾನ ಹಾಗೂ ಶ್ರೀ ದಾನಮ್ಮದೇವಿ ದೇವಸ್ಥಾನ ಕಮಿಟಿ ಅಧ್ಯಕ್ಷ ಸಿದ್ದಲಿಂಗಯ್ಯ ಸ್ವಾಮಿ ವಸ್ತ್ರದ ಹೇಳಿದರು.
ಇಲ್ಲಿನ ಆದರ್ಶ ನಗರದ ಶ್ರೀ ಹನುಮಾನ ಹಾಗೂ ದಾನಮ್ಮದೇವಿ ದೇವಸ್ಥಾನ ಆವರಣದಲ್ಲಿ ಬೋಧಿ ಧಮ್ಮ ಕಲಾ ಮತ್ತು ಸಾಂಸ್ಕøತಿಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಸುಗಮ ಸಂಗೀತ ಸಂಭ್ರಮ-ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಬದುಕಿಗೆ ಸಂಗೀತ ಮತ್ತು ಮನೋರಂಜನೆ ಆವಿಭಾಜ್ಯ ಅಂಗವಾಗಬೇಕು. ಸಂಗೀತ ಆಲಿಸುವುದರಿಂದ ಸದೃಢ ಮನಸ್ಸು ಹೊಂದಲು ಸಾಧ್ಯ ಎಂದು ಹೇಳಿದರು.
ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಮಿಟಿಯ ಉಪಾಧ್ಯಕ್ಷ ಶರಣು ಸೀಗಿ, ಕಾರ್ಯದರ್ಶಿ ಈರಯ್ಯ ಎನ್. ಸ್ವಾಮಿ, ಜಂಟಿ ಕಾರ್ಯದರ್ಶಿ ಶಿವಬಸಯ್ಯ ಮಠಪತಿ, ಖಜಾಂಚಿ ಬಸವರಾಜ ಸ್ವಾಮಿ, ಅಧ್ಯಕ್ಷ ಶರಣಪ್ಪ ಗಂವ್ಹಾರ ಹಾಜರಿದ್ದರು.
ಆಕಾಶವಾಣಿ ಕಲಾವಿದರಾದ ಸೂರ್ಯಕಾಂತ ಡುಮ್ಮಾ ಅವರಿಂದ ಸುಗಮ ಸಂಗೀತ, ಚೇತನ ಬಿ ಮತ್ತು ಅವರ ತಂಡದಿಂದ ಜಾನಪದ ಗೀತೆ, ಆಕಾಶವಾಣಿ ಕಲಾವಿದ ಬಾಬುರಾವ ತೊಂಟಿ ಅವರಿಂದ ತತ್ವಪದ, ಚನ್ನಮಲ್ಲಪ್ಪ ಜಂಗಳೆ ತಂಡದವರಿಂದ ದಾಸವಾಣಿ, ಮಲ್ಲಿನಾಥ ಎಸ್. ವಜಾಪುರ ತಂಡದವರಿಂದ ವಚನ ಗಾಯನ ನಡೆಸಿಕೊಟ್ಟರು.
ಬಸವರಾಜ ಬೀಳಗಿ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಸುನೀಲಕುಮಾರ ಇಟಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಪುತ್ರ ಹಾರಕೂಡೆ ವಂದಿಸಿದರು. ಓಂಪ್ರಕಾಶ ವಸ್ತ್ರದ ಬಡಾವಣೆ, ದಾನಮ್ಮದೇವಿ ಭಕ್ತರು, ಬಡಾವಣೆಯ ನಿವಾಸಿಗಳು ಭಾಗವಹಿಸಿದ್ದರು.