ಚಿಂಚೋಳಿ: ಸಾರಿಗೆ ಇಲಾಖೆ ಜನರಿಗೆ ಪ್ರಯಾಣಿಸಲು ಅನೂಕೂಲವಾಗಲಿ ಎಂಬ ಉದ್ದೇಶದಿಂದ ಪ್ರಾರಂಭಿಸಿದ್ದಾರೆ. ಆದರೆ ಚಿಂಚೋಳಿ ತಾಲೂಕಿನಲ್ಲಿ ಬಸ್ ಗಳು ಸರಿಯಾದ ಸಮಯಕ್ಕೆ ಓಡಿಸದ ಕಾರಣ ಜನರು ಹಾಗೂ ಪ್ರಯಾಣಿಕರು ಪರದಾಡುತಿದ್ದಾರೆ.
ದಿನನಿತ್ಯ ಚಿಂಚೋಳಿ ಯಿಂದ ಕಲಬುರಗಿಗೆ ನೂರಾರು ಜನ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ನೌಕರರು, ರೈತರು, ರೋಗಿಗಳು ಚಿಕಿತ್ಸೆಗೆ ಕಲಬುರಗಿಗೆ ಹೋಗುತ್ತಾರೆ ಆದರೆ ಚಿಂಚೋಳಿಯಿಂದ ಬೆಳಿಗ್ಗೆ 7 ಗಂಟೆಗೆ ಬಸ್ ಹೋದರೆ ನಂತರ 9ಗಂಟೆಯವರೆಗೆ ಒಂದು ಬಸ್ ಕಲಬುರಗಿಗೆ ಹೋಗುವುದಿಲ್ಲ ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತಿದೆ.
ಚಿಂಚೋಳಿ ಮತಕ್ಷೇತ್ರದ ಚಿಂಚೋಳಿ ಹಾಗೂ ಕಾಳಗಿ ಬಸ್ ಘಟಕಗಳಿಗೆ ಹೆಚ್ಚಿನ ಬಸ್ ಗಳು ಬೀಡುಗಡೆ ಮಾಡಬೇಕು ಖಾಲಿ ಇರುವ ಚಾಲಕರ ಹಾಗೂ ನಿರ್ವಹಕರ ಹುದ್ದೆ ಬರ್ತಿ ಮಾಡಬೇಕು ಚಿಂಚೋಳಿ ಯಿಂದ ಪ್ರತಿ 15 ನಿಮಿಷಕ್ಕೆ ಒಂದು ಬಸ್ ಕಲಬುರಗಿ ಗೆ ಒಡಿಸಬೇಕು ಹಾಗೂ ಚಿಂಚೋಳಿ ಹಾಗೂ ಖರ್ಗೆ ವೃತದಿಂದ ಹೆಚ್ಚಿನ 2 ಬಸ್ ಗಳು ಓಡಿಸಬೇಕು.
ಕೂಡಲೇ ಬೆಳಿಗ್ಗೆ 7 ಗಂಟೆ ಹಾಗೂ 8 ಗಂಟೆಗೆ ಚಿಂಚೋಳಿ ಯಿಂದ ಕಲಬುರಗಿಗೆ ತಡೆರಹಿತ ಬಸ ಓಡಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಆದರೆ ಸಂಭದ್ದ ಪಟ್ಟ ಅಧಿಕಾರಿಗಳು ಮಾತ್ರ ಜಾಣಕುರುಡು ನೀತಿ ಅನುಸರಿಸುತ್ತಿದ್ದಾರೆ.